ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಸಾವು: 4 ತಿಂಗಳ ಹಸುಗೂಸು ಅನಾಥ!

By Govindaraj SFirst Published Aug 9, 2024, 9:06 PM IST
Highlights

ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಇಂದು ನಡೆದಿದೆ. ರಂಜಿತಾ (22) ಮೃತಪಟ್ಟ ಯುವತಿ. 
 

ಶಿವಮೊಗ್ಗ (ಆ.09): ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಇಂದು ನಡೆದಿದೆ. ರಂಜಿತಾ (22) ಮೃತಪಟ್ಟ ಯುವತಿ. ಹೌದು! ಮೇವು ತರಲು ಗದ್ದೆಗೆ ತೆರಳಿದ್ದ ವೇಳೆ ರಂಜಿತಾಗೆ ಪೊದೆಯಲ್ಲಿದ್ದ ಹಾವು ಕಚ್ಚಿದ್ದರಿಂದ ಈ ದುರಂತ ಸಂಭವಿಸಿದೆ. ಹಾವು ಕಚ್ಚಿದು ರಂಜಿತಾ ಗಮನಕ್ಕೆ ಬಂದಿಲ್ಲ. 

ಕೆಲಹೊತ್ತಿನ ಬಳಿಕ ಕುಟುಂಬಸ್ಥರು ನೋಡಿದಾಗ ಗದ್ದೆಯಲ್ಲಿ ರಂಜಿತಾ ಕುಸಿದು ಬಿದ್ದಿದ್ದಳು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಬಾಣಂತಿ ರಂಜಿತಾ ಮೃತಪಟ್ಟಿದ್ದಾರೆ. ಸದ್ಯ ರಂಜಿತಾಗೆ 4 ತಿಂಗಳ ಹಸುಗೂಸು ಇದ್ದು, 3 ವರ್ಷದ ಹೆಣ್ಣು ಸಹ ಇದೆ. ಇನ್ನು ಆಸ್ಪತ್ರೆಯ ಶವಾಗಾರದ ಬಳಿ ರಂಜಿತಾ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. 

Latest Videos

ಮಾನವ ಹಕ್ಕು ಉಲ್ಲಂಘನೆ ಆಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು: ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್

ಸಾರಿಗೆ ವಾಹನ ಡಿಕ್ಕಿಯಾಗಿ ಗರ್ಭಿಣಿ ಮಹಿಳೆ ಸಾವು: ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆ ಮುಂಭಾಗ ಪಿ.ಜಿ. ಪಾಳ್ಯ ಗ್ರಾಮದ ನಮಿತಾ (22) ಎಂಬಾಕೆ ಸಾರಿಗೆ ಬಸ್‌ಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಪಿಜಿ ಪಾಳ್ಯ ಗ್ರಾಮದ ನಮಿತಾ ಅಜ್ಜಿಪುರದ ಎರಡು ತಿಂಗಳ ಗರ್ಭಿಣಿಯಾಗಿದ್ದು ಕಾಮಗೆರೆ ಖಾಸಗಿ ಹೋಲಿಕ್ರಾಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಬಂದಿದ್ದರು ಎನ್ನಲಾಗಿದೆ. ಆಸ್ಪತ್ರೆ ವೈದ್ಯಕೀಯ ಚಿಕಿತ್ಸೆ ಪಡೆದು ತಮ್ಮ ಗ್ರಾಮಕ್ಕೆ ತೆರಳಲು ಹೋಲಿ ಕ್ರಾಸ್ ಆಸ್ಪತ್ರೆ ಮುಂಭಾಗ ರಸ್ತೆ ದಾಟುತ್ತಿದ್ದಾಗ ಮಹಿಳೆಗೆ ವೇಗವಾಗಿ ಬಂದ ಕರ್ನಾಟಕ ರಾಜ್ಯ ಸಾರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.

ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ-ಜೆಡಿಎಸ್‌ನವರಿಂದ ದ್ವೇಷದ ರಾಜಕಾರಣ: ಸಚಿವ ಕೃಷ್ಣ ಬೈರೇಗೌಡ

ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ: ಕರ್ನಾಟಕ ರಾಜ್ಯ ಸಾರಿಗೆ ವಾಹನ ಚಾಲಕನ ಅತಿ ವೇಗವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ಕಾಮಗೆರೆ ಗ್ರಾಮದಲ್ಲಿ ಬಸ್ ತಡೆದು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥಾಪಕ ಶಂಕರ್ ಆಗಮಿಸಿ ಯುವತಿ ಸಾವಿಗೆ ಪರಿಹಾರದ ಹಣವಾಗಿ 25000 ಅಂತ್ಯ ಸಂಸ್ಕಾರದ ಖರ್ಚು ನೀಡಲಾಗುವುದು. ನಂತರ ಚಾರ್ಜ್ ಶೀಟ್ ಆದ ಬಳಿಕ 25000 ನೀಡಲಾಗುವುದು ಅನಂತರ ಕೋರ್ಟ್ ಮೂಲಕ ಕುಟುಂಬಸ್ಥರಿಗೆ ಪರಿಹಾರದ ಹಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಆದರೂ ಘಟನೆಗೆ ಬಗ್ಗೆ ತೀವ್ರವಾಗಿ ಖಂಡಿಸಿ ರಸ್ತೆ ತಡೆ ಮಾಡುತ್ತಿದ್ದ ಗ್ರಾಮಸ್ಥರನ್ನು ಪಟ್ಟಣದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಲ್ಲಿ ಯಶಸ್ವಿಯಾದರು. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!