ಪೋರ್ನ್‌ ಸೆಂಡ್ ಮಾಡ್ತಿದ್ದವನನ್ನೇ ಮನಗೆ ಕರೆದ ಗಟ್ಟಿಗಿತ್ತಿ!

Published : Aug 14, 2020, 07:04 PM ISTUpdated : Aug 14, 2020, 07:12 PM IST
ಪೋರ್ನ್‌ ಸೆಂಡ್ ಮಾಡ್ತಿದ್ದವನನ್ನೇ ಮನಗೆ ಕರೆದ ಗಟ್ಟಿಗಿತ್ತಿ!

ಸಾರಾಂಶ

ಅಶ್ಲೀಲ ವಿಡಿಯೋ ಕಳಿಸಿ ಮಹಿಳೆಗೆ ಕಿರುಕುಳ/ ಕುಟುಂಬದವರೊಂದಿಗೆ ಸೇರಿ ಆರೋಪಿಯನ್ನು ಹಿಡಿದ ಗಟ್ಟಿಗಿತ್ತಿ/ ಅಶ್ಲೀಲವಾಗಿ ಮಾತನಾಡುತ್ತಿದ್ದ ವ್ಯಕ್ತಿ/ ಮನೆಗೆ ಆಹ್ವಾನ ನೀಡಿ ಹಿಡಿದರು

ಚೆನ್ನೈ(ಆ. 14)  ಹಲವು ನಂಬರ್ ಗಳಿಂದ ಕರೆ ಮಾಡಿ, ಪೋರ್ನ್ ವಿಡಿಯೋ ಕಳುಹಿಸಿ ಚಿತ್ರ ಹಿಂಸೆ ನೀಡುತ್ತಿದ್ದಾತ ಹನಿ ಟ್ರ್ಯಾಪ್ ಮೂಲಕವೇ  ಬಲೆಗೆ ಬಿದ್ದಿದ್ದಾನೆ. 
 
ತಮಿಳುನಾಡಿನ ಚೆನ್ನೈನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ವಿಮಲ್‍ರಾಜ್ ( 29)  ಎಂದು ಗುರುತಿಸಲಾಗಿದೆ. ಇ-ಕಾಮರ್ಸ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಕುಟುಂಬದ ಸದಸ್ಯರ ಸಹಾಯದಿಂದ ಮಹಿಳೆ ಕಾಮುಕನ ಹೆಡೆಮುರಿ ಕಟ್ಟಿದ್ದಾಳೆ. ಮಹಿಳೆ  ಸುನಿಧಿ (ಹೆಸರು ಬದಲಾಯಿಸಲಾಗಿದೆ) ಪತಿಯೊಂದಿಗಿನ ಭಿನ್ನಾಭಿಪ್ರಾಯದ ನಂತರ ತವರು ಮನೆ ಸೇರಿದ್ದು, ಕಳೆದ ನಾಲ್ಕು ವರ್ಷಗಳಿಂದ ತಮ್ಮ ಕುಟುಂಬದ ಸದಸ್ಯರೊಂದಿಗಿದ್ದರು.

ಆಗಸ್ಟ್ 4ರಂದು ಮಹಿಳೆಗೆ ಮೊದಲ ಕರೆ ಬಂದಿದ್ದು, ಈ ವೇಳೆ ಆರೋಪಿ ಅಶ್ಲೀಲವಾಗಿ ಮಾತನಾಡಿದ್ದಾನೆ. ನಂತರ ಮಹಿಳೆ ಕರೆ ಕಟ್ ಮಾಡಿದ್ದು, ಆರೋಪಿ ಬೇರೆ ನಂಬರ್ ಗಳಿಂದ ಕರೆ ಮಾಡಿ ಹಿಂಸೆ ನೀಡಿದ್ದಾನೆ. ಅಲ್ಲದೆ ಆಗಸ್ಟ್ 8ರಂದು ಮಹಿಳೆಯ ವಾಟ್ಸಪ್‍ಗೆ ಪೋರ್ನ್ ವಿಡಿಯೋ ಕಳುಹಿಸಿದ್ದಾನೆ.

ತನ್ನದೇ ವಿಡಿಯೋ  ಅಪ್ ಲೋಡ್ ಮಾಡಿ ಸಿಕ್ಕಿಬಿದ್ದ ಪ್ರೊಫೆಸರ್

ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ಕುಟುಂಬಸ್ಥರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದಾಳೆ.  ಪ್ಲಾನ್ ಒಂದನ್ನು ರೂಪಿಸಿ ಆರೋಪಿಯನ್ನು ಬಲೆಗೆ ಕೆಡವಲು ಸಿದ್ಧತೆ ಮಾಡಿಕೊಂಡಿದ್ದಾರೆ. 'ಮಾತನಾಡಬೇಕು, ಮನೆಗೆ ಬಾ' ಎಂದು ಕಾಮಾಂಧನಿಗೆ ಆಹ್ವಾನ ನೀಡಲಾಗಿದ್ದು ಬರುತ್ತೇನೆ ಎಂದು ಆತ ಒಪ್ಪಿಕೊಂಡಿದ್ದಾನೆ.

ಮಹಿಳೆ ಅಡ್ರೆಸ್ ನೀಡಿ ಬರಹೇಳಿದ್ದು ಆತ ಮನೆ ಪ್ರವೇಶ ಮಾಡುತ್ತಿದ್ದಂತೆ ಅಡಗಿ ಕುಳಿತಿದ್ದ ಮನೆಯವರೆಲ್ಲರೂ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆ ಪತಿಯ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!