ಉಡುಪಿ: ಪತಿಗೆ ಕೊರೋನಾ, ಏಳನೇ ಮಹಡಿಯಿಂದ ಜಿಗಿದು ಪತ್ನಿ ಆತ್ಮಹತ್ಯೆ

By Suvarna News  |  First Published Jun 5, 2021, 1:32 PM IST

* ಉಡುಪಿ ನಗರದ ಬಿಗ್ ಬಜಾರ್ ಕಟ್ಟಡದ ಬಳಿ ನಡೆದ ಘಟನೆ
* ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದ ಗಂಗಮ್ಮ
* ಪತಿಯ ಅನಾರೋಗ್ಯದಿಂದ ಮನನೊಂದು ಗಂಗಮ್ಮ ಆತ್ಮಹತ್ಯೆ


ಉಡುಪಿ(ಜೂ.05):  ಪತಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಬಿಗ್ ಬಜಾರ್ ಕಟ್ಟಡದ ಬಳಿ ಇಂದು(ಶನಿವಾರ) ನಡೆದಿದೆ. ಚಿತ್ರದುರ್ಗ ಮೂಲದ ಗಂಗಮ್ಮ(70) ಎಂಬುವರೇ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಗಂಗಮ್ಮ ಅವರಿಗೂ ಇತ್ತೀಚೆಗೆ ಕೊರೋನಾ ಸೋಂಕು ತಗುಲಿತ್ತು. ಆದರೆ, ಚಿಕಿತ್ಸೆ ಪಡೆದುಕೊಂಡಿದ್ದ ಗಂಗಮ್ಮ  ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದರು ಎಂದು ತಿಳಿದು ಬಂದಿದೆ. 

Latest Videos

undefined

ಶಿವಮೊಗ್ಗ: ನೇಣಿಗೆ ಶರಣಾದ ಮಹಿಳೆ, ಕಾರಣ ನಿಗೂಢ..?

ಮೃತ ಗಂಗಮ್ಮ ಅವರ ಪತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ದಿಂದ ಮನನೊಂದು ಗಂಗಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!