
ಬೆಂಗಳೂರು (ಜೂ. 13): ನಗರದ ರೈಲ್ವೇ ಸ್ಟೇಷನ್ ಬಳಿ ಇರುವ ಬೆಂಗಳೂರು ರೆಸಿಡೆನ್ಸಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಲಾಡ್ಜ್‌ನ ರೂಂ ಚೆಕ್ ಮಾಡಿದಾಗ ಶವ ಪತ್ತೆಯಾಗಿದ್ದು, ಕೊಲೆಯಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯನ್ನು ದೀಪಾ ಪದನ್ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಅನ್ಮಲ್ ರತನ್ ಕಂದರ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ದೀಪಾ ಪದನ್ ಹಾಗೂ ಅನ್ಮಲ್ ರತನ್ ಕಂದರ್ ಬೇರೆ ಬೇರೆಯವರ ಜೊತೆ ಮದುವೆಯಾಗಿದ್ದರೂ, ಇವರಿಬ್ಬರ ನಡುವೆ ಹಲವು ತಿಂಗಳಿನಿಂದ ಸ್ನೇಹ ಸಂಬಂಧವಿತ್ತು ಎನ್ನಲಾಗಿದೆ.
ಆದರೆ ದೀಪಾ ಬದನ್ ಮತ್ತೊಬ್ಬನ ಜೊತೆ ಕೂಡ ಸ್ನೇಹ ಬೆಳೆಸಿದ್ದು, ಈ ವಿಚಾರ ಅನ್ಮರ್‌ಗೆ ತಿಳಿದಿದೆ. ಈ ಹಿನ್ನೆಲೆ ಒರಿಸ್ಸಾದಿಂದ ನಗರಕ್ಕೆ ಔಟಿಂಗ್ ಎಂದು ಕರೆತಂದು ದೀಪಾ ಪದನ್ ಕೊಲೆ ಮಾಡಿ ಅನ್ಮಲ್ ರತನ್ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಹತ್ತನೇ ತಾರೀಕು ಲಾಡ್ಜ್ ಸಿಬ್ಬಂದಿ ರೂಂ ಚೆಕ್ ಮಾಡಿದಾಗ ದೀಪಾ ಬದನ್ ಶವ ಪತ್ತೆಯಾಗಿದೆ. ಬಾಯಿ , ಮೂಗಿನಿಂದ ರಕ್ತ ಬಂದ ಶವ ಹಾಸಿಗೆ ಮೇಲೆ ಪತ್ತೆಯಾಗಿದೆ. ಕುತ್ತಿಗೆ ಹಿಸುಕಿ ದಿಂಬಿನಿಂದ ಕೊಲೆ ಮಾಡಿ, ಸತ್ತಿದ್ದಾಳೆಂದು ತಿಳಿದು ಆರೋಪಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವೆರೆದಿದೆ.
ಇದನ್ನೂ ಓದಿ: ಮನೆಗೆ ಫೋನ್ ಮಾಡಲು ಬಿಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ
ಇದನ್ನೂ ಓದಿ: ಟೀಚರಮ್ಮನ ಕಾಮದಾಟಕ್ಕೆ ಗಂಡ ಬಲಿ, ಪೊಲೀಸ್ ತನಿಖೆಯಲ್ಲಿ ಪತ್ನಿ ನವರಂಗಿ ಆಟ ಬಯಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ