ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ ಮಾಡಿ ಕೊರೋನಾ ಮೇಲಾಕಲು ಮುಂದಾದ ಕಿರಾತಕಿ!

By Suvarna News  |  First Published May 8, 2020, 6:36 PM IST

ಗಂಡನನ್ನೇ ಕೊಲೆ ಮಾಡಿದ ಪತ್ನಿ/ ಕೊರೋನಾದಿಂದ ಸಾವು ಎಂದು ಸುದ್ದಿ ಹಬ್ಬಿಸಿದ ಕಿರಾತಕಿ/ ಪ್ರಿಯತಮನೊಂದಿಗೆ ಸೇರಿ ಕೊಲೆ ಮಾಡಿದ ಹೆಂಡತಿ 


ನವದೆಹಲಿ(ಮೇ. 08)  ಕೊರೋನಾ ಆತಂಕದ ನಡುವೆ ಇದು ದೊಡ್ಡ ಆಘಾತಕಾರಿ ಸುದ್ದಿ .  ದೆಹಲಿಯ ಅಶೋಕ್ ವಿಹಾರದಿಂದ ಬಂದ ಸುದ್ದಿ.

 ಗಂಡನನ್ನು ಕೊಲೆ  ಮಾಡಿದ ಪತ್ನಿ ಆತ ಕೊರೋನಾದಿಂದ ಮೃತಪಟ್ಟಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದಾಳೆ.  ತನ್ನ ಪ್ರಿಯತಮನೊಂದಿಗೆ ಸೇರಿ ಗಂಡನ ಕೊಲೆ ಮಾಡಿದ್ದು ಅದನ್ನು ಕೊರೋನಾ ಮೇಲೆ ಹಾಕಲು ಮುಂದಾಗಿದ್ದಳು .

Tap to resize

Latest Videos

ಲಾಕ್ ಡೌನ್ ತೆರವಾಗುತ್ತಿದ್ದಂತೆ ಕೊಲೆ, ಸುಲಿಗೆ ಹೆಚ್ಚಾಗುತ್ತಾ? ಒಂದು ಅಧ್ಯಯನ

ಕೊಲೆ ಮಾಡಿದ್ದು ಅಲ್ಲದೇ ಗಂಡನ ಶವ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಸ್ಥಳೀಯರು ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿಲ್ಲ ಎಂಬುದ ದೃಢಪಟ್ಟಿದೆ. ಅಶೋಕ್ ವಿಹಾರ್ ಏರಿಯಾದ ಅಶೋಕ್ ದಾಸ್ ಹೆಂಡತಿ ಮತ್ತು ಆಕೆಯ ಪ್ರಿಯತನಿಂದಲೇ ಕೊಲೆಯಾಗಿಹೋಗದ್ದಾರೆ.

ಕೊರೋನಾ ಮೇಲೆ ಆರೋಪ ಹೊರಿಸಿ ಬಚಾವ್ ಆಗುವ ಹಲವು ಪ್ರಯತ್ನಗಳು ನಡೆದಿದ್ದು ವರದಿಯಾಗಿತ್ತು. ದರೋಡೆ, ಸರಗಳ್ಳತದಂಥಹ ಪ್ರಕರಣ ಕಡಿಮೆಯಾಗಿದ್ದರೆ  ಈ ರೀತಿಯ ಅಕ್ರಮ ಸಂಬಂಧದ ಕೊಲೆಗಳು ಹೆಚ್ಚಾಗಿವೆ.

click me!