ಹಾಸನ; ಶಾಸಕರ ಕಾರು ಡಿಕ್ಕಿ, ಮಹಿಳೆ ಸಾವು, ಚಾಲಕ ಮದ್ಯಪಾನ ಮಾಡಿದ್ನಾ?

Published : Oct 03, 2021, 09:32 PM ISTUpdated : Oct 03, 2021, 09:33 PM IST
ಹಾಸನ; ಶಾಸಕರ ಕಾರು ಡಿಕ್ಕಿ, ಮಹಿಳೆ ಸಾವು, ಚಾಲಕ ಮದ್ಯಪಾನ ಮಾಡಿದ್ನಾ?

ಸಾರಾಂಶ

* ಶಾಸಕರಿಗೆ ಸೇರಿದ ಕಾರು ಅಪಘಾತ *ಸ್ಥಳದಲ್ಲಿಯೇ ಮಹಿಳೆ ಸಾವು * ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿಗೆ ಸೇರಿದ ಕಾರು * ತಾಯಿ ಮತ್ತು ಮಗ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು

ಹಾಸನ(ಅ. 03)  ಶಾಸಕರ ಕಾರು ಬೈಕ್ ಗೆ  ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.  ಹಾಸನ‌ ಜಿಲ್ಲೆ ಬೇಲೂರು ತಾಲ್ಲೂಕಿನ ಹನುಮಂತನಗರದ ಬಳಿ ಅಪಘಾತ ಸಂಭವಿಸಿದೆ.  ಚಿಕ್ಕಮಗಳೂರು ಜಿಲ್ಲೆ‌ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಯವರಿಗೆ ಸೇರಿದ ಕಾರಿನಿಂದ ಅಪಘಾತವಾಗಿದೆ.

ಶಾಸಕರಿದ ಕಾರು ಬೇಲೂರಿನತ್ತ ಬರುತ್ತಿತ್ತು. ಈ ವೇಳೆ ಮುಂದೆ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ. ಶಾಸಕರ ಕಾರು ಚಲಾಯಿಸುತ್ತಿದ್ದವ ಪಾನಮತ್ತನಾಗಿದ್ದ ಎಂಬ ಆರೋಪ ಕೇಳಿ ಬಂದಿದೆ. ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆ‌ ಹೂವಮ್ಮ (55) ಸಾವಾಗಿದ್ದು ಪುತ್ರನಿಗೆ ಗಂಭೀರ ಗಾಯಗಳಾಗಿವೆ.

ಸೀದು ಹೋದ ಚಪಾತಿ ಕೊಟ್ಟಿದ್ದನ್ನು ಪ್ರಶ್ನೆ ಮಾಡಿದವನ ಕೊಂದೇ ಬಿಟ್ಟ

ಕಾರ್‌ರಿಪೇರಿಗಾಗಿ ಬೆಂಗಳೂರಿಗೆ ಹೋಗುತ್ತಿರುವುದಾಗಿ ಶಾಸಕರ ಕಾರು ಚಾಲಕ ಹೇಳಿದ್ದಾನೆ. ಏಕಾ ಏಕಿ‌ ಬೈಕ್‌ ಬಲಕ್ಕೆ ಬಂದಿದ್ದರಿಂದ  ಬೈಕ್ ಗೆ ಡಿಕ್ಕಿಯಾಗಿದೆ ಎನ್ನುತ್ತಿದ್ದಾನೆ. ಶಾಸಕರ ಕಾರು ಚಾಲಕ ಪಾನಮತ್ತನಾಗಿದ್ದರಿಂದಲೇ ಅಪಘಾತ ಎಂದು ಸ್ಥಳೀಯರು ಆರೋಪಿಸಿದ್ದು ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಿಜೆಪಿಯ ನಾಯಕ ಸಿಟಿ ರವಿ ಅವರ ಕಾರು ಕೆಲ ತಿಂಗಳ ಹಿಂದೆ ತುಮಕೂರು ಹೆದ್ದಾರಿಯಲ್ಲಿ ಅಪಘಾತಕ್ಕೆ ಗುರಿಯಾಗಿತ್ತು. ದುರಂತದಲ್ಲಿ ಪ್ರಾಣ ಹಾನಿಯಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರು: ಮನೆ ದರೋಡೆಗಾಗಿ 5 ವರ್ಷದ ಮಗಳ ಮುಂದೆ ಫ್ಲವರ್ ಅಂಗಡಿ ಮಾಲೀಕನನ್ನು ಕೊಂದ ತಮಿಳುನಾಡು ಹಂತಕರು ಅರೆಸ್ಟ್
ಅವನಿಗೆ ಮೊದಲನೆಯದ್ದು, ಅವಳಿಗೆ ಮೂರನೆಯದ್ದು! ಬೆ*ತ್ತಲೆ ಓಡಾಟ, ಸೈಕೋ ಪತಿ ಪ್ರಕರಣಕ್ಕೆ ​​ ಟ್ವಿಸ್ಟ್!