* ಚಿತ್ರದುರ್ಗ ದಂಡಿನ ಕುರುಬರ ಹಟ್ಟಿ ಬಳಿ ನೇಣು ಬಿಗಿದುಕೊಂಡು ASI ಆತ್ಮಹತ್ಯೆ.
* ಗುರುಮೂರ್ತಿ (50) ಆತ್ಮಹತ್ಯೆ ಮಾಡಿಕೊಂಡಿರುವ ASI.
* ನಾಹಕನಹಟ್ಟಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ASI.
* ಹಿಂದೂ ಗಣಪತಿ ವಿಸರ್ಜನಾ ಮೆರವಣಿಗೆ ಕರ್ತವ್ಯಕ್ಕೆ ಬಂದಿದ್ದ ಗುರುಮೂರ್ತಿ.
ಚಿತ್ರದುರ್ಗ(ಅ. 03) ದಂಡಿನ ಕುರುಬರ ಹಟ್ಟಿ ಬಳಿ ನೇಣು ಬಿಗಿದುಕೊಂಡು ASI ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುಮೂರ್ತಿ (50) ಆತ್ಮಹತ್ಯೆ ಮಾಡಿಕೊಂಡಿರುವ ASI.
ಚಿತ್ರದುರ್ಗ ತಾಲ್ಲೂಕಿನ ದಂಡಿನ ಕುರುಬರ ಹಟ್ಟಿ ಗ್ರಾಮದಿಂದ ಪ್ರಕರಣ ವರದಿಯಾಗಿದೆ. ನಾಹಕನಹಟ್ಟಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ASI ಸುಸೈಡ್ ಮಾಡಿಕೊಂಡಿದ್ದಾರೆ. ಶನಿವಾರ ಹಿಂದೂ ಗಣಪತಿ ವಿಸರ್ಜನಾ ಮೆರವಣಿಗೆ ಕರ್ತವ್ಯಕ್ಕೆ ಹಾಜರಾಗಿದ್ದರು.
undefined
ರಾತ್ರಿ ಊರಿಗೆ ವಾಪಾಸ್ ಆಗುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಗ್ರಾಮಾಂತರ ಠಾಣೆ CPI ಬಾಲಚಂದ್ರ ನಾಯ್ಕ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಜೀವನ ಸಾಕೆಂದು ಮಗಳೊಂದಿಗೆ ನದಿಗೆ ಹಾರಿದ ಗದಗದ ತಾಯಿ
ತಾಲ್ಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದ ಬಳಿ ಅವರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಅವರ ಬೈಕ್ ಕೂಡ ಪತ್ತೆಯಾಗಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್‌ಐ ಗುರುಮೂರ್ತಿ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ ಇರಬಹುದು ಎಂದು ಅನುಮಾನಿಸಲಾಗಿದೆ.
ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದು ದೊಡ್ಡ ಸುದ್ದಿಯಾಗಿತ್ತು. ತಂದೆ ಮತ್ತು ಗಂಡನ ಮನೆಯವರಿಂದ ಕಿರುಕುಳ ಆಗುತ್ತಿದೆ ಎಂದು ಸುಸೈಡ್ ಮಾಡಿಕೊಂಡ ಮಹಿಳೆಯರು ಡೆತ್ ನೋಟ್ ಬರೆದಿಟ್ಟಿದ್ದರು. ದೊಡ್ಡ ಬಂಗಲೆಯಲ್ಲಿ ಎಲ್ಲರೂ ನೇಣಿಗೆ ಶರಣಾಗಿದ್ದು ಮಗುವೊಂದು ಪವಾಡದ ರೀತಿ ಬದುಕಿತ್ತು.