
ಅಹಮದಾಬಾದ್(ಆ. 14) ಅತ್ಯಾಚಾರದ ಆರೋಪದ ಮೇಲೆ 28 ವರ್ಷದ ಯುವಕ ಮತ್ತು ಆತನ ಹೆತ್ತವರ ಮೇಲೆ ದೂರು ದಾಖಲಾಗಿದೆ. ಮದುವೆಯಾಗುತ್ತೇನೆ ಎಂದು ನಂಬಿಸಿ ಅತ್ಯಾಚಾರ ಎಸಗಿದ್ದಾಬೆ ಎಂದು ಯುವತಿ ಆರೋಪಿಸಿದ್ದಾಳೆ. ಅಹಮದಾಬಾದ್ ಜಿಲ್ಲೆಯ ಚಂಗೋಡರ್ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸನಂದ್ ನಿವಾಸಿ ದೂರುದಾರೆ ಘಟನೆಯ ವಿವರವನ್ನು ಒಂದೊಂದಾಗಿ ತೆರೆದಿರಿಸಿದ್ದಾರೆ. ಮೊರಿಯಾ ಪ್ರದೇಶದ ಆಟೋಮೊಬೈಲ್ ತಯಾರಿಕಾ ಕಾರ್ಖಾನೆಯಲ್ಲಿ ಆರೋಪಿಯನ್ನು ಮೊದಲು ಭೇಟಿಯಾಗಿದ್ದೆ. ಎಂಟು ತಿಂಗಳ ಹಿಂದೆ ನಮ್ಮ ಪರಿಚಯವಾಯಿತು ಅದು ಪ್ರೀತಿಗೆ ತಿರುಗಿ ಫೆಬ್ರವರಿ 2 ರಂದು ನಿಶ್ಚಿತಾರ್ಥ ಮಾಡಿಕೊಂಡೆವು. ಎರಡು ಕುಟುಂಬಗಳುಇ ಒಪ್ಪಿಕೊಂಡಿದ್ದವು. ಸರ್ಖೇಜ್ ನಿವಾಸಿಯಾಗಿದ್ದ ಆರೋಪಿ ಸಂನಂದ್‌ನಲ್ಲಿರುವ ನನ್ನ ಮನೆಗೆ ಆಗಾಗ್ಗೆ ಬಂದು ಹೋಗಿ ಮಾಡುತ್ತಿದ್ದ. ಇದಾದ ಮೇಲೆ ನನ್ನ ಮನೆಯಲ್ಲೇ ಆರು ತಿಂಗಳ ಕಾಲ ಉಳಿದುಕೊಂಡ.. ಆಗಾಗ್ಗೆ ನನ್ನ ಜತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ತನ್ನ ಕುಟುಂಬದಲ್ಲಿ ಏನೋ ಸಮಸ್ಯೆ ಆಗಿದೆ ಎಂದು 15 ದಿನದ ಹಿಂದೆ ವಾಪಸ್ ಹೋದ.
ಮಕ್ಕಳಾಗುತ್ತಿಲ್ಲ ಪರಿಹಾರ ಕೊಡಿ ಎಂದು ಬಂದವಳ ಮಂಚಕ್ಕೆ ಕರೆದ
ಒಂದು ವಾರದ ಹಿಂದೆ ಬೇರೆ ಹುಡುಗಿಯನ್ನು ಭೇಟಿ ಮಾಡಿ ಆಕೆಯನ್ನು ಮದುವೆಯಾಗುತ್ತೇನೆ ನಾವು ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ಹೇಳಲು ಆರಂಭಿಸಿದ. ಈ ವಿಚಾರವನ್ನು ಹುಡುಗನ ತಂದೆ ತಾಯಿಗೆ ತಿಳಿಸಿದರೆ ನಾವೇನು ಮಾಡಲು ಸಾಧ್ಯವಿಲ್ಲ, ನೀನು ಆತ್ಮಹತ್ಯೆ ಮಾಡಿಕೊ ಎಂಬ ರೀತಿಯಲ್ಲಿ ಮಾತನಾಡಿದರು ಎಂದು ಯುವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ