ಭತ್ತ ನಾಟಿ ಮಾಡುತ್ತಿರುವಾಗ ಕುಸಿದು ಬಿದ್ದು ರೈತ ಸಾವು, ಮರುಗಿದ ಜನ

Published : Jun 30, 2022, 07:48 PM ISTUpdated : Jun 30, 2022, 07:50 PM IST
ಭತ್ತ ನಾಟಿ ಮಾಡುತ್ತಿರುವಾಗ ಕುಸಿದು ಬಿದ್ದು ರೈತ ಸಾವು, ಮರುಗಿದ ಜನ

ಸಾರಾಂಶ

* ಉಳುಮೆ ಮಾಡುತ್ತಿರುವಾಗಲೇ ರೈತ ಸಾವು, ಮರುಗಿದ ಜನ * ಭತ್ತದ ಗದ್ದೆ ಉಳುತ್ತಿರುವಾಗಲೇ ಹೃದಯಾಘಾತದಿಂದ ಸಾವು * ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದ ಘಟನೆ

ಉಡುಪಿ, (ಜೂನ್.30): ಸಾವು ಹೇಳಿ ಕೇಳಿ ಬರಲ್ಲ.. ಯಾವ ಹೊತ್ತಿನಲ್ಲಿ ಸಾವು ಬರುತ್ತೋ ಗೊತ್ತಿಲ್ಲ. ಇನ್ನು ಇತ್ತೀಚೆಗೆ ಎಳೆಪ್ರಾಯದ ಯುವಕರಲ್ಲಿ, ಮಧ್ಯವಯಸ್ಕರಲ್ಲಿ ಹೃದಯಾಘಾತ ಸಾಮಾನ್ಯವಾಗಿದೆ. ಏನಾದರೂ ಕೆಲಸ ನಡೆಸುತ್ತಿರುವಾಗಲೇ ಪೂರ್ವ ಸೂಚನೆ ಇಲ್ಲದೆ ಹೃದಯಘಾತ ಸಂಭವಿಸಿದ ಅನೇಕ ಘಟನೆಗಳನ್ನು ಕಂಡಿದ್ದೇವೆ. 

ಹೌದು...ಭತ್ತದ ಗದ್ದೆ ಉಳುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬ ಅಸುನೀಗಿದ್ದಾರೆ.  ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕುಂದಾಪುರದ ಕೆರಾಡಿ ಗ್ರಾಮದ ದೀಟಿ ಎಂಬಲ್ಲಿ ಕೃಷಿ ಕಾಯಕದಲ್ಲಿ ತೊಡಗಿದಾಗಲೇ ವ್ಯಕ್ತಿಯೊಬ್ಬರು ಗದ್ದೆಯಲ್ಲಿ ಬಿದ್ದು ಅಸುನಗಿದ್ದಾರೆ. ಹರಿಹರ ಮೂಲದ ನಡುವಯಸ್ಸಿನ ರಾಜು ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಬಿತ್ತನೆಗೂ ಮುನ್ನ ಗದ್ದೆ ಹದ ಮಾಡುವ ಸಲುವಾಗಿ ಬೆಳಗ್ಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದರು. ಇಂದು ವಿಪರೀತ ಮಳೆ ಇದ್ದ ಕಾರಣ, ಗದ್ದೆ ಹದ ಮಾಡುವ ಕಾರ್ಯ ಬಿರುಸಿನಿಂದ ಸಾಗಿತ್ತು. ಕೆಲಸ ಮಾಡುತ್ತಿರುವಾಗಲೇ ಜವರಾಯ ಬಂದೆರಗಿದ್ದಾನೆ.

Vijayapura News: ಕೃಷ್ಣಾತೀರದ ನರಭಕ್ಷಕ ಮೊಸಳೆಗೆ ಮತ್ತೊಂದು ಬಲಿ: ಗ್ರಾಮಸ್ಥರಲ್ಲಿ ಆತಂಕ

ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ರಾಜು ಉಳುತ್ತಿದ್ದರು..ಟ್ರ್ಯಾಕ್ಟರ್ ಮೇಲಿದ್ದಾಗಲೇ ಹೃದಯಾಘಾತ ಸಂಭವಿಸಿದೆ.ಗದ್ದೆಯಲ್ಲಿ ಯಾರು ಇಲ್ಲದ ಹಿನ್ನೆಲೆಯಲ್ಲಿ, ರಾಜು  ಟ್ರಾಕ್ಟರ್ ನಿಂದ ಕೆಳಗೆ ಬಿದ್ದರು.ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ರಾಜು ಗದ್ದೆಯಲ್ಲಿ ಶವವಾಗಿದ್ದರು.

ಸ್ಥಳೀಯರು ಕೂಡಲೇ  ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾಜು ಇಹಲೋಕ ತ್ಯಜಿಸಿದ್ದರು.ಕರಾವಳಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಉಳುಮೆ ಮಾಡಲೆಂದೇ ರಾಜು ಉಡುಪಿಯ ಕುಂದಾಪುರಕ್ಕೆ ಬಂದಿದ್ದರು. ಹೊಟ್ಟೆಪಾಡಿಗೆ ಬಂದು ದುಡಿಯುವ  ಸಂದರ್ಭದಲ್ಲೇ ನಡೆದ ಹೃದಯವಿದ್ರಾವಕ ಘಟನೆ ಯಿಂದ ಅವರ ಕುಟುಂಬ ತೀವ್ರ ಆಘಾತ ಎದುರಿಸಿದೆ. ಘಟನೆ ಸಂಭವಿಸಿದ ಕೆರಾಡಿ ಗ್ರಾಮ ದಿಗ್ಬ್ರಮೆ ಗೊಂಡಿದೆ.ಗದ್ದೆಯಲ್ಲಿ ಹೆಣವಾಗಿ ಬಿದ್ದ ರಾಜು ಶವವನ್ನು ನೋಡಿ  ದೀಟಿ ಭಾಗದ ಜನತೆ ಮರುಗಿದ್ದಾರೆ. 

ಕಾಲು ಜಾರಿ ಕೆರೆಗೆ ಬಿದ್ದು ಯುವತಿ  ಸಾವು
ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವನ್ನಪಿರುವ ಘಟನೆ ಇಂದು(ಗುರುವಾರ) ಕಾಪು ತಾಲೂಕಿನ ಮಡಂಬು ಎಂಬಲ್ಲಿ ನಡೆದಿದೆ.

ಮಡುಂಬು ಗೋಪಾಲ್ ಶೆಟ್ಟಿ ಪುತ್ರಿ ಶರ್ಮಿಳಾ ಶರ್ಮಿಳಾ (22) ಸಾವನ್ನಪ್ಪಿದ ಯುವತಿ. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಊರಿಗೆ ಬಂದಿರುವ ಶರ್ಮಿಳಾ ಮನೆ ಸಮೀಪದ ಕೆರೆಗೆ ಕಾಲು ಜಾರಿ ಬಿದ್ದಿದ್ದಾಳೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಕುಣಿಯುತ್ತಲೇ ಹೃದಯಾಘಾತದಿಂದ ಸಾವಾಗಿತ್ತು
ಅತ್ಯಂತ ಕಡಿಮೆ ಅವಧಿಯಲ್ಲಿ ಉಡುಪಿಯಲ್ಲಿ ನಡೆದ ಎರಡನೇ ದುರಂತವಿದು.ಜೂ 20 ರಂದು ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಅಂಬಾಗಿಲಿನಲ್ಲಿ ವ್ಯಕ್ತಿಯೊಬ್ಬರು ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಪಿಗ್ಮಿ ಕಲೆಕ್ಟರ್ ಆಗಿದ್ದ ಗಣಪತಿ ಆಚಾರ್ಯ ಮೆಹೆಂದಿ ಮನೆಯಲ್ಲಿ ನೋಡು ನೋಡುತ್ತಲೇ ಸಾವನ್ನಪ್ಪಿದ್ದರು.

ಮೆಹಂದಿ ಕಾರ್ಯಕ್ರಮದಲ್ಲಿ ನರ್ತಿಸುತ್ತಿದ್ದ ಗಣಪತಿಯವರು ಆಯಾಸಗೊಂಡು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆ, ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇವರ ಈ ಸಾವಿನ ದೃಶ್ಯಾವಳಿ ಜಿಲ್ಲೆಯಾದ್ಯಂತ ವೈರಲ್ ಆಗಿತ್ತು.

ಇದೀಗ ಟ್ರ್ಯಾಕ್ಟರ್ ನಿಂದ ಉರುಳಿಬಿದ್ದ ವ್ಯಕ್ತಿಯ ಸಾವು , ಹೃದಯಾಘಾತದ ಬಗೆಗಿನ ಜನರ ಆತಂಕವನ್ನು ಮತ್ತಷ್ಟು ಹೆಚ್ಚು ಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ