* ಮಕ್ಕಳಾಗುತ್ತಿಲ್ಲ ಪರಿಹಾರ ಕೊಡಿ ಎಂದು ಮಾಟಗಾರನ ಬಳಿ ತೆರಳಿದ ಮಹಿಳೆ
* ಹೋಟೆಲ್ ಗೆ ಬಂದು ತನ್ನೊಂದಿಗೆ ಸಹಕರಿಸು ಎಂದ ಕಿರಾತಕ
* ನೊಂದ ಮಹಿಳೆಯಿಂದ ಪೊಲೀಸರಿಗೆ ದೂರು
* ಮಹಿಳೆ ಗಂಡನ ಥಳಿಸಿದ ಆಕೆಯ ಸಹೋದರರು
ಅಹಮದಾಬಾದ್(ಆ. 13) ಮಕ್ಕಳಾಗುತ್ತಿಲ್ಲ ಪರಿಹಾರ ಕೊಡಿ ಎಂದು ಮಹಿಳೆ ಮಾಟಗಾರ ವೈದ್ಯರ ಬಳಿ ಬಂದಿದ್ದಳು. ಕಿರಾತಕ ತನ್ನೊಂದಿಗೆ ಸೆಕ್ಸ್ ಮಾಡು ಎಂದು ಪಟ್ಟು ಹಿಡಿದು ಕುಳಿತ!
ಹೌದು ಇಂಥದ್ದೊಂದು ಪ್ರಕರಣ ಗುಜರಾತಿನಿಂದ ವರದಿಯಾಗಿದ. ಮಹಿಳೆಗೆ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದಾನೆ. 28 ವರ್ಷದ ಮಹಿಳೆ ಒಂದು ಕಡೆ ಪೊಲೀಸಸರಿ ಮೊರೆ ಹೋಗಿದ್ದರೆ ಆಕೆಯ ಸಹೋದರರು ಮಹಿಳೆಯ ಗಂಡನನ್ನು ಥಳಿಸಿದ್ದಾರೆ.
ಭದ್ರತಾ ಸಿಬ್ಬಂದಿ ಪತ್ನಿಯನ್ನು ಮುಕ್ಕಿದ ವಯೋವೃದ್ಧ ಲೇಖಕ
ಎಂಟು ವರ್ಷದ ಹಿಂದೆ ಮದುವೆಯಾಗಿದ್ದರೂ ತಾಯಿಯಾಗಲೂ ಸಾಧ್ಯವಾಗಿರಲಿಲ್ಲ. ಮಹಿಳೆ ಅನೇಕ ವೈದ್ಯರ ಬಳಿ ಸಲಹೆ ಪಡೆದುಕೊಂಡಿದ್ದರು.
ಗೆಳತಿಯರ ಸಲಹೆ ಮೇರೆಗೆ ಮಹಿಳೆ ಆರೋಪಿ ಮಾಟಗಾರನ ಬಳಿ ಚಿಕಿತ್ಸೆಗೆಂದು ತೆರಳಿದ್ದಾರೆ. ಆಗಸ್ಟ್ ಏಳರಂದು ಮಾಟಗಾರ ವೈದ್ಯ ಇಮ್ತಿಯಾಜ್ ಮಹಿಳೆ ಮನೆಗೆ ಹೋಗಿದ್ದು ಸಹಾಯ ಮಾಡುತ್ತೇನೆ ಎಂದು ನಂಬಿಸಿದ್ದಾನೆ. ನಿನಗೆ ಮಕ್ಕಳಾಗಬೇಕು ಎಂದರೆ ಬೇರೆ ಒಬ್ಬರ ಜತೆ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ತಿಳಿಸಿದ್ದಾನೆ.
ಇಷ್ಟಕ್ಕೆ ನಿಲ್ಲದ ಕಿರಾತಕ..ಹೋಟೆಲ್ ಗೆ ಬಾ..ಅಲ್ಲಿ ನನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡು ಆ ಮೂಲಕ ಮಕ್ಕಳನ್ನು ಪಡೆದುಕೋ ಎಂದಿದ್ದಾನೆ. ನೊಂದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ.