ವರ್ಷದ ಹಿಂದಿನ ಪ್ರಕರಣ/ ಬಾಲಕಿಗೆ ಲೈಂಗಿಕ ಶೋಷಣೆ ನೀಡುತ್ತಿದ್ದ ಇನ್ನೊಬ್ಬ ಯುವತಿ/ ಕೇರಳದಲ್ಲೊಂದು ವಿಚಿತ್ರ ಪ್ರಕರಣ/ ಪೋನ್ ನಲ್ಲಿ ಸಿಕ್ಕ ದಾಖಲೆಗಳು ಹೇಳಿದ ಸತ್ಯ
ತ್ರಿಶೂರ್ (ಜ. 17) 16 ವರ್ಷದ ಬಾಲಕಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 24 ವರ್ಷದ ಯುವತಿಯನ್ನು ಕೇರಳದ ತ್ರಿಶೂರ್‌ನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಒಂದು ವರ್ಷದ ಹಿಂದೆ ಪ್ರಥಮ ಪಿಯು ವಿದ್ಯಾರ್ಥಿನಿ ಆಕೆಯ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಳು. ಅಸ್ವಾಭಾವಿಕ ಸಾವಿನ ಪ್ರಕರಣವನ್ನು. ಮೃತ ಹುಡುಗಿಯ ಫೋನ್ ಕರೆ ದಾಖಲೆಗಳ ಪರೀಕ್ಷೆಯ ಸಮಯದಲ್ಲಿ ಅನುಮಾನಗಳು ಎದ್ದಿದ್ದವು.
'ಶಿವಲಿಂಗದ ಮೇಲೆ ಕಾಂಡೋಮ್' ನಟಿಯ ಚಳಿ ಬಿಡಿಸಿದ್ರು!
ಆಕೆಯ ಮೊಬೈಲ್ ನಲ್ಲಿ ಸಿಕ್ಕ ಪೋಟೋಗಳು ಪೊಲೀಸರನ್ನು ಬೆಚ್ಚಿ ಬೀಳಿಸಿದ್ದವು. ಬಾಲಕಿ ಇನ್ನೊಂದು ಯುವತಿಯೊಂದಿಗೆ ಸಲಿಂಗ ಸಂಬಂಧದಲ್ಲಿ ಇದ್ದಿದ್ದು ಬಹಿರಂಗವಾಗಿತ್ತು. ಇನ್ನೊಬ್ಬ ಯುವತಿಯನ್ನು ಅಭಿರಾಮಿ ಎಂದು ಪೊಲೀಸರು ಪತ್ತೆ ಮಾಡಿದ್ದರು.
ಮೃತ ಬಾಲಕಿ ತನ್ನ ಕ್ಲಾಸ್ ಮೇಟ್ ಮೂಲಕ ಅಭಿರಾಮಿಯ ಸಂಪರ್ಕಕ್ಕೆ ಬಂದಿದ್ದಳು. ಅಭಿರಾಮಿ ಇದೇ ವಿಚಾರ ಇಟ್ಟುಕೊಂಡು ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ.. ಒಬ್ಬ ಯುವಕನೊಂದಿಗೆ ಇರುವ ಸಲುಗೆ ಬಿಟ್ಟುಬಿಡಲು ಹೇಳುತ್ತಿದ್ದಾಳೆ ಎಂದು ತಿಳಿಸಿದ್ದಳು.
ಡಿಜಿಟಲ್ ಸಾಕ್ಷ್ಯದ ಮೂಲಕ ಆರೋಪಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಪ್ರಕರಣ ಮತ್ತು ಆತ್ಮಹತ್ಯೆಗೆ ಪ್ರೇರೇಪಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.