ಅತ್ಯಾಚಾರ ಆರೋಪ FIRನಿಂದ ಕೈಬಿಡಲು ‌₹4ಲಕ್ಷ ಲಂಚ: ಮಹಿಳಾ ಪೊಲೀಸ್ ಅಧಿಕಾರಿ ಅರೆಸ್ಟ್

Published : Jun 30, 2022, 10:36 PM IST
ಅತ್ಯಾಚಾರ ಆರೋಪ FIRನಿಂದ ಕೈಬಿಡಲು ‌₹4ಲಕ್ಷ ಲಂಚ: ಮಹಿಳಾ ಪೊಲೀಸ್ ಅಧಿಕಾರಿ ಅರೆಸ್ಟ್

ಸಾರಾಂಶ

Crime News: ಕರ್ನಾಲ್ ಎಎಸ್‌ಐ ಸರಿತಾ ರಾಣಿ ದೂರುದಾರರಿಗೆ 10 ಲಕ್ಷ ಲಂಚ ನೀಡುವಂತೆ ಹೇಳಿದ್ದರು ಎನ್ನಲಾಗಿದೆ. ಕೊನೆಗೆ 8 ಲಕ್ಷ ರೂ.ಗಳಲ್ಲಿ ವಿಷಯ ಇತ್ಯರ್ಥವಾಗಿದ್ದು, ಲಂಚವನ್ನು ಕಂತುಗಳಲ್ಲಿ ನೀಡಬೇಕಾಗಿ ಪೊಲೀಸ್‌ ಅಧಿಕಾರಿ ತಿಳಿಸಿದ್ದರು ಎಂದು ಆರೋಪಿಸಲಾಗಿದೆ

ಹರಿಯಾಣ (ಜೂ. 30): ಎಫ್‌ಐಆರ್‌ನಿಂದ ಅತ್ಯಾಚಾರ ಆರೋಪವನ್ನು (Rape Charge)ತೆಗೆದುಹಾಕಲು 4 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಮಹಿಳಾ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಅವರನ್ನು ಹರಿಯಾಣ ವಿಜಿಲೆನ್ಸ್ ತಂಡವು ಕರ್ನಾಲ್‌ನಿಂದ ಬಂಧಿಸಿದೆ. ಆರೋಪಿ ಪೊಲೀಸ್ ಅಧಿಕಾರಿಯನ್ನು ಸರಿತಾ ರಾಣಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಸೆಕ್ಟರ್ 32-33 ಪೊಲೀಸ್ ಠಾಣೆ ಆವರಣದಲ್ಲಿ ಬಂಧಿಸಲಾಗಿದೆ.

ಇದರಲ್ಲಿ 5 ಲಕ್ಷ ಡಿಎಸ್‌ಪಿ ಹಾಗೂ 2 ಲಕ್ಷ ಎಸ್‌ಎಚ್‌ಒಗೆ ನೀಡುವಂತೆ ಎಎಸ್‌ಐ 8 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಪ್ರಕರಣದಲ್ಲಿ ಡಿಎಸ್‌ಪಿ ಮತ್ತು ಎಸ್‌ಎಚ್‌ಒ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. 

ಎಎಸ್‌ಐ ಸರಿತಾ ರಾಣಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಆಕೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಜುಂಡ್ಲಾ ಪ್ರದೇಶದ ನಿವಾಸಿಯಾದ ಅವರ ಸೋದರಳಿಯನು 2020 ರಲ್ಲಿ ತರವಾಡಿ ಪ್ರದೇಶದಲ್ಲಿ ಮಹಿಳೆಯನ್ನು ಮದುವೆಯಾಗಿದ್ದನು ಎಂದು ದೂರುದಾರರು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ, ದಂಪತಿಗಳು ಮತ್ತು ಅವರ ಹೆಂಡತಿಯ ನಡುವೆ ಕಲಹ ಉಂಟಾಗಿ ಪತಿ ಮತ್ತು ಅತ್ತೆಯ ವಿರುದ್ಧ  ವರದಕ್ಷಿಣೆ ಬೇಡಿಕೆ ಪ್ರಕರಣ ದಾಖಲಿಸಿದ್ದಾರೆ. ಹಿಂದಿ ದೈನಿಕ ಅಮರ್ ಉಜಾಲಾ ವರದಿಯ ಪ್ರಕಾರ, ತನ್ನ ಗರ್ಭವನ್ನು ತೆಗೆಯಲು ಬಲವಂತ ಮಾಡಲಾಗಿದ್ದು ಜೀವ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆಗಾಗಿ ಸೊಸೆಯನ್ನು ವಿದ್ಯುತ್‌ ತಂತಿಗೆ ಕಟ್ಟಿ ಕೊಂದ ಅತ್ತೆ-ಮಾವ

ತನ್ನ ಮಾವ ಕೂಡ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆರಂಭದಲ್ಲಿ, ವ್ಯಕ್ತಿಯ ಪೋಷಕರು ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಅವರನ್ನು ಭೇಟಿ ಮಾಡಿ ಆರೋಪಗಳನ್ನು ಆಧಾರರಹಿತ ಎಂದು ಹೇಳಿದ್ದರು. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಎಸ್ಪಿ ಭರವಸೆ ನೀಡಿದ್ದರು. 

ವ್ಯಕ್ತಿಯ ಪೋಷಕರು ಡಿಎಸ್ಪಿ ಅವರನ್ನು ಭೇಟಿ ಮಾಡಲು ಹೋದಾಗ, ಅವರು ಪ್ರಕರಣದ ತನಿಖಾಧಿಕಾರಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಹೀಗಾಗಿ ಅವರು ಐಒ ಸರಿತಾ ರಾಣಿ ಅವರನ್ನು ಭೇಟಿ ಮಾಡಲು ಹೋದಾಗ, ಅವರು ಲಂಚ ನೀಡುವಂತೆ ಪರೋಕ್ಷವಾಗಿ ಕೇಳಿದ್ದರು. ಎಷ್ಟು ಕೊಡಬೇಕು ಎಂದು ಕೇಳಿದಾಗ 10 ಲಕ್ಷ ಕೊಡುವಂತೆ ಎಎಸ್‌ಐ ಹೇಳಿದ್ದಾರೆ ಎನ್ನಲಾಗಿದೆ. ಕೊನೆಗೆ 8 ಲಕ್ಷ ರೂ.ಗಳಲ್ಲಿ ವಿಷಯ ಇತ್ಯರ್ಥವಾಗಿದ್ದು, ಲಂಚವನ್ನು ಕಂತುಗಳಲ್ಲಿ ನೀಡಬೇಕಾಗಿ ಪೊಲೀಸ್‌ ಅಧಿಕಾರಿ ತಿಳಿಸಿದ್ದರು ಎಂದು ಆರೋಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!