ರಾಜಸ್ಥಾನ: ಅಕ್ರಮ ಸಂಬಂಧ ಶಂಕೆ: ಮಹಿಳೆಯನ್ನು ಕೊಂದ ನಾಲ್ಕನೇ ಪತಿ

By Suvarna News  |  First Published Sep 21, 2022, 6:02 PM IST

Crime News: ಹೆಂಡತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಮಹಿಳೆ ಸೇರಿದಂತೆ ಒಬ್ಬ ವ್ಯಕ್ತಿ ಮತ್ತು ಆತನ ಇಬ್ಬರು ಸಹಚರರನ್ನು ರಾಜಸ್ಥಾನದ  ಪೊಲೀಸರು ಬಂಧಿಸಿದ್ದಾರೆ


ರಾಜಸ್ಥಾನ (ಸೆ. 21): ಹೆಂಡತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಮಹಿಳೆ ಸೇರಿದಂತೆ ಒಬ್ಬ ವ್ಯಕ್ತಿ ಮತ್ತು ಆತನ ಇಬ್ಬರು ಸಹಚರರನ್ನು ರಾಜಸ್ಥಾನದ  ಅಜ್ಮೀರ್‌ನ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ನಾಲ್ಕನೇ ಪತಿಯಾಗಿರುವ ವ್ಯಕ್ತಿ ಆಕೆಗೆ ಬೇರೊಬ್ಬನೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಜ್ಮೀರ್ ಜಿಲ್ಲೆಯ ಪುಷ್ಪಕ್ ಬ್ಲಾಕ್‌ನ ದಿಯೋಘರ್‌ನಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 17 ರಂದು ಹೊಸ ಬೈಪಾಸ್ ರಸ್ತೆಯ ಕಾಡಿನಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. 

ತನಿಖೆ ವೇಳೆ ಮಹಿಳೆಯ ಹೆಸರು ಖಾನ್ಪುರದ ಕಾಂತ ದೇವಿ ಎಂದು ತಿಳಿದು ಬಂದಿದೆ. ತನ್ನ ಮಗಳು ಸೇತು ಸಿಂಗ್ ಎಂಬಾತನನ್ನು ಮದುವೆಯಾಗಿದ್ದಾಳೆ ಎಂದು ಮಹಿಳೆಯ ತಂದೆ ಚೋಟು ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಮಗಳ ಕೊಲೆಗೆ ಸೇತು ಸಿಂಗ್ ಕಾರಣ ಎಂದು ತಂದೆ ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

Tap to resize

Latest Videos

ಚೋಟು ಸಿಂಗ್ ಹೇಳಿಕೆಯ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.  ಪ್ರಕರಣ ಸಂಬಂಧ ಸೇತು ಸಿಂಗ್‌ಗೆ ಪ್ರಶ್ನಿಸಿದಾಗ, ಸೆಪ್ಟೆಂಬರ್ 17 ರಂದು ತಾನು ಮತ್ತು ಕಾಂತಾ ಮಕರವಾಲಿ ಗ್ರಾಮದಲ್ಲಿ ಆಟೋದಲ್ಲಿ ಕುಳಿತಿದ್ದಾಗ ಜಗಳ ಮಾಡಿಕೊಂಡಿದ್ದು ಸ್ವಲ್ಪ ಸಮಯದ ನಂತರ ಜಗಳ ವಿಕೋಪಕ್ಕೆ ಹೋಗಿದೆ ಎಂದು ಹೇಳಿದ್ದಾರೆ. ಕೋಪದಲ್ಲಿ ತಾನು ಹೆಂಡತಿಯನ್ನು ಕೊಂದಿರುವುದಾಗಿ  ಸೇತು ಸಿಂಗ್‌ ತಿಳಿಸಿದ್ದಾನೆ. ನಂತರ ಆಟೋ ಮಾಲೀಕ ಖೇಮ್ ಸಿಂಗ್ ಮತ್ತು ಆತನ ಗೆಳತಿ ರೇಣು ಶವವನ್ನು ತೆಗೆದುಕೊಂಡು ಕಾಡಿನಲ್ಲಿ ಎಸೆದಿದ್ದರು ಎಂದು ಆರೋಪಿ ತಿಳಿಸಿದ್ದಾನೆ. 

ಶಾಂತಂ ಪಾಪಂ ಧಾರಾವಾಹಿ ನೋಡಿ ಗಂಡನ ಹತ್ಯೆ!

ಕಾಂತ ಮತ್ತು ಸೇತು ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 17 ರಂದು ಜೋಧ್‌ಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸೇತು ಕಾಂತಾಳನ್ನು ಕರೆದುಕೊಂಡು ಹೋಗಲು ಬಂದಿದ್ದ. ಆಟೋದಲ್ಲಿ ಕುಳಿತಾಗ ಖೇಮ್ ಸಿಂಗ್ ಕಾಂತಾ ಅವರೊಂದಿಗೆ ಮಾತನಾಡಿಸಲು ಪ್ರಯತ್ನಿಸಿದ್ದ ಆದರೆ ಕಾಂತಾಗೆ ಪದೇ ಪದೇ ಕರೆಗಳು ಬರುತ್ತಿದ್ದರಿಂದ ಅಡಚಣೆಯಾಗುತ್ತಲೇ ಇತ್ತು. ಇದರಿಂದ ಕಾಂತ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡ ಸೇತು ಆಕೆಯನ್ನು ಕೊಂದು ಸ್ನೇಹಿತರ ಸಹಾಯದಿಂದ ಮೃತದೇಹವನ್ನು ಕಾಡಿನಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

click me!