
ಮೈಸೂರು, [ಡಿ.07]: ಬಸ್ ಇಳಿಯುವಾಗ ಮಹಿಳೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಇಂದು [ಶನಿವಾರ] ಮೖಸೂರಿನ ನಂಜನಗೂಡು ತಾಲೂಕಿನ ಕಡುಬಿನ ಕಟ್ಟೆ ಗೇಟ್ ಬಳಿ ನಡೆದಿದೆ.
ನಂಜನಗೂಡು ತಾಲೂಕಿನ ಚನ್ನಪಟ್ಟಣ ನಿವಾಸಿ ಭಾಗ್ಯಮ್ಮ(30) ಮೃತ ದುರ್ದೈವಿ. ಕಡುಬಿನ ಕಟ್ಟೆ ಸಮೀಪದ ಮುರಾರ್ಜಿ ವಸತಿ ಶಾಲೆಯಲ್ಲಿ ಭಾಗ್ಯಮ್ಮ ಪುತ್ರಿ ವ್ಯಾಸಾಂಗ ಮಾಡುತ್ತಿದ್ದಾಳೆ.
ಟ್ಯೂಷನ್ ಗೆ ಹೋಗುವ ಬಾಲಕಿಯೇ ಕಿಡ್ನ್ಯಾಪ್ ಆದಳು : ಪೋಷಕರೇ ಎಚ್ಚರ!
ಇಂದು [ಶನಿವಾರ] ವಾರಾಂತ್ಯವಾಗಿದ್ದರಿಂದ ಕರುಳ ಬಳ್ಳಿಯನ್ನ ಮಾತನಾಡಿಸಲೆಂದು ಕೆಎಸ್ಆರ್ಟಿಸಿ ಬಸ್ ಹತ್ತಿದ್ದ ಭಾಗ್ಯಮ್ಮ, ನಂಜನಗೂಡು ತಾಲೂಕಿನ ಕಡುಬಿನ ಕಟ್ಟೆ ಗೇಟ್ ಬಳಿ ಬಸ್ ಇಳಿಯುತ್ತಿದ್ದಾಗ ಬಿದ್ದು ಸಾವನ್ನಪ್ಪಿದ್ದಾಳೆ.
ಬಸ್ ಚಾಲಕ, ನಿರ್ವಾಹಕ ಸ್ಥಳದಿಂದ ನಾಪತ್ತೆಯಾಗಿದ್ದು, ಭಾಗ್ಯಮ್ಮನ ಸಾವಿಗೆ ಕೆಎಸ್ಆರ್ಟಿಸಿ ಬಸ್ ಚಾಲಕನ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಗಳು ಕೇಳಿಬಂದಿದ್ದು, ಸಂಚಾರ ಪೊಲೀಸರು ಕೆಎ 10, ಎಫ್-0023 ಕೆಎಸ್ಆರ್ಟಿಸಿ ಬಸ್ ವಶಕ್ಕೆ ಪಡೆದ ತನಿಖೆ ನಡೆಸಿದ್ದಾರೆ.
ವಿಧಿಯಾಟ ಹೇಗೆ ನೋಡಿ, ಬಸ್ ಇಳಿದು ಇನ್ನೇನು ಪುತ್ರಿ ಇರೋ ಸ್ಥಳಕ್ಕೆ ಹೋಗಬೇಕೆನ್ನುವಷ್ಟರಲ್ಲಿಯೇ ಈ ದುರ್ಘಟನೆ ಘಟನೆ ನಡೆದಿರುವುದು ನಿಜಕ್ಕೂ ಬೇಸರ ಸಂಗತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ