ನಿಜ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಆದ್ರೆ ಮಾನವೀಯತೆ ಇಲ್ಲವೇ ಇಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ತನಗಿಂತ ಹಿರಿಯಳೊಂದಿಗೆ ಪ್ರೇಮ ಪಾಶಕ್ಕೆ ಬಿದ್ದ ಕಿರಣ್‌ಗೆ ಈಗ ಅವಳನ್ನು ವರಿಸದೇ ಬೇರೆ ದಾರಿ ಇಲ್ಲ. ಒಟ್ನಲ್ಲಿ ಇರೋ ಗಂಡನನ್ನ ಒಲ್ಲೆ ಎಂದ ಯುವತಿಗೆ ಇತ್ತ ಗಂಡನೂ ಇಲ್ಲದೆ ಇತ್ತ ಪ್ರೀತಿಸಿದವನು ಇಲ್ಲದೆ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದಾಳೆ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಫೆ.22): ಈ ಪ್ರೀತಿ ಪ್ರೇಮ ಕೆಲವೊಮ್ಮೆ ವಿಲಕ್ಷಣ ಘಟ್ಟಕ್ಕೂ ತಲುಪುತ್ತದೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇದೆ. ಐದು ವರ್ಷದಿಂದ ಪ್ರೀತಿ ಪ್ರೇಮ ಅಂತ ಅವರಿಬ್ಬರು ಸುತ್ತಾಡಿದ್ರು. ಆದ್ರೆ ಮನೆಯವರ ಬಲವಂತಕ್ಕೆ ಆಕೆ ಮತ್ತೊಬ್ಬನೊಂದಿಗೆ ವಿವಾಹವಾಗಿದ್ದಳು, ಹಳೆಯ ಪ್ರಿಯಕರನ ನೆನೆಪು ಕಾಡಿತ್ತು. ಅವನೂ ಕೂಡ ಗಂಡನನ್ನ ಬಿಟ್ಟು ಬಂದು ಬಿಡು ನಾನು ನೀನು ಮದುವೆಯಾಗೋಣ ಎಂದು. ಗಂಡನನ್ನ ಬಿಟ್ಟವಳಿಗೆ ಈಗ ಪ್ರಿಯಕರ ನೀನು ಬೇಡ ಎಂದು ಮನೆಯವರು ಒಪ್ಪುತ್ತಿಲ್ಲ ಎಂದು ಪರಾರಿಯಾಗಿದ್ದಾನೆ. ಪ್ರಿಯಕರನ ಮನೆ ಎದುರು ಮಹಿಳೆ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾಳೆ.
ಹೀಗೆ ಒಬ್ಬೊಂಟಿಯಾಗಿ ಪ್ರಿಯಕರನ ಮನೆ ಎದುರು ಪ್ರತಿಭಟನೆ ಮಾಡುತ್ತಿರುವ ಮಹಿಳೆ, ಮತ್ತೊಂದೆಡೆ ಅಣ್ಣ ಹಾಗೂ ಕುಟುಂಬದ ಸ್ಥಿತಿಯನ್ನ ನೆನೆದು ಕಣ್ಣಿರಾಕುತ್ತಿರುವ ಅಮ್ಮ, ತಂಗಿ, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಮಲ್ಲೆ ಗ್ರಾಮದಲ್ಲಿ. ಹೌದು ಮನೆಯವರ ಒತ್ತಾಯಕ್ಕೆ ಮತ್ತೊಬ್ಬ ಯುವಕನೊಂದಿಗೆ ಮದುವೆಯಾದ ರಾಧಾ(ಹೆಸರು ಬದಲಾಯಿಸಲಾಗಿದೆ) ತನ್ನ ಹಳೆಯ ಸ್ನೇಹಿತ ಕಿರಣ್ ಪ್ರೀತಿ ಮರೆಯಲು ಸಾದ್ಯವಾಗಿಲ್ಲ. ಹಾಗಾಗಿ ಇರುವ ಗಂಡನನ್ನು ಬಿಟ್ಟು ತನ್ನ ಹಳೆಯ ಪ್ರಿಯಕರನನ್ನ ಹುಡುಕಿಕೊಂಡು ವಾಪಾಸು ತನ್ನೂರಿಗೆ ಬಂದಿದ್ದಾಳೆ.
Chikkamagaluru: ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಲೆ: ಆರೋಪಿ ಬಂಧನ
ಆದ್ರೆ ಪ್ರೀತಿಸುತ್ತಿದ್ದ ಯುವಕ ಕಿರಣ್ ನಿನ್ನ ಗಂಡನಿಗೆ ಡೈವರ್ಸ್ ಕೊಟ್ಟು ಬಾ ಎಂದಿದ್ದಾನೆ. ಪೂಜ ತನ್ನ ಗಂಡನಿಂದ ಡೈವರ್ಸ್ ಕೊಟ್ಟು ಪ್ರಿಯಕರನ ಬಳಿ ಬಂದಿದ್ದಾಳೆ, ಆದ್ರೆ ಈಗ ನಮ್ಮ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಪ್ರೇಮಿ ಕಿರಣ್ ಕೈ ಕೊಟ್ಟು ಪರಾರಿಯಾಗಿದ್ದಾನೆ. ಹಾಗಾಗಿ ನೊಂದ ಯುವತಿ ಮಹಿಳೆ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾಳೆ. ಕಳೆದ 2 ದಿನಗಳಿಂದ ದೊಡ್ಡಮಲ್ಲೆ ಗ್ರಾಮದ ಕಿರಣ ಎಂಬ ಯುವಕನ ಮನೆ ಎದುರು ಪ್ರತಿಭಟನೆ ಮಾಡುತ್ತಿದ್ದಾಳೆ. ಅವನು ಬಂದು ನನಗೆ ಮದಯವೆ ಆಗುವರೆಗೂ ನಾನು ಇಲ್ಲಿಂದ ಕದಲುವುದಿಲ್ಲ ಎನ್ನುತ್ತಿದ್ದಾಳೆ.
ರಾಧಾಗೆ ತಮಿಳುನಾಡಿನ ಡೆಂಕನಹಲ್ಲಿ ಎಂಬಲ್ಲಿಗೆ ಮದುವೆ ಮಾಡಿ ಐದು ವರ್ಷಗಳಾಗಿತ್ತು. ಮದುವೆಯಾದ ಆರು ತಿಂಗಳಿಗೇ ಈ ಹಳೆಯ ಲವರ್ ಅವಳ ನೋಡಲು ಮೋಹಿಸಲು ಅಲ್ಲಿಗೆ ಹೋಗುತಿದ್ದನಂತೆ. ಹಾಗಂತ ಕಿರಣ್ ಗೆ ಈಗ ಕೇವಲ ಇಪ್ಪತ್ತು ವರ್ಷ ಮಾತ್ರ. ಐದು ವರ್ಷಗಳಿಂದ ಈತ ತನ್ನ ಪ್ರಿಯತಮೆಗೆ ನೋಡಲು ಹೋಗುತಿದ್ದ ಎಂದ್ರೆ ಆಗ ಇವನಿಗೆ ಕೇವಲ ಹದಿನೈದು ವರ್ಷದ ಅಪ್ರಾಪ್ತ. ಈಗ ಅವನಿಗೆ ಇಪ್ಪತ್ತು ವರ್ಷ. ಇನ್ನೂ ಮನೆಯವರ ಬಲವಂತಕ್ಕೆ ಮದುವೆಯಾದ ರಾಧಾ ಇತ್ತ ಗಂಡನಿಗೆ ವಿಚ್ಚೇಧನ ನೀಡಿದ್ದು ಆಗಿದೆ. ಬೆಟ್ಟದಂತೆ ನಂಬಿದ್ದ ಪ್ರಿಯಕರ ಕೂಡ ಮನೆಯವರು ಒಪ್ಪುತ್ತಿಲ್ಲ ಎಂದು ಪರಾರಿಯಾಗಿದ್ದಾನೆ. ಹಾಗಾಗಿ ಕಳೆದ ಎರಡು ದಿನಗಳಿಂದ ರಾಧಾ ತನ್ನ ಪ್ರಿಯಕರ ಕಿರಣ ಮನೆ ಎದುರು ಏಕಾಂಗಿ ಹೋರಾಟ ಮಾಡುತ್ತಿದ್ದಾಳೆ.
ಆನ್‌ಲೈನ್‌ನಲ್ಲಿ ಚಂದದ ಹುಡುಗಿ ನೋಡಿ ಮದುವೆಯಾದ, ರೌಡಿಶೀಟರ್ ಎಂದು ಗೊತ್ತಾಗಿ ದಂಗಾದ!
ಗಂಡನಿಗೆ ವಿಚ್ಚೇದನ ಕೊಟ್ಟು ಬಂದ ಮೇಲೆ ಕಿರಣ್ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಅರೋಪಿಸುತ್ತಿರುವ ಮಹಿಳೆ ನ್ಯಾಯಕ್ಕಾಗಿ ಪ್ರತಿಭಟನೆಯ ಮೊರೆ ಹೋಗಿದ್ದಾಳೆ. ಆದ್ರೆ ಕಿರಣ್ ತಂಗಿ ನವ್ಯ ಹೇಳುವ ಪ್ರಕಾರ ನನ್ನ ಅಣ್ಣನಿಗೆ ಈಗ 20 ವರ್ಷ, ಆಕೆಗೆ 23 ವರ್ಷ 5 ವರ್ಷದಿಂದ ಪ್ರೀತಿ ಪ್ರೇಮ ಮಾಡಿಲ್ಲ. ಆದ್ರೆ ನನ್ನ ಅಣ್ಣನಿಗೆ ಮೋಸ ಮಾಡಿದ್ದಾರೆ, ಐದು ವರ್ಷ ಅಂದ್ರೆ ನಮ್ಮಣ್ಣ ಅಪ್ರಾಪ್ತ, ನನ್ನ ತಂದೆ ತಾಯಿ ಇಬ್ಬರಿಗೂ ಆರೋಗ್ಯ ಸರಿಯಿಲ್ಲ, ಅಣ್ಣ ಎಲ್ಲಿ ಹೋಗಿದ್ದಾನೆ ಗೊತ್ತಿಲ್ಲ. ನಮಗೇನೂ ಮಾಡೋದು ಗೊತ್ತಾಗುತ್ತಿಲ್ಲ. ಅವರಿಂದ ನಮಗೆ ಟಾರ್ಚರ್ ಆಗಿದೆ ಎಂದು ಕಣ್ಣೀರು ಹಾಕುತ್ತಾಳೆ. ಸದ್ಯ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ವ್ಯಾಪ್ತಿಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು ಸದ್ಯ ಕಿರಣ್ ನನ್ನ ಬಂಧಿಸಿದ್ದಾರೆ ಎನ್ನಲಾಗಿದೆ.
ನಿಜ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಆದ್ರೆ ಮಾನವೀಯತೆ ಇಲ್ಲವೇ ಇಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ತನಗಿಂತ ಹಿರಿಯಳೊಂದಿಗೆ ಪ್ರೇಮ ಪಾಶಕ್ಕೆ ಬಿದ್ದ ಕಿರಣ್‌ಗೆ ಈಗ ಅವಳನ್ನು ವರಿಸದೇ ಬೇರೆ ದಾರಿ ಇಲ್ಲ. ಒಟ್ನಲ್ಲಿ ಇರೋ ಗಂಡನನ್ನ ಒಲ್ಲೆ ಎಂದ ಮಹಿಳೆಗೆ ಇತ್ತ ಗಂಡನೂ ಇಲ್ಲದೆ ಇತ್ತ ಪ್ರೀತಿಸಿದವನು ಇಲ್ಲದೆ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದಾಳೆ. ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಬಾಳಿ ಬದುಕಬೇಕಾದವರು, ಸದ್ಯ ಪ್ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕಾದವರ ಬದುಕು ನಡು ಬೀದಿಯಲ್ಲಿ ತಂದಿರಿಸಿರೋದಂತೂ ಸುಳ್ಳಲ್ಲ.