ಸರ್ಕಾರಿ ದಾಖಲೆಗಳನ್ನ ಕಳ್ಳತನ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಮೂಲ ದಾಖಲೆಯಲ್ಲಿ ಸೇರಿಸಿ ಸರ್ಕಾರಿ ಹಣವನ್ನ ದುರುಪಯೋಗ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಪಿಎಸ್ ಭೂಸರೆಡ್ಡಿ ಅವರ ನಿವಾಸವನ್ನೂ ಸರ್ಚ್ ಮಾಡಿರೋ ಬಗ್ಗೆ ಮಾಹಿತಿ ಇದೆ.
ಗದಗ(ಫೆ.22): ಉತ್ತರ ಕರ್ನಾಟಕ ಸಂಜೀವಿನಿ ಅಂತಾ ಕರೆಯಲ್ಪಡುವ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ನ ಮಾಜಿ ನಿರ್ದೇಶಕ ಪಿಎಸ್ ಭೂಸರೆಡ್ಡಿ ವಿರುದ್ಧ ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಹಾಲಿ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ ದೂರು ದಾಖಲಿಸಿದ್ದಾರೆ. ದಿನಾಂಕ 1/5/2015 ರಿಂದ 10/8/2020 ರ ವರೆಗೆ ಜಿಮ್ಸ್ ನಿರ್ದೇಶಕರಾಗಿದ್ದ ಪಿಎಸ್ ಭೂಸರೆಡ್ಡಿ ಅವರು, ವಿಜ್ಞಾನ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನ ತಿದ್ದಿ, ನಕಲು ಮಾಡಿದ್ದಾರೆ ಅಂತಾ ಆರೋಪಿಸಲಾಗಿದೆ.
ಸರ್ಕಾರಿ ದಾಖಲೆಗಳನ್ನ ಕಳ್ಳತನ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಮೂಲ ದಾಖಲೆಯಲ್ಲಿ ಸೇರಿಸಿ ಸರ್ಕಾರಿ ಹಣವನ್ನ ದುರುಪಯೋಗ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಪಿಎಸ್ ಭೂಸರೆಡ್ಡಿ ಅವರ ನಿವಾಸವನ್ನೂ ಸರ್ಚ್ ಮಾಡಿರೋ ಬಗ್ಗೆ ಮಾಹಿತಿ ಇದೆ.
undefined
ಕಮೀಷನ್ ಕೇಳುವ, ಕೊಲೆ ಮಾಡಿ ಎನ್ನುವ ಸರ್ಕಾರ: ಸುರ್ಜೇವಾಲಾ ವಾಗ್ದಾಳಿ
ಗವರ್ನಿಂಗ್ ಕೌನ್ಸಿಲ್ ಬಾಡಿ ಮೀಟಿಂಗ್ ಪ್ರೊಸಿಡಿಂಗ್ಸ್, ಫೈನಾನ್ಸ್ ಕಮಿಟಿ ಪ್ರೊಸಿಡಿಗ್ಸ್ ದಾಖಲೆ ಸೇರುದಂತೆ ಹಣ ಕಾಸು, ನೇಮಕಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನ ಅಧಿಕಾರಾವಧಿಯ ನಂತರ ಪಿಎಸ್ ಭೂಸರೆಡ್ಡಿ ಹಸ್ತಾಂತರಿಸಿರಲಿಲ್ಲ. ಕಳೆದ ವರ್ಷ ಅಧಿಕಾರ ವಹಿಸಿಕೊಂಡಿದ್ದ ಡಾ. ಬಸವರಾಜ್ ಬೊಮ್ಮನಹಳ್ಳಿ, ದಾಖಲೆ ಹಸ್ತಾಂತರಿಸುವಂತೆ ಪತ್ರ ಕಳುಹಿಸಿದ್ರು.. ಮೆಮೊ ಕೂಡ ನೀಡಲಾಗಿತ್ತು.. ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಮಾರ್ಗದರ್ಶನದಂತೆ, ದೂರು ದಾಖಲಾಗಿದೆ.
ತನಖೆ ನಡೆಸ್ತಿರೋ ಪೊಲೀಸರು ಹೆಚ್ಚಿನ ಮಾಹಿತಿ ಬಿಟ್ಟು ಕೊಡ್ತಿಲ್ಲ.. ಅವ್ಯವಹಾರ ನಡೆದಿದ್ರೆ, ಎಷ್ಟು ನಡೆದಿದೆ. ಕಡತ ಕಣ್ಮರೆಯಾಗೋದಕ್ಕೆ ಕಾರಣ ಏನು ಅನ್ನೋದನ್ನ ಪೊಲೀಸರು ಹಾಗೂ ಜಿಮ್ಸ್ ಅಧಿಕಾರಿಗಳು ಜನರಿಗೆ ಸ್ಪಷ್ಟನೆ ನೀಡ್ಬೇಕಿದೆ.