2 ಎಂಗೆಜ್‌ಮೆಂಟ್, 10 ಗರ್ಲ್ ಫ್ರೆಂಡ್...ಚಾಲಾಕಿ ಚತುರನ ರಸಿಕತೆ ಬಟಾಬಯಲು!

Published : Jul 20, 2020, 05:41 PM IST
2 ಎಂಗೆಜ್‌ಮೆಂಟ್, 10 ಗರ್ಲ್ ಫ್ರೆಂಡ್...ಚಾಲಾಕಿ ಚತುರನ ರಸಿಕತೆ ಬಟಾಬಯಲು!

ಸಾರಾಂಶ

ಎರಡು ಎಂಗೇಜ್ಮೆಂಟ್ ,ಹತ್ತಕ್ಕೂ ಹೆಚ್ಚು ಗರ್ಲ್ ಫ್ರೆಂಡ್ಸ್ ಮೆಂಟೇನ್ ಮಾಡ್ತಿದ್ದ ಭೂಪ ಪೊಲೀಸ್ ಬಲೆಗೆ/ ದುಡ್ಡಿರುವ ವಿಚ್ಚೇದಿತ ಮಹಿಳೆಯರೇ ಇವನ ಟಾರ್ಗೆಟ್/ ಬನಶಂಕರಿ ಪೊಲೀಸರಿಂದ ಆರೋಪಿ ಮಹೇಶ್ ಅಲಿಯಾಸ್ ಜಗನ್ನಾಥ್ ಬಂಧನ/ ವಿಚ್ಚೇದಿತ ಮಹಿಳೆಯೊಬ್ಬರು ದೂರಿನ ತನಿಖೆ ವೇಳೆ ಮಹೇಶ್ ಅಸಲಿ ಬಂಡವಾಳ ಬಯಲು.

ಬೆಂಗಳೂರು(ಜು. 20) ಈತ ಅಂತಿಂಥ ಆಸಾಮಿ ಅಲ್ಲ,  ಎರಡು ಎಂಗೆಜ್ ಮೆಂಟ್ ಮಾಡಿಕೊಂಡು ಹತ್ತಕ್ಕೂ ಹೆಚ್ಚು ಗರ್ಲ್ ಫ್ರೆಂಡ್ಸ್ ಮೆಂಟೇನ್ ಮಾಡ್ತಿದ್ದ ಭೂಪ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ದುಡ್ಡಿರುವ ವಿಚ್ಚೇದಿತ ಮಹಿಳೆಯರೇ ಇವನ ಟಾರ್ಗೆಟ್!

ಬನಶಂಕರಿ ಪೊಲೀಸರು ಆರೋಪಿ ಮಹೇಶ್ ಅಲಿಯಾಸ್ ಜಗನ್ನಾಥ್  ಎಂಬಾತನನ್ನು ಬಂಧಿಸಿದ್ದಾರೆ. ವಿಚ್ಚೇದಿತ ಮಹಿಳೆಯೊಬ್ಬರು ದೂರಿನ ತನಿಖೆ ವೇಳೆ ಮಹೇಶ್ ಅಸಲಿ ಬಂಡವಾಳ ಬಯಲಾಗಿದೆ. ಮ್ಯಾಟ್ರಿಮೋನಿಯಲ್ಲಿ ವಿಚ್ಚೇದಿತ ಮಹಿಳೆಯರನ್ನ ಪರಿಚಯ ಮಾಡಿಕೊಳ್ತಿದ್ದ ಭೂಪ  ಬಾಳು ಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ರೂ. ವಂಚನೆ ಮಾಡುತ್ತಿದ್ದ.

ಮದುವೆಯಾಗುವುದಾಗಿ ನಂಬಿಸಿ ಉಂಡು ಹೋದ ಹೋದ, ಕೊಂಡು ಹೋದ

ಸೈಟ್ ತೆಗೆದುಕೊಳ್ಳಬೇಕು ಎಂದು ಪುಸಲಾಯಿಸಿ ಏಳು ಲಕ್ಷಕ್ಕೆ  ಬೇಡಿಕೆ ಇಟ್ಟಿದ್ದ ಆರೋಪಿ ಈಗ ಸೆರೆಯಾಗಿದ್ದಾನೆ. ಆರೋಪಿ ಮಾತಿಗೆ ಮರುಳಾಗಿ ಮಹಿಳೆ ಏಳು ಲಕ್ಷ  ರೂ. ನೀಡಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ವಿಚ್ಚೇದಿತ ಮಹಿಳೆಯರನ್ನ ವಂಚಿಸಿ 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.

ಐದು ಮಂದಿ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ‌ ಸಂಪರ್ಕ ಬೆಳೆಸಿ ಅವರಿಗೂ ವಂಚಿಸಿದ್ದ. ಹಾಸನ, ವಿಜಯಪುರ ,ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಹಿಳೆಯರಿಗೆ ವಂಚನೆ ಮಾಡಿದ್ದ ಚಾಲಾಕಿ.  ಆರೋಪಿಯಿಂದ ಆರು ಲಕ್ಷ ಬೆಲೆ ಬಾಳುವ ಕಾರು, ಎರಡು ಮೊಬೈಲ್, 25 ಸಿಮ್ ಕಾರ್ಡ್, 22 ಎಟಿಎಂ ಕಾರ್ಡ್,ಮೂರು ಪಾನ್ ಕಾರ್ಡ್, ಮೂರು ಓಟರ್ ಐಡಿ,   ಆಧಾರ್ ಕಾರ್ಡ್,ಪಾಸ್ ಬುಕ್  ವಶಕ್ಕೆ ಪಡೆಯಲಾಗಿದೆ.

ಇದೇ ರೀತಿ ಹಾಸನದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪರಿಚಯಿಸಿಕೊಂಡು ಎಂಗೇಜ್ ಮೆಂಟ್ ಆಗಿದ್ದ ಭೂಪ ಇದೀಗ ಪೊಲೀಸರ ವಶದಲ್ಲಿ ಇದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ