
ನವದೆಹಲಿ(ಆ. 14) ಈಕೆ ಅಂತಿಂಥ ನಕಲಿ ಪೊಲೀಸ್ ಅಲ್ಲ. ಯುನಿಫಾರ್ಮ್ ನಲ್ಲಿ ಪೋಸ್ ನೀಡುತ್ತ ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದವರಿಗೆ ದಂಡ ಹಾಕುತ್ತಿದ್ದಳು!
ದೆಹಲಿ ತಿಲಕ್ ನಗರ ಪೊಲೀಸರು ನಕಲಿ ಪೊಲೀಸ್ ಅಧಿಕಾರಿಣಿಯನ್ನು ಬಂಧಿಸಿದ್ದಾರೆ. ತಾನು ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಎಂದು ಪೋಸು ಕೊಡುತ್ತಿದ್ದಳು.
ಬೆಂಗಳೂರಿನಲ್ಲಿ ನಕಲಿ ಪೊಲೀಸ್ ಪಾಸ್ ಕಂಡು ಹೌಹಾರಿದ ಗೃಹಸಚಿವ
ನಕಲಿ ಪೊಲೀಸ್ ಮಹಿಳೆಯನ್ನು ತಮನ್ನಾ ಜಹಾನ್ ಎಂದು ಗುರುತಿಸಲಾಗಿದೆ. ದೆಹಲಿ ಹೊರವಲಯದ ನಂಗೋಲಿ ನಿವಾಸಿ. ನಿರುದ್ಯೋಗಿಯಾಗಿದ್ದ ಈಕೆ ನಕಲಿ ಚಲನ್ ಇಶ್ಯೂ ಮಾಡಿ ಹಣ ಮಾಡಿಕೊಳ್ಳುವ ಉಪಾಯ ಕಂಡುಕೊಂಡಿದ್ದಳು.
ಕೊರೋನಾ ವಾರಿಯರ್ಸ ರೀತಿ ಪೀಲ್ಡಿಗಿಳಿದು ಮಾಸ್ಕ್ ಧರಿಸದವರಿಗೆ, ಸಾಮಾಜಿಕ ಅಂತರ ಉಲ್ಲಂಘನೆ ಮಾಡುವವರಿಗೆ ದಂಡ ಹಾಕುತ್ತಿದ್ದಳು. ಬುಧವಾರ ತಿಲಕ್ ನಗರ ಏರಿಯಾದಲ್ಲಿ ರೌಂಡ್ಸ್ ಗೆ ತೆರಳಿದ್ದ ಹೆಡ್ ಕಾನ್ಸ್ಟೇಬಲ್ ಸುಮೀರ್ ಸಿಂಗ್ ಕಣ್ಣಿಗೆ ಈಕೆ ದಂಡ ಹಾಕಲುತ್ತಿರುವ ದೃಶಗ್ಯ ಕಂಡುಬಂದಿದೆ.
ಅನುಮಾನಗೊಂಡ ನಂತರ ಪೊಲೀಸ್ ಅಧಿಕಾರಿಗಳೆ ಸಮವಸ್ತ್ರವಿಲ್ಲದೇ ಮಾಸ್ಕ್ ಧರಿಸದೆ ಬೇಕಂತಲೆ ಆಕೆಯ ಹತ್ತಿರ ತೆರಳಿದ್ದಾರೆ. ಅವರನ್ನು ನಿಲ್ಲಿಸಿ ದಂಡ ಕಟ್ಟಲು ನಕಲಿ ಪೊಲೀಸ್ ಹೇಳಿದ್ದಾಳೆ.
ನೀವು ಯಾವ ಠಾಣೆಯ ಅಧಿಕಾರಿ ಎಂದು ಪೊಲೀಸರೇ ಕೇಳಿದಾಗ ನಾನು ತಿಲಕ್ ನಗರದಲ್ಲಿ ಪೋಸ್ಟಿಂಗ್ ಆಗಿದ್ದೇನೆ ಎಂದು ರಾಜಾರೋಷವಾಗಿ ಹೇಳಿದ್ದಾಳೆ. ಹಾಗಾದರೆ ಕಾರ್ಡ್ ತೋರಿಸಿ ಎಂದಾಗ ಮಹಿಳೆ ದುಂಬಾಲು ಬಿದ್ದಿದ್ದಾಳೆ.
ನಾನು ಇತ್ತಿಚೇಗೆ ಅಷ್ಟೆ ಮನೆಯವರ ವಿರೋಧ ಕಟಟಿಕೊಂಡು ಮದುವೆಯಾಗಿದ್ದೆ. ಜೀವನ ನಡೆಸಲು ಹಣಕಾಸಿನ ಮುಗ್ಗಟ್ಟು ಎದುರಾಗಿದ್ದು ಈ ಕೆಲಸ ಮಾಡಿದೆ ಎಂದು ನಕಲಿ ಪೊಲೀಸ್ ಅಧಿಕಾರಿಣಿ ತನಿಖೆ ವೇಳೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ