Crime News: ವರದಕ್ಷಿಣೆಗಾಗಿ ಸೊಸೆಯನ್ನು ವಿದ್ಯುತ್‌ ತಂತಿಗೆ ಕಟ್ಟಿ ಕೊಂದ ಅತ್ತೆ-ಮಾವ

Published : Jun 30, 2022, 09:44 PM IST
Crime News: ವರದಕ್ಷಿಣೆಗಾಗಿ ಸೊಸೆಯನ್ನು ವಿದ್ಯುತ್‌ ತಂತಿಗೆ ಕಟ್ಟಿ ಕೊಂದ ಅತ್ತೆ-ಮಾವ

ಸಾರಾಂಶ

ಸಂತ್ರಸ್ತೆಯ ಎಂಟು ವರ್ಷದ ಮಗಳು   ತನ್ನ ತಾಯಿಯ ಅಜ್ಜಿಗೆ ತಿಳಿಸಿದಾಗ ಈ ಘಟನೆ  ಬೆಳಕಿಗೆ ಬಂದಿದೆ. ತನ್ನ ತಂದೆಯ ಅಜ್ಜ ಮತ್ತು ಅಜ್ಜಿ ತನ್ನ ತಾಯಿಯನ್ನು ವಿದ್ಯುತ್ ತಂತಿಯಿಂದ ಕೊಂದಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಪಶ್ಚಿಮ ಬಂಗಾಳ (ಜೂ. 30): ಭೀಕರ ಘಟನೆಯೊಂದರಲ್ಲಿ ಮಹಿಳೆಯೊಬ್ಬರನ್ನು ವರದಕ್ಷಿಣೆಗಾಗಿ ಆಕೆಯ ಮಾವ  ವಿದ್ಯುತ್‌ ತಂತಿಗೆ (Live Wire) ಕಟ್ಟಿ ಒಂದು ಗಂಟೆ ಹಾಗೆ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.  ಸಂತ್ರಸ್ತೆಯ ಎಂಟು ವರ್ಷದ ಮಗಳು  ತನ್ನ ತಾಯಿಯ ಅಜ್ಜಿಗೆ ಈ ಬಗ್ಗೆ ತಿಳಿಸಿದಾಗ ಘಟನೆ  ಬೆಳಕಿಗೆ ಬಂದಿದೆ. ತನ್ನ ತಂದೆಯ ಅಜ್ಜ ಮತ್ತು ಅಜ್ಜಿ ತನ್ನ ತಾಯಿಯನ್ನು ವಿದ್ಯುತ್ ತಂತಿಯಿಂದ ಕೊಂದಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಕೊಲೆಯಾದ ಮಹಿಳೆಯನ್ನು ಮೊಹ್ಸಿನಾ ಬಿವಿ (29) ಎಂದು ಪೊಲೀಸರು ಗುರುತಿಸಿದ್ದಾರೆ.

ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ಆಕೆಯ ಮಾವ ಖೋಡಾಬೌಕ್ಸ್ ಮೊಂಡಲ್ ಮತ್ತು ಅವರ ಪತ್ನಿ ರಹೀಮಾ ಬೀವಿ ಅವರು ದಂಗಾ ಗ್ರಾಮದ ಕುಟುಂಬದ ಮನೆಯಲ್ಲಿ ಅವಳನ್ನು ಕಟ್ಟಿ, ವಿದ್ಯುತ್‌ ವೈರ್‌ಗೆ ಜೋಡಿಸಿದ್ದಾರೆ ಅಲ್ಲದೇ  ಒಂದು ಗಂಟೆ ಕಾಲ ಆಕೆಯನ್ನು ಅಲ್ಲಿಯೇ ಬಿಟ್ಟಿದ್ದಾರೆ. ಬಳಿಕ ಕೆಲವು ಸಂಬಂಧಿಕರು ಆಕೆಯನ್ನು ಛಾಪ್ರಾ ಗ್ರಾಮಾಂತರ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಹಿಳೆ ಮೃತಪಟ್ಟಿದ್ದಾಳೆ.

ಮೂಲಗಳ ಪ್ರಕಾರ, ಸಂತ್ರಸ್ತೆಯ ಅತ್ತೆ-ಮಾವ ಬುಧವಾರ ಬೆಳಗ್ಗೆ ಆಕೆಯ ಪೋಷಕರಿಗೆ ತಪ್ಪಾಗಿ ವಿದ್ಯುತ್ ಸ್ಪರ್ಶಿಸಿರುವುದಾಗಿ ತಿಳಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಕೇರಳದ ವಲಸೆ ಕಾರ್ಮಿಕರಾದ ಮೊಹ್ಸಿನಾ ಅವರ ಪತಿ ಸಮದ್ ಘಟನೆಯ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಹತ್ತು ವರ್ಷಗಳ ಹಿಂದೆ ಮೊಹ್ಸಿನಾ ಹಾಗೂ ಸಮದ್ ವಿವಾಹವಾಗಿತ್ತು.

ಇದನ್ನೂ ಓದಿ: ಪತ್ನಿ ಕುಟುಂಬಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ: ಸಂಧಾನಕ್ಕೆ ಕರೆದು ರಾಕ್ಷಸ ನಡೆ!

ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಸ್ವಯಂ ಪ್ರೇರಿತವಾಗಿ ಕೊಲೆ ತನಿಖೆ ಆರಂಭಿಸಿದ್ದಾರೆ. ಆದರೆ, ಬುಧವಾರ ಸಂಜೆಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಅತ್ತೆ-ಮಾವ ಪರಾರಿಯಾಗಿದ್ದಾರೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?