3 ಮಕ್ಕಳ ತಾಯಿಗೆ ಅಳಿಯನೊಂದಿಗೆ ಸಂಬಂಧ, ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿರಾಯ

Published : Jul 21, 2020, 02:48 PM IST
3 ಮಕ್ಕಳ ತಾಯಿಗೆ ಅಳಿಯನೊಂದಿಗೆ ಸಂಬಂಧ, ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿರಾಯ

ಸಾರಾಂಶ

ಮೂರು ಮಕ್ಕಳ ತಾಯಿಗೆ ಅಳಿಯನೊಂದಿಗೆ ಅಕ್ರಮ ಸಂಬಂಧ/ ಇಬ್ಬರು ಏಕಾಂತದಲ್ಲಿದ್ದ ವೇಳೆ ಮನೆಗೆ ಬಂದ ಪತಿ/ ಪತಿಗೆ ವಿಷಯ ತಿಳಿಯಿತು ಎಂದು ಮಹಿಳೆ ಮತ್ತು ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆ

ಹೈದರಾಬಾದ್(ಜು. 21)  ಆಕೆ ಮೂರು ಮಕ್ಕಳ ತಾಯಿ, ವಾರಿಗೆಯಲ್ಲಿ ತನ್ನ ಅಳಿಯನಾಗಬೇಕಿದ್ದ 20  ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಪತಿಗೆ ಗೊತ್ತಾಗುತ್ತಿದ್ದಂತೆ ಪ್ರಿಯಕರನೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ  ಘಟನೆ ನಡೆದಿದೆ. ದೇವಮ್ಮ (30) ಮತ್ತು ಶಿವ ನಾಯಕ್ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಆತ್ಮಹತ್ಯೆಗೆ ಶರಣಾಗಿರುವ ದೇವಮ್ಮ 10 ವರ್ಷಗಳ ಹಿಂದೆ ರಾಜು ಎಂಬುವರ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ದೇವಮ್ಮ ಪತಿ ರಾಜು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸಾರ ಸಾಗುತ್ತಿರುವಾಗ  20 ವರ್ಷದ ಶಿವ ನಾಯಕ್‍ನೊಂದಿಗೆ ದೇವಮ್ಮಗೆ ಅಕ್ರಮ ಸಂಬಂಧ ಆರಂಭವಾಗಿದೆ.

ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ, ಮುಂಗಾಗಿದ್ದು ದುರಂತ
 
ಪತಿ ಇಲ್ಲದ ವೇಳೆ ದೇವಮ್ಮ ಪ್ರಿಯಕರ ಶಿವ ನಾಯಕ್‍ನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಒಂದು ದಿನ ಇಬ್ಬರು ಏಕಾಂತದಲ್ಲಿದ್ದ ವೇಳೆ ದೇವಮ್ಮ ಪತಿ ರಾಜು ಮನೆಗೆ ಆಗಮಿಸಿದ್ದಾನೆ. ಈ ವೇಳೆ ಇಬ್ಬರ ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ. ಈ ವೇಳೆ ದೇವಮ್ಮ ಪ್ರಿಯಕರನೊಂದಿಗೆ ತಕ್ಷಣವೇ ಮನೆಯಿಂದ ಓಡಿಹೋಗಿದ್ದಾಳೆ.

ಪಕ್ಕದ ಗ್ರಾಮದ ಹೊರವಲಯಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಅಸ್ವಸ್ಥರಾಗಿ ಬಿದ್ದಿದ್ದವರನ್ನು ಸ್ಥಳೀಯರು ಹತ್ತಿರದ  ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ದೇವಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಶಿವ ನಾಯಕ್ ಸ್ಥಿತಿ ಗಂಭೀರವಾಗಿದ್ದ ಕಾರಣ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಹಬೂಬ್ ನಗರ ಖಾಸಗಿ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ