* ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆನೆಗದ್ದೆ ಗ್ರಾಮದಲ್ಲಿ ನಡೆದ ಘಟನೆ
* ಅತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ
* ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ(ಜೂ.05): 35 ವರ್ಷದ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಆನೆಗದ್ದೆ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ.
ಮೂಲತಃ ಆನೆಗದ್ದೆ ಗ್ರಾಮದ ಮೃತ ಮಹಿಳೆ ಬೆಂಗಳೂರಿನಲ್ಲಿ ನೆಲೆಸಿದ್ದರು. 13 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈಕೆ ಇತ್ತೀಚೆಗೆ ಗಂಡನನ್ನು ತೊರೆದಿದ್ದಳು. ಇವರಿಗೆ 6 ವರ್ಷದ ಮಗುವಿದೆ ಎಂದು ತಿಳಿದು ಬಂದಿದೆ.
ಚಾಮರಾಜನಗರ : ಒಂದೇ ಕುಟುಂಬದ ನಾಲ್ವರೂ ಅತ್ಮಹತ್ಯೆಗೆ ಶರಣು
ಕೊರೋನಾ ಹಿನ್ನಲೆಯಲ್ಲಿ ಊರಿಗೆ ಬಂದು ತಾಯಿ, ತಂಗಿ ಮತ್ತು ಓರ್ವ ಮಗಳ ಜೊತೆ ನೆಲೆಸಿದ್ದಳು. ಮೃತ ಅತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತ ಮಹಿಳೆ ಮದ್ಯ ವ್ಯಸನಿಯಾಗಿದ್ದಳು ಎನ್ನಲಾಗಿದೆ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.