ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟು ಜೈಲು ಸೇರಿದ ಜೋಡಿ ಹಕ್ಕಿ!

By Ravi Janekal  |  First Published Aug 9, 2024, 12:46 PM IST

ಜೋಡಿ ಆಪ್‌ನಲ್ಲಿ ಪರಿಚಯವಾಗಿದ್ದ ಪ್ರೇಯಸಿ ಮಾತು ಕೇಳಿ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಬೆಂಗಳೂರು (ಆ.9): ಜೋಡಿ ಆಪ್‌ನಲ್ಲಿ ಪರಿಚಯವಾಗಿದ್ದ ಪ್ರೇಯಸಿ ಮಾತು ಕೇಳಿ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾರಾಯಣಸ್ವಾಮಿ (34) ಹಾಗೂ ನವೀನ( 39) ಬಂಧಿತ ಪ್ರೇಮಿಗಳು. ಬಂಧಿತ ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು. ನಾರಾಯಣಸ್ವಾಮಿ ಮೂಲತಃ ತಮಿಳುನಾಡು ಮೂಲದವನು. ಜೋಡಿ ಡೇಟಿಂಗ್ ಆಪ್‌ನಲ್ಲಿ ನವೀನ ಪರಿಚಯವಾಗಿದ್ದಾಳೆ. ನಾರಾಯಣಸ್ವಾಮಿ ಹೆಂಡತಿಗೆ ಪ್ಯಾರಲಿಸಿಸ್ ಆಗಿತ್ತು. ಇತ್ತ ನವೀನಾಳ ಗಂಡನಿಗೂ ಪ್ಯಾರಲಿಸಿಸ್ ಆಗಿತ್ತು. ಹೀಗಾಗಿ ನವೀನ ಡೇಟಿಂಗ್ ಆಪ್‌ನಲ್ಲಿ ಹುಡುಗರನ್ನು ಮಾತನಾಡಿಸುತ್ತಿದ್ದಳು ಈ ವೇಳೆ ನಾರಾಯಣಸ್ವಾಮಿ ಪರಿಚಯವಾಗಿದೆ. ಇಬ್ಬರು ಡೇಟಿಂಗ್‌ ಆಪ್‌ನಲ್ಲಿ ಪರಿಚಯವಾಗಿ ಸಂಪರ್ಕಕ್ಕೆ ಬಂದಿದ್ದಾರೆ. ನಾರಾಯಣಸ್ವಾಮಿ, ನವೀನ ಇಬ್ಬರಿಗೂ ಮದುವೆಯಾಗಿದೆ, ಇಬ್ಬರಿಗೂ ಮಕ್ಕಳಿದ್ದಾರೆ. ಆದರೂ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಗೆ ಮುಂದಾಗಿದ್ದ ಪ್ರೇಮಿಗಳು. ಆದರೆ ಮದುವೆಗೆ ಹಣ ಬೇಕಲ್ಲ? ಹೀಗಾಗಿ ಹಣ ಹೊಂದಿಸಲು ಕಳ್ಳತನದ ಐಡಿಯಾ ಕೊಟ್ಟಿದ್ದ ಪ್ರಿಯತಮೆ.

Tap to resize

Latest Videos

ಕದ್ದ ಚಿನ್ನದ ನೆಕ್ಲೆಸ್ ವಾಟ್ಸಾಪ್ ಡಿಪಿ ಹಾಕಿ ಸಿದ್ದಬಿದ್ದ ಖತರ್ನಾಕ್ ಕಳ್ಳಿ!

ಅವರಿವರ ಮನೆಯಲ್ಲಿ ಕಸಮುಸೂರಿ ಬಳಿದು ಜೀವನ ಮಾಡುತ್ತಿದ್ದ ನಾರಾಯಣಸ್ವಾಮಿ ತಾಯಿ. ಆಗಾಗ ತಾಯಿಯ ಮನೆಗೆಲಸ ಮಾಡಲು ಹೋಗುತ್ತಿದ್ದ ನಾರಾಯಣಸ್ವಾಮಿ. ಇದನ್ನೇ ಬಂಡವಾಳ ಮಾಡಿಕೊಂಡ ನಾರಾಯಣಸ್ವಾಮಿ ಕೆಲಸ ಮಾಡಲು ಹೋಗಿತ್ತಿದ್ದ ಲಕ್ಕಸಂದ್ರದ ರಿಹಾನ್ ಅಸ್ಮ ಎಂಬುವವರ ಮನೆಯಲ್ಲೇ ಕಳ್ಳತನ ಮಾಡಲು ಪ್ಲಾನ್ ಮಾಡಿದ್ದಾನೆ. ತಾಯಿ ಕೆಲಸ ಮಾಡುತ್ತಿದ್ದ ಮನೆಗಳಲ್ಲಿನ ಚಿನ್ನಾಭರಣ ಇರುವ ಬಗ್ಗೆ ಮಾಹಿತಿ ಕಲೆಹಾಕಿದ್ದ ಆಸಾಮಿ. ಪಕ್ಕಾ ಪ್ಲಾನ್ ಮಾಡಿಕೊಂಡು ರಿಹಾನ್ ಎಂಬಾಕೆಯ ಮನೆಯಲ್ಲಿ ಸುಮಾರು 330 ಗ್ರಾಂ ಚಿನ್ನಾಭರಣ ಕದ್ದಿದ್ದ ನಾರಾಯಣಸ್ವಾಮಿ. ನಂತರ ಕದ್ದ ಚಿನ್ನವನ್ನು ಹಲವೆಡೆ ಅಡವಿಟ್ಟಿದ್ದ ಜೋಡಿ. 

ಇದೇ ರೀತಿ ಸುಮಾರು 15 ಕಡೆ ಚಿನ್ನವನ್ನು ಕದ್ದು ಅಡವಿಟ್ಟಿದ್ದ ಖತರ್ನಾಕ್ ಜೋಡಿ. ನಂತರ ಕದ್ದ ಹಣದೊಂದಿಗೆ ಹೆಂಡತಿ ಮಕ್ಕಳನ್ನು ಬಿಟ್ಟು ಚೆನ್ನೈಗೆ ಪರಾರಿಯಾಗಿದ್ದರು. ಕದ್ದ ಚಿನ್ನವನ್ನು ಒಂದಿಷ್ಟು ಮಾರಾಟ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಚೆನ್ನೈನ ಬಾಡಿಗೆ ಮನೆಯಲ್ಲೇ ವಾಸವಾಗಿದ್ದರು. 

ಬೈಕ್ ಕಳ್ಳತನ ಎಂದು ಬಂದವರಿಗೆ CCTV ಫೋಟೇಜ್ ತಂದ್ರೆ ಮಾತ್ರ FIR ಎಂದ ಪೊಲೀಸರು!

ಇತ್ತ ಚಿನ್ನ ಕಳೆದುಕೊಂಡ ಬಳಿಕ ನಾರಾಯಣಸ್ವಾಮಿ ಮನೆಯ ಕಡೆ ತಲೆಹಾಕಿಲ್ಲ. ಹೀಗಾಗಿ ನಾರಾಯಣಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಮಾಲೀಕರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಚಿನ್ನ ಕದ್ದಿರುವುದು ನಾರಾಯಣಸ್ವಾಮಿ ಎಂಬುದು ಖಚಿತವಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ವಿಚಾರಣೆ ಮಾಡಿದಾಗ ಕಳ್ಳತನದ ಬಗ್ಗೆ ಬಾಯಿಬಿಟ್ಟಿದ್ದಾರೆ. ಇದೇ ರೀತಿ ಯಾರಾರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿರುವ ಪೊಲೀಸರು.

click me!