2.5 ಕಿಮೀ ದೂರಕ್ಕೆ ₹400 ಕೇಳಿದ ಆಟೋ ಡ್ರೈವರ್; ಅಷ್ಟು ದುಡ್ಡು ಆಗಲ್ಲ ಅಂದಿದ್ದಕ್ಕೆ ಯುವಕನ ಮೊಬೈಲ್ ಕಸಿದು ಪರಾರಿ!

By Kannadaprabha News  |  First Published Jul 3, 2023, 11:06 AM IST

ಆಟೋ ಚಾಲಕನೊಬ್ಬ ಯುವಕನ ಮೊಬೈಲ್‌ ಕಸಿದು ಪರಾರಿಯಾಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಬೆಂಗಳೂರು (ಜು.3) : ಆಟೋ ಚಾಲಕನೊಬ್ಬ ಯುವಕನ ಮೊಬೈಲ್‌ ಕಸಿದು ಪರಾರಿಯಾಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜೆ.ಪಿ.ನಗರದ ನಿಖಿಲ್‌ ಮೊಬೈಲ್‌ ಕಳೆದುಕೊಂಡವರು. ಭಾನುವಾರ ಮುಂಜಾನೆ ಸುಮಾರಿಗೆ ಜೆ.ಪಿ.ನಗರ 5ನೇ ಹಂತದ ರಾಮೇಶ್ವರ ಹೋಟೆಲ್‌ ಬಳಿ ನಿಖಿಲ್‌ ಸ್ನೇಹಿತರ ಜತೆಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಮನೆಗೆ ತೆರಳಲು ರಸ್ತೆಯಲ್ಲಿ ಹೋಗುತ್ತಿದ್ದ ಆಟೋವನ್ನು ಕರೆದಿದ್ದಾರೆ. ಈ ವೇಳೆ ಆಟೋ ಚಾಲಕ .400 ಬಾಡಿಗೆ ಕೇಳಿದ್ದಾನೆ. 2.5 ಕಿ.ಮೀ. ದೂರದ ಪ್ರಯಾಣಕ್ಕೆ ಇಷ್ಟೊಂದು ಹಣ ಏಕೆ ಕೇಳುತ್ತೀರಾ ಎಂದು ನಿಖಿಲ್‌ ಪ್ರಶ್ನಿಸಿದ್ದಾನೆ.

Tap to resize

Latest Videos

ಬೆಂಗಳೂರು: ವಕೀಲನ ಕಿಡ್ನಾಪ್‌ ಮಾಡಿ ಸುಲಿಗೆ, ಆಟೋ ಚಾಲಕ ಸೇರಿ ಇಬ್ಬರ ಬಂಧನ

ಇದೇ ವೇಳೆ ತನ್ನ ಮೊಬೈಲ್‌ ತೆಗೆದು ಮ್ಯಾಪ್‌ ತೆರೆದು ಪ್ರಯಾಣಿಸಬೇಕಾದ ದೂರದ ಬಗ್ಗೆ ತೋರಿಸಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕ ಏಕಾಏಕಿ ನಿಖಿಲ್‌ನ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆಟೋ ಚಾಲಕನ ಪತ್ತೆಗೆ ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾವತಿ ಆಗದ ವೇತನ: ಲಾರಿ ಚಕ್ರಗಳನ್ನೇ ಕದ್ದ ಚಾಲಕ, ಕ್ಲೀನರ್‌!

ಮಂಗಳೂರು: ಕೆಲಸ ಮಾಡಿದರೂ ವೇತನ ನೀಡಿಲ್ಲ ಎಂಬ ಕಾರಣಕ್ಕೆ ಲಾರಿಯ ಚಾಲಕ ಮತ್ತು ಕ್ಲೀನರ್‌ ಸೇರಿ ಲಾರಿಯ ಡಿÓ್ಕ… ಸಹಿತ ಲಾರಿಯ ಚಕ್ರಗಳನ್ನು ಕಳವು ಮಾಡಿದ ಘಟನೆ ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಾರಿ ಚಾಲಕ ಕೇರಳದ ಕೊಲ್ಲಂ ನಿವಾಸಿ ಸಮೀರ್‌ ಮತ್ತು ಕ್ಲೀನರ್‌ ಕನಕರಾಜು ಎಂಬವರು ಡಿÓ್ಕ… ಸಹಿತ ಲಾರಿಯ ಚಕ್ರಗಳನ್ನು ಕಳವು ಮಾಡಿದ ಬಗ್ಗೆ ಈಗಲ್‌ ಲಾಜೆಸ್ಟಿP್ಸ… ಮ್ಯಾನೇಜರ್‌ ವೇಲುಮುರುಗನ್‌ ಟವರ್ಸ್‌ ನಾಮಕಲ್ಲು ಅವರು ದೂರು ನೀಡಿದ್ದಾರೆ. ಕಳವಾದ ಡಿಸ್‌್ಕ ಸಹಿತ ಚಕ್ರಗಳ ಒಟ್ಟು ಮೌಲ್ಯ 2.06 ಲಕ್ಷ ರು. ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Bengaluru crimes: ಸಾಲ ತೀರಿಸಲು 1,300 ಎಳನೀರು ಕದ್ದವನ ಸೆರೆ!

click me!