
ಕೋಲಾರ, [ಡಿ.07]: ಅದೊಂದು ಆಂದ್ರದ ವಲಸೆ ಬಂದಿದ್ದ ಬಡಕುಟುಂಬ. ಬದುಕಿಗಾಗಿ ಕೂಲಿ ಮಾಡಿಕೊಂಡಿದ್ದ ಕುಟುಂಬಕ್ಕೆ ಆ ಕುಡುಕ ಗಂಡನ ಕಾಟ ಬೇರೆ. ಕುಡುಕ ಗಂಡನ ಸಲುವಾಗಿ ಬೇಸತ್ತ ಮಹಿಳೆ ಬೇರೊಬ್ಬನ ಪರಸಂಗ ಶುರು ಮಾಡಿದ್ದಳು.
ಆದ್ರೆ, ಹೆಂಡತಿಯ ಪರಸಂಗ ವಿಷ್ಯಾ ಗಂಡನಿಗೆ ತಿಳಿದಿದೆ. ಇದರಿಂದ ಪ್ರಿಯಕರ ಜತೆ ಸೇರಿ ತನ್ನ ಪತಿಯನ್ನೇ ಮುಗಿಸಿದ್ದಾಳೆ. ಈ ಘಟನೆ ಕೋಲಾರ ಬಂಗಾರಪೇಟೆ ತಾಲ್ಲೂಕು ಅನಂತಪುರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸರಸದ ನಡುವೆ ಕಲಹ: ಬೆತ್ತಲೆ ಇದ್ದವನನ್ನು ಬಡಿದು ಕೊಂದಳು..!
ಆರೋಪಿಗಳಾದ ಗಾಯತ್ರಿ ಮತ್ತು ಈಕೆಯ ಪ್ರಿಯಕರ ವೆಂಕಟೇಶ್ ಇದೀಗ ಜೈಲು ಪಾಲಾಗಿದ್ದಾರೆ. ಸಿಮ್ ಕಾರ್ಡ್ ಇಲ್ಲದ ಮೊಬೈಲ್ ನಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಘನಘೋರ ದುರಂತದ ಹಿನ್ನೆಲೆ..!
ಅವತ್ತು ಡಿಸೆಂಬರ್-1 ರಂದು ಕೋಲಾರ ಜಿಲ್ಲೆ ಕೆಜಿಎಫ್ ನ ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡವಲಗಮಾದಿ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪುರುಷನೊಬ್ಬನ ಶವಪತ್ತೆಯಾಗಿತ್ತು.
ಈ ಕುರಿತು ಸ್ಥಳಕ್ಕೆ ಬಂದ ಬೆಮೆಲ್ ನಗರ ಪೊಲೀಸರು ಶವವನ್ನು ಪರಿಶೀಲನೆ ನಡೆಸಿದಾಗ ಇದೊಂದು ವ್ಯವಸ್ಥಿತ ಕೊಲೆ ಅನ್ನೋದು ಗೊತ್ತಾಗಿತ್ತು. ಅಲ್ಲದೆ ಶವದ ಬಳಿ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಸಿಕ್ಕಿತ್ತು ಅದನ್ನು ಬಿಟ್ಟರೆ ಬೇರೆ ಯಾವುದೇ ಸುಳುವು ಸಿಕ್ಕಿರಲಿಲ್ಲ.
ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದ ಸಿಪಿಐ ಮುಸ್ತಾಕ್ ಪಾಷಾ ಮತ್ತು ತಂಡ, ಕೊಲೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕೊಲೆಯಾದ ವ್ಯಕ್ತಿ ಆಂದ್ರ ಮೂಲದ,ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಅನಂತಪುರ ಗ್ರಾಮದಲ್ಲಿ ವಾಸವಿದ್ದ ಗಾರೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಅನ್ನೋದು ಗೊತ್ತಾಗಿತ್ತು.
ಆದ್ರೆ ಕೊಲೆ ಮಾಡಿದ ವರ್ಯಾರು ಅನ್ನೋದರ ಬೆನ್ನಟ್ಟಿದ ಪೊಲೀಸರಿಗೆ ಶಾಕ್ ಒಂದು ಕಾದಿತ್ತು. ಅದು ವೆಂಕಟೇಶ್ ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ. ಹೆಂಡತಿ ಗಾಯತ್ರಿ ಮತ್ತು ಆಕೆಯ ಪ್ರಿಯಕರ ಯಲ್ಲಪ್ಪ ಎನ್ನುವುದು ತಿಳಿದು ಬಂದಿದೆ.
ಅಷ್ಟಕ್ಕೂ ಇಂಥಾದೊಂದು ಕೊಲೆಗೆ ಕಾರಣ ಏನು ಎನ್ನುವುದನ್ನು ನೋಡುವುದಾದ್ರೆ, ಆಂದ್ರದಿಂದ ಬಂದಿದ್ದ ಬಂದು ಬಂಗಾರಪೇಟೆ ತಾಲ್ಲೂಕು ಅನಂತಪುರ ಗ್ರಾಮದಲ್ಲಿ ನೆಲೆಸಿದ್ದ ಕೊಲೆಯಾದ ವೆಂಕಟೇಶ್ ಮತ್ತು ಗಾಯತ್ರಿಗೆ ಇಬ್ಬರು ಪುಟ್ಟ ಮಕ್ಕಳಿದ್ರು.ಗಾರೆ ಕೆಲಸಮಾಡಿಕೊಂಡಿದ್ದ.
ವೆಂಕಟೇಶ್ ಗೆ ಅತಿಯಾದ ಕುಡಿತದ ಚಟವಿತ್ತು. ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಇದರಿಂದ ಬೇಸತ್ತಿದ್ದ ಗಾಯತ್ರಿ ಅಲ್ಲೇ ಗಾರೆ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಎನ್ನುವನನ್ನು ಪರಿಚಯ ಮಾಡಿಕೊಂಡಿದ್ದಾಳೆ. ಅದು ಮಂಚಕ್ಕೆ ಹೋಗುವ ಮಟ್ಟಿಗೆ ಬೆಳೆದಿದೆ.
ಈ ವಿಷಯ ವೆಂಕಟೇಶನಿಗೆ ಗೊತ್ತಾಗಿದ್ದು, ಇದೇ ವಿಚಾರವಾಗಿ ಗಾಯತ್ರಿ ಜತೆ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ಗಾಯತ್ರಿ ಕೊನೆಗೆ ತನ್ನ ಪ್ರಿಯಕರ ಯಲ್ಪಪ್ಪ ಜತೆ ಸೇರಿ ಗಂಡನನ್ನು ಮುಗಿಸಲು ಮಾಡಿದ್ದಾಳೆ.
ಅದರಂತೆ ನವೆಂಬರ್-24 ರಂದು ಯಲ್ಲಪ್ಪ ಪ್ಲಾಣ್ ಮಾಡಿ ಗಾಯತ್ರಿಯ ಗಂಡ ವೆಂಕಟೇಶ್ ನನ್ನು ಎಣ್ಣೆ ಹೊಡೆಯೋಣ ಬಾ ಎಂದು ಕರೆದುಕೊಂಡು ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡವಲಗಮಾದಿ ಗ್ರಾಮದ ಬಳಿಯ ಅರಣ್ಯ ಪ್ರದೇಶಕ್ಕೆ ಹೋಗಿದ್ದಾನೆ.
ಅಲ್ಲಿ ವೆಂಕಟೇಶ್ ಗೆ ಚೆನ್ನಾಗಿ ಕುಡಿಸಿ, ನಂತರ ಅವನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಪೆಟ್ರೋಲ್ ಸುರಿದು ಶವವನ್ನು ಸುಟ್ಟಾಕಿದ್ದಾನೆ.ಆದ್ರೆ ಶವದ ಬಳಿ ಸಿಕ್ಕ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ನಿಂದ ಆರೋಪಿಯ ಜಾಡು ಹಿಡಿದ ಪೊಲೀಸ್ರು, ಯಲ್ಲಪ್ಪ ಹಾಗೂ ಗಾಯತ್ರಿಯನ್ನು ಬಂಧಿಸಿದ್ದಾರೆ.
ಇತ್ತ ಅಮ್ಮನ ಪರಸಂಗಕ್ಕೆ ಅಪ್ಪ ಕೊಲೆಯಾದ್ರೆ, ಕೊಲೆ ಮಾಡಿದ ತಾಯಿ ಜೈಲು ಪಾಲಾಗಿದ್ದಾಳೆ. ಇವರಿಬ್ಬರ ಪುಟ್ಟ ಮಕ್ಕಳು ಮಾತ್ರ ಬೀದಿ ಪಾಲಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ