ತಿರುಚಿದ ಬಿಎಸ್‌ವೈ-ಶೋಭಾ ಫೋಟೋ ಅಪ್ಲೋಡ್ ಮಾಡಿದ ಜಿಡಿಎಸ್ ಮುಖಂಡ ಸೆರೆ

By Suvarna NewsFirst Published May 9, 2020, 2:50 PM IST
Highlights

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶವನ್ನು ಪೋಸ್ಟ್ ಮಾಡಿದ್ದ ಜೆಡಿಎಸ್‌ ಕಾರ್ಯಕರ್ತನನ್ನು ಅರೆಸ್ಟ್ ಮಾಡಲಾಗಿದೆ.
 

ಬೆಂಗಳೂರು, (ಮೇ.09): ಸಿಎಂ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ಬಿಜೆಪಿ ನಾಯಕರ ಭಾವಚಿತ್ರಗಳನ್ನು ತಿರುಚಿ ಅಶ್ಲೀಲ, ಅವಹೇಳನಕಾರಿಯಾಗಿ ಅಪ್‌ಲೋಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಆರೋಪದಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

"

ದಾಸರಹಳ್ಳಿ ನಿವಾಸಿ ಚರಣ್ ಗೌಡ ಬಂಧಿತ.  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಹೀಗೆ ಹಲವು ಮುಖಂಡರ ಮುಖಗಳನ್ನು ಬೇರೆ ಚಿತ್ರಗಳ ಜೊತೆ ಸೇರಿಸಿ, ಅನಾಮಧೇಯ ಹೆಸರಿನಲ್ಲಿ ಹಲವು ತಿಂಗಳುಗಳಿಂದ ಫೇಸ್‌ಬುಕ್‌ ಖಾತೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು.

ಫೇಸ್‌ಬುಕ್‌ನಲ್ಲಿ ಮೋದಿ, ಶಾ ಅವಹೇಳನ: ಇಬ್ಬರ ಬಂಧನ

ಅವಹೇಳನಕಾರಿಯಾಗಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿತ್ತು. ತೇಜೋವಧೆ, ಅವಹೇಳನ ಮಾಡಿರುವ ಕುರಿತು ದಾಸರಹಳ್ಳಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿಕ್ಕಬೈಲಪ್ಪ ಹಾಗೂ ದಾಸರಹಳ್ಳಿ ಮಾಜಿ ಶಾಸಕ ಮುನಿರಾಜು ಅವರು ಹೆಚ್ ಡಿಕೆ, ಗಜಪಡೆ ಫೇಸ್ ಬುಕ್ ಪೇಜ್‌ ವಿರುದ್ಧ ದೂರು ದಾಖಲಿಸಿದ್ದರು.

ದೂರಿ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಜೆಡಿಎಸ್ ಕಾರ್ಯಕರ್ತ ಚರಣ್ ಗೌಡನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

click me!