ಅಕ್ರಮ ಸಂಬಂಧದ ವಿಡಿಯೋ ದೊಡ್ಡ ಪರದೆಯಲ್ಲಿ, ಮಹಿಳೆ ಆತ್ಮಹತ್ಯೆ

Published : May 08, 2021, 03:52 PM ISTUpdated : May 08, 2021, 04:12 PM IST
ಅಕ್ರಮ ಸಂಬಂಧದ ವಿಡಿಯೋ ದೊಡ್ಡ ಪರದೆಯಲ್ಲಿ, ಮಹಿಳೆ ಆತ್ಮಹತ್ಯೆ

ಸಾರಾಂಶ

ವಿವಾಹವೇತರ ಸಂಬಂಧ ಇಟ್ಟುಕೊಂಡಿದ್ದ ಆರೋಪ/  ಕೇಶ ಮಂಡನ ಮಾಡಿ ಬೆತ್ತಲೆಯಾಗಿ  ಮೆರವಣಿಗೆ ಮಾಡಿದರು/ ಗ್ರಾಮದದಲ್ಲಿ ದೊಡ್ಡ ಪರದೆ ಹಾಕಿ ಮಹಿಳೆಯ ಅಕ್ರಮ ಸಂಬಂಧದ ವಿಡಿಯೋ ಪ್ರಸಾರ/ ನೊಂದ ಮಹಿಳೆ ಆತ್ಮಹತ್ಯೆಗೆ ಶರಣು

ಅಗರ್ತಲಾ(ಮೇ 08)  ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದ ಮಹಿಳೆಯನ್ನು ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಲಾಗಿದೆ. ಇದಾಗಿ ಒಂದು ದಿನದ ನಂತರ ಅವಮಾನ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತ್ರಿಪುರ ಹೈಕೋರ್ಟ್  ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ತಿಳಿಸಿದೆ. 

ದಕ್ಷಿಣ ತ್ರಿಪುರದ ಸಬ್ರೂಮ್‌ನ ಬೆಟಗಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.  ಮಹಿಳೆ ಇನ್ನೊಬ್ಬ ಪುರುಷನ ಜತೆ ಸರಸದಲ್ಲಿದ್ದ ದೃಶ್ಯವನ್ನು ದೊಡ್ಡ ಪರದೆ ಮೇಲೆ ಪ್ರದರ್ಶನ ಮಾಡಲಾಗಿದೆ. ಇದಾದ ನಂತರ ಆಕೆಗೆ ಚಿತ್ರಹಿಂಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಏಳು ಜನರನ್ನು ಬಂಧಿಸಲಾಗಿದೆ.

ಅವಳ ಗಂಡ ಸತ್ತಿದ್ದ, ಆಕೆಯ ಹೆಂಡತಿ ತೀರಿಕೊಂಡಿದ್ದಳು... ಇಬ್ಬರ ತೆವಲಿಗೆ ಮಕ್ಕಳು ಅನಾಥ

ಮಹಿಳೆಯ ಮನೆಯ ಹೊರಗೆ ಜಮಾಯಿಸಿದ ಜನರು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ.   ಆಕೆಯ ಕೂದಲನ್ನು ಕತ್ತರಿಸಿ ಊರಿನ ತುಂಬಾ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ.

ಈ ಎಲ್ಲ ಘಟನೆಗಳು ಆದ ಮರುದಿನ ಮಹಿಳೆ ಪ್ರಾಣ ಕಳೆದುಕೊಳ್ಳುವ ತೀರ್ಮಾನ ಮಾಡಿದ್ದಾಳೆ . ಮಾನವ ಹಕ್ಕುಗಳ ಅತಿ ದೊಡ್ಡ ಉಲ್ಲಂಘನೆಯಾಗಿದೆ. ಮುಖ್ಯ ನ್ಯಾಯಮೂರ್ತಿ ಎ.ಎ.ಕುರೇಶಿ ಮತ್ತು ನ್ಯಾಯಮೂರ್ತಿ ಎಸ್.ತಲಪಾತ್ರರ ವಿಭಾಗೀಯ ಪೀಠವು ಈ ಪ್ರಕರಣದ ಬಗ್ಗೆ ಸುಮೊ ಮೋಟು ವಿಚಾರಣೆಯನ್ನು ಪ್ರಾರಂಭಿಸಿದೆ.  ಪೂರ್ಣ ವರದಿಯನ್ನು ಕೋರಿ ರಾಜ್ಯ ಮುಖ್ಯ ಕಾರ್ಯದರ್ಶಿ ಡಿಜಿಪಿ, ಎಸ್ಪಿ (ದಕ್ಷಿಣ ತ್ರಿಪುರ) ಮತ್ತು ಎಸ್‌ಡಿಪಿಒ (ಸಬ್ರೂಮ್) ಗೆ ನೋಟಿಸ್ ನೀಡಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?
ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು