ಪ್ರಿಯಕರನೊಂದಿಗೆ ಕಬ್ಬಿನ ಗದ್ದೆಗೆ ಹೋದ ಮಹಿಳೆ: ಬಳಿಕ ಆಗಿದ್ದು ಘನ ಘೋರ...

By Suvarna News  |  First Published May 10, 2020, 5:46 PM IST

ತನ್ನ ಚಪಲ ತೀರಿಸಿಕೊಳ್ಳಲು ಮಹಿಳೆಯೊಬ್ಬಳ್ಳಲು, ಪ್ರಿಯಕನೊಂದಿಗೆ ಕಬ್ಬಿನ ಗದ್ದೆಗೆ ಹೋಗಿ ಘನಘೋರ ಕೃತ್ಯ ಎಸಗಿದ್ದಾಳೆ.


ಬಾಗಲಕೋಟೆ, (ಮೇ.10): ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮುರೋಳ ಗ್ರಾಮದಲ್ಲಿ ನಡೆದಿದೆ.

50 ವರ್ಷದ ಶೇಖಪ್ಪ ಕೊಲೆಯಾದ ವ್ಯಕ್ತಿ. ಏಪ್ರಿಲ್ 24ರಂದು ಕೊಲೆ ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶೇಖಪ್ಪನ 45 ವರ್ಷದ ಪತ್ನಿ ಮತ್ತು ಆಕೆಯ ಪ್ರಿಯಕರ 42 ವರ್ಷದ ಶರಣಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅನೈತಿಕ ಸಂಬಂಧ, ಮಾರಕಾಸ್ತ್ರದಿಂದ ಕೊಚ್ಚಿ ಪತ್ನಿಯ ಕೊಲೆ: ಪತಿಯೂ ಆತ್ಮಹತ್ಯೆ

Tap to resize

Latest Videos

ಮುರೋಳ ಗ್ರಾಮದ ಶೇಖಪ್ಪನ ಪತ್ನಿ ಅದೇ ಊರಿನ ಶರಣಪ್ಪನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ತಮ್ಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆ ಎಂದು ಏಪ್ರಿಲ್ 24 ರಂದು ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಶೇಖಪ್ಪನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 

ಬಳಿಕ ದೇಹವನ್ನು ಕತ್ತರಿಸಿ ನಾರಾಯಣಪುರ ಜಲಾಶಯದ ಹಿನ್ನೀರಿನ ಸಮೀಪದ ಹಳ್ಳದಲ್ಲಿ ಹೂತು ಹಾಕಿದ್ದಾರೆ. ನಂತರ ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿದ ಪತ್ನಿ ಏಪ್ರಿಲ್ 25ರಂದು ಸಂಬಂಧಿಕರೊಂದಿಗೆ ತೆರಳಿ ಪೊಲೀಸರಿಗೆ ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾಳೆ. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.

click me!