ಪ್ರೀತಿಸಿ ಮದುವೆಯಾದ ನಲ್ವತ್ತೈದೇ ದಿನಕ್ಕೆ ಚಿನ್ನಾಭರಣ ಕದ್ದು ಮಾಜಿ ಪ್ರಿಯಕರನೊಂದಿಗೆ ಪತ್ನಿ ಪರಾರಿ

Published : Jun 22, 2022, 06:26 PM IST
ಪ್ರೀತಿಸಿ ಮದುವೆಯಾದ ನಲ್ವತ್ತೈದೇ ದಿನಕ್ಕೆ  ಚಿನ್ನಾಭರಣ ಕದ್ದು ಮಾಜಿ ಪ್ರಿಯಕರನೊಂದಿಗೆ ಪತ್ನಿ ಪರಾರಿ

ಸಾರಾಂಶ

ಪ್ರೇಮ ವಿವಾಹವಾದ 45 ದಿನಗಳ ನಂತರ ಮಹಿಳೆಯೊಬ್ಬಳು ತನ್ನ ಗಂಡನ ಮನೆಯಿಂದ ನಗದು ಮತ್ತು ಚಿನ್ನವನ್ನು ಕದ್ದು ತನ್ನ ಮಾಜಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಪಾಟ್ನಾ (ಜೂ. 22): ಪ್ರೀತಿಸಿ ವಂಚಿಸಿದ ಪ್ರಕರಣವೊಂದರಲ್ಲಿ, 20 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸುವ ಸಲುವಾಗಿ ಗಂಡನ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಕದ್ದಿದ್ದಾಳೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ದಂಪತಿಗಳು ಎರಡು ವರ್ಷಗಳಿಂದ ಪ್ರೀತಿಸುತಿದ್ದರು ಮತ್ತು ತಮ್ಮ ಕುಟುಂಬಗಳೊಂದಿಗೆ ಜಗಳವಾಡಿ ಮದುವೆಯಾಗಿದ್ದರು. ಪಾಟ್ನಾದ ಸ್ಯಾಟ್‌ಲೈಟ್ ಟೌನ್ ನೌಬತ್‌ಪುರದ ಸತ್ಯಾನಂದ್ ಮತ್ತು ರಾಣಿ ಕುಮಾರಿ ದಂಪತಿಗಳು 45 ದಿನಗಳ ಹಿಂದೆ ಪ್ರೇಮ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

ಇನ್ನು ಈ ಘಟನೆ ಸಂಬಂಧ ಪತಿ ಪೊಲೀಸರಿಗೆ ದೂರು ನೀಡಿ, "ಪತ್ನಿ ತಿಜೋರಿ ಬೀಗ ಒಡೆದು 20 ಸಾವಿರ ನಗದು, ಮಂಗಳಸೂತ್ರ ಹಾಗೂ ಮದುವೆಯಲ್ಲಿ ನೀಡಲಾಗಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಳು" ಎಂದು ಹೇಳಿದ್ದಾರೆ. ಭಾಸ್ಕರ್ ವರದಿಯ ಪ್ರಕಾರ, ಇಬ್ಬರು ಸುಮಾರು ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದು ಇಬ್ಬರ ನಡುವೆ ಪ್ರೀತಿ ಆರಂಭವಾಗಿತ್ತು. ಬಳಿಕ ಇಬ್ಬರೂ ತಮ್ಮ ಫೋನ್‌ನಲ್ಲಿ ಪರಸ್ಪರ ಮಾತನಾಡುತ್ತಾ ರಾತ್ರಿಗಳನ್ನು ಕಳೆಯುತ್ತಿದ್ದರು.

ಅವರ ಮದುವೆಯನ್ನು ಅವರ ಪೋಷಕರು ವಿರೋಧಿಸಿದಾಗ, ಅವರು ಒಬ್ಬರಿಗೊಬ್ಬರು ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿ ನಂತರ ಏಪ್ರಿಲ್ 27, 2022 ರಂದು ಬಹಳ ಆಡಂಬರದಿಂದ ವಿವಾಹವಾದರು. ಇಲ್ಲಿಂದ ಕಥೆಯ ತಿರುವು ಪ್ರಾರಂಭವಾಯಿತು.

ಇದನ್ನೂ ಓದಿ: ಮಾವಿನ ಹಣ್ಣಿನ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ!

ಮದುವೆಯ ನಂತರ ಅವಳು ಗಂಡನ ಮನೆಗೆ ಬಂದಾಗ, ಅವಳು ರಾತ್ರಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವುದನ್ನು ಪತಿ ಗಮನಿಸಿದ್ದರು. ಈ ಬಗ್ಗೆ ಪತ್ನಿಯನ್ನು ಕೇಳಿದಾಗ ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಬದುಕಲು ಬಯಸುತ್ತಾಳೆ ಎಂದು ಹೇಳಿದ್ದಾಳೆ. ಈ ಸಂಬಂಧ ಅವರಿಬ್ಬರ ನಡುವೆ ಜಗಳವಾಗಿದ್ದು, ಒಂದು ರಾತ್ರಿ ಅವನು ಮಲಗಿದ್ದಾಗ, ಅವಳು ಬೀಗಗಳನ್ನು ಒಡೆದು ಎಲ್ಲಾ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಳು. 

ಮಹಿಳೆ ಇನ್ನೂ ತನ್ನ ಮಾಜಿ ಗೆಳೆಯನನ್ನು ಪ್ರೀತಿಸುತ್ತಿದ್ದಳು ಮತ್ತು ಅವಳ ಮದುವೆಯಾದ ಸ್ವಲ್ಪ ಸಮಯದ ನಂತರ ಅವನೊಂದಿಗೆ ಓಡಿಹೋದಳು ಎಂದು ನಂತರ ತಿಳಿದುಬಂದಿದೆ. ಪತಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಎರಡೂವರೆ ಲಕ್ಷ ಸಾಲಕ್ಕಾಗಿ ಪತ್ನಿ ಕೊಂದ ಪತಿ: ಮಗಳ ಮೇಲೂ ಹಲ್ಲೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ