7 ವರ್ಷದಲ್ಲಿ 14 ಬಾರಿ ಅಬಾರ್ಷನ್‌, ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

By Sharath Sharma  |  First Published Jul 15, 2022, 4:06 PM IST

ಏಳು ವರ್ಷಗಳಿಂದ ಗಂಡನನ್ನು ಬಿಟ್ಟು ಪ್ರಿಯತಮನೊಂದಿಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ಲಿ ಇದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 14 ಬಾರಿ ಆಕೆಗೆ ಬಾಯ್‌ಫ್ರೆಂಡ್‌ ಅಬಾರ್ಷನ್‌ ಮಾಡಿಸಿದ್ದನಂತೆ. ಮದುವೆಯಾಗುವುದಾಗಿ ಹೇಳುತ್ತಿದ್ದವ ಇತ್ತೀಚೆಗೆ ಮದುವೆಯೂ ಆಗುವುದಿಲ್ಲ ಎಂದಿದ್ದಾನೆ, ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 


ನವದೆಹಲಿ: 14 ಬಾರಿ ಅಬಾರ್ಷನ್‌ಗೆ ಒಳಗಾದ 33 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೆಳೆಯನೊಂದಿಗೆ ಕಳೆದ ಏಳು ವರ್ಷಗಳಿಂದ ಈಕೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಳು. ಅದಕ್ಕೂ ಮುಂಚೆ ಮದುವೆಯಾಗಿದ್ದ ಈಕೆ ವಿಚ್ಚೇದನವನ್ನೂ ಪಡೆಯದೆ ಗಂಡನನ್ನು ಬಿಟ್ಟು ಪ್ರಿಯತಮನೊಂದಿಗೆ ಓಡಿ ಬಂದಿದ್ದಳು. ಗೆಳೆಯ ಮದುವೆಯಾಗುವುದಾಗಿ ನಂಬಿಸಿ ಏಳು ವರ್ಷಗಳಿಂದ ಜೊತೆಯಲ್ಲೇ ಇದ್ದ. ಪ್ರತಿ ವರ್ಷ ಕಡಿಮೆ ಎಂದರೂ ಎರಡು ಬಾರಿ ಆಕೆ ಗರ್ಭಿಣಿಯಾಗುತ್ತಿದ್ದಳು ಮತ್ತು ಆತ ಗರ್ಭಪಾತ ಮಾಡಿಸುತ್ತಿದ್ದ. ಇದೇ ರೀತಿ ಹಲವು ವರ್ಷ ನಡೆಯುತ್ತಲೇ ಇದ್ದವು. ಈಗ ಈ ನೋವನ್ನು ಸಹಿಸಲಾರದೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ನವದೆಹಲಿ ಪೊಲೀಸರಿಗೆ ಮಹಿಳೆಯ ಡೆತ್‌ ನೋಟ್‌ ದೊರೆತಿದ್ದು ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಎಂಬುದು ಬೆಳಕಿಗೆ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಗರ್ಭಿಣಿಯಾಗಿಸಿ ಅಬಾರ್ಷನ್‌ ಮಾಡಿ ಕಡೆಗೆ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಇದನಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಹಿಳೆ ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ. 

Tap to resize

Latest Videos

ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆಯಲ್ಲಿ ಮಹಿಳೆಯೊಂದಿಗೆ ಇದ್ದ ಟೆಕ್ಕಿ ಒಬ್ಬನ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆತ ದೆಹಲಿಯ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅವನನ್ನು ಬಂಧಿಸಲಾಗಿದೆ. ಮಹಿಳೆ ಮೃತದೇಹ ಮನೆಯೊಳಗೆ ನೇಣು ಹಾಕಿದ ಸ್ಥಿತಿಯಲ್ಲಿ ಸಿಕ್ಕಿದ್ದು, ಆಕೆಯ ಮೊಬೈಲ್‌ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಆಕೆಗೆ ಮದುವೆಯಾಗಿದ್ದು ಗಂಡನನ್ನು ಬಿಟ್ಟು ಪ್ರೇಮಿಯೊಂದಿಗೆ ಕಳೆದ ಏಳು ವರ್ಷದಿಂದ ಇದ್ದಳು ಎಂಬ ಮಾಹಿತಿ ಸಿಕ್ಕಿದೆ. 

ಇದನ್ನೂ ಓದಿ: Crime News: ಮಗಳನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಕೊಂದ ತಂದೆ

ಒಬ್ಬ ವ್ಯಕ್ತಿ ಗೆಳತಿಯೊಂದಿಗೆ ತನ್ನ ಪ್ರಯಾಣಿಸಿರುವುದನ್ನು ಮರೆಮಾಚಲು ಹೋಗಿ ಸಂಕಷ್ಟಕ್ಕೀಡಾಗಿದ್ದಾನೆ. ಆತ ತನ್ನ ಸ್ನೇಹಿತೆ ಜೊತೆ ಮಾಲ್ಡೀವ್ಸ್‌ಗೆ ರಜೆ ಮೇಲೆ ಹೋಗಿದ್ದ. ಆದರೆ ಹಿಂತಿರುಗಿದಾಗ ಈ ವಿಚಾರ ಯಾರಿಗೂ ತಿಳಿಯದಿರಲಿ ಎಂದು ಪಾಸ್ ಪೋರ್ಟ್ ನಲ್ಲಿದ್ದ ವೀಸಾ ಸ್ಟಾಂಪ್ ನ ಪುಟಗಳನ್ನು ಹರಿದು ಹಾಕಿದ್ದಾನೆ. ವಾಸ್ತವವಾಗಿ, ಆ ವ್ಯಕ್ತಿ ತನ್ನ ಗೆಳತಿಯೊಂದಿಗೆ ಮಾಲ್ಡೀವ್ಸ್‌ಗೆ ಹೋಗಿರುವುದು ಆತನ ಹೆಂಡತಿಗೆ ತಿಳಿದಿರಲಿಲ್ಲ, ಅಲ್ಲದೇ ಆಕೆಗೆ ತಿಳಿಯದಿರಲಿ ಎಂಬುವುದಷ್ಟೇ ಆತ ಬಯಸಿದ್ದ.

ಇದನ್ನೂ ಓದಿ: ನಾದಿನಿ ಮೇಲೆ ವ್ಯಾಮೋಹ : ಹೆಚ್‌ಐವಿಯಿಂದ ಬಳಲುತ್ತಿದ್ದ ಪತ್ನಿಯ ಕೊಂದ ಪತಿ

ಪತ್ನಿಯ ಕೋಪದಿಂದ ಪಾರಾಗಲು ಆ ವ್ಯಕ್ತಿ ಪಾಸ್‌ಪೋರ್ಟ್‌ನಿಂದ ವೀಸಾ ಸ್ಟಾಂಪ್ ಪುಟಗಳನ್ನು ತೆಗೆದಿದ್ದ. ಆದರೆ ಾತ ಎಡವಿದ್ದೇ ಅಲ್ಲಿ, ಯಾಕೆಂದರೆ ಪಾಸ್‌ಪೋರ್ಟ್ ತಪಾಸಣೆ ವೇಳೆ ಆತ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. 'ಮಿಡ್ ಡೇ' ಪತ್ರಿಕೆಯ ಪ್ರಕಾರ, 32 ವರ್ಷದ ಈ ವ್ಯಕ್ತಿ ಮುಂಬೈ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಆತನ ಗುರುತು ಬಹಿರಂಗಗೊಂಡಿಲ್ಲ. ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ, ವ್ಯಕ್ತಿಯ ಪಾಸ್‌ಪೋರ್ಟ್‌ನ ಕೆಲವು ಪುಟಗಳು ನಾಪತ್ತೆಯಾಗಿರುವುದು ಇಮಿಗ್ರೇ‍ಶನ್ ಡಿಪಾರ್ಟ್‌ಮೆಂಟ್‌ಗೆ ತಿಳಿಯಿತು. ಕೂಡಲೇ ಆತನನ್ನು ಸಹಾರ್‌ ಪೊಲೀಸರಿಗೆ ಒಪ್ಪಿಸಲಾಗಿದೆ.

ವಿಚಾರಣೆಯ ನಂತರ, ಪೊಲೀಸರು ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಪತ್ನಿಯ ಕೋಪದಿಂದ ಪಾರಾಗಲು ಇಂತಹ ತಪ್ಪು ಮಾಡಿದೆ ಎಂದು ಎಂಜಿನಿಯರ್ ಪೊಲೀಸರಿಗೆ ತಿಳಿಸಿದ್ದಾರೆ. ಮಾಲ್ಡೀವ್ಸ್ ಪ್ರವಾಸದ ಬಗ್ಗೆ ತನ್ನ ಹೆಂಡತಿಗೆ ಎಂದಿಗೂ ತಿಳಿಯಬಾರದು ಎಂದು ಖಚಿತಪಡಿಸಿಕೊಳ್ಳಲು ತಾನು ಪುಟಗಳನ್ನು ಹರಿದು ಹಾಕಿದ್ದೆ ಎಂದು ಬಾಯ್ಬಿಟ್ಟಿದ್ದಾನೆ. 

ಹೆಂಡತಿಗೆ ತಿಳಿಯದಂತೆ ಗೆಳತಿಯೊಂದಿಗೆ ಮಾಲ್ಡೀವ್ಸ್‌ಗೆ ಹೋಗಿದ್ದ

ವರದಿಯ ಪ್ರಕಾರ, ಈ ವ್ಯಕ್ತಿ ತನ್ನ ಹೆಂಡತಿಗೆ ಕಚೇರಿ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ಹೋಗುವುದಾಗಿ ಹೇಳಿ ತನ್ನ ಗೆಳತಿಯನ್ನು ಭೇಟಿ ಮಾಡಲು ಕೆಲವು ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ಹೋಗಿದ್ದ. ಆದರೆ ಫೋನ್ ತೆಗೆಯದಿದ್ದಾಗ ಪತ್ನಿಗೆ ಅನುಮಾನ ಬಂದಿತ್ತು. ಇಂತಹ ಪರಿಸ್ಥಿತಿಯಲ್ಲಿ, ಮಾಲ್ಡೀವ್ಸ್ ಕಥೆಯನ್ನು ಮರೆಮಾಚಲು, ವ್ಯಕ್ತಿ ತನ್ನ ಪಾಸ್‌ಪೋರ್ಟ್‌ನ ಕೆಲವು ಪುಟಗಳನ್ನು ಹರಿದು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣವನ್ನು ತಲುಪಿದ್ದಾನೆ.

ಇದನ್ನೂ ಓದಿ: Crime News: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಹೆತ್ತವರನ್ನೇ ಕೊಂದ ಮಗಳು

ಆದರೆ ವಲಸೆ ಅಧಿಕಾರಿಗಳು ಆತನ ಪಾಸ್‌ಪೋರ್ಟ್‌ನಲ್ಲಿದ್ದ ಕೆಲವು ಪುಟಗಳು ಕಾಣೆಯಾದಾಗ, ಆತನನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಆತ ಈ ವೇಳೆ ಅಸಲಿಯತ್ತು ಮುಚ್ಚಿಟ್ಟು ತಡಬಡಾಯಿಸಿದ್ದಾನೆ. ಹೀಗಾಗಿ ಅಧಿಕಾರಿಗಳು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂತಿಮವಾಗಿ ಬೇರೆ ದಾರಿ ಕಾಣದಾಗ ಆತ ತಾನು ಹೀಗೇಕೆ ಮಾಡಿದೆ ಎಂದು ವಿವರಿಸಿದ್ದಾನೆ. 
 
ಆದರೆ, ಪಾಸ್‌ಪೋರ್ಟ್‌ನ ಪುಟಗಳನ್ನು ಹರಿದು ಹಾಕುವುದು ಅಪರಾಧ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾನೆ. ವಾಸ್ತವವಾಗಿ, ಪಾಸ್‌ಪೋರ್ಟ್ ಅನ್ನು ಭಾರತ ಸರ್ಕಾರವು ನೀಡುತ್ತದೆ ಮತ್ತು ಇದನ್ನು ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಹಾನಿಯನ್ನುಂಟುಮಾಡುವುದು ಅಪರಾಧ ಕೃತ್ಯವೆಂದು ಪರಿಗಣಿಸಲಾಗಿದೆ.

click me!