* ಪತಿಯ ವಿರುದ್ಧ ಕಿರುಕುಳದ ಆರೋಪ
* ಕುಟಂಬದ ವಿಚಾರಕ್ಕೆ ಸತಿ-ಪತಿ ಮನಸ್ತಾಪ
* ಅಳಿಯನ ವಿರುದ್ಧ ಪೋಷಕರ ದೂರು
ಬೆಂಗಳೂರು(ಡಿ.11): ಜೀವನದಲ್ಲಿ ಜಿಗುಪ್ಸೆಗೊಂಡು ಸಾಫ್ಟ್‌ವೇರ್ ಮಹಿಳಾ(Woman) ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ(Suicide) ಶರಣಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೀರಣ್ಣಪಾಳ್ಯದ ನಿವಾಸಿ ಸಂಗೀತಾ (29) ಮೃತ ಯುವತಿ. ಮೃತಳ ಪತಿ ವಿನಯ್‌ನನ್ನು ಪೊಲೀಸರು(Police) ವಶಕ್ಕೆ(Arrest) ಪಡೆದಿದ್ದಾರೆ. ಮನೆಯಲ್ಲಿ ಗುರುವಾರ ಸಂಜೆ ದಂಪತಿ ಮಧ್ಯೆ ಜಗಳವಾಗಿದೆ. ಆಗ ಬೇಸರಗೊಂಡ ಸಂಗೀತಾ, ತನ್ನ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲ ಹೊತ್ತಿನ ಬಳಿಕ ಆಕೆಯ ಕೋಣೆಗೆ ಪತಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಮಂಡ್ಯ(Mandya) ತಾಲೂಕಿನ ಸಂಗೀತಾ ಹಾಗೂ ನಾಗಮಂಗಲದ ವಿನಯ್ ಪ್ರೇಮ ವಿವಾಹವಾಗಿದ್ದು(Marriage), ದಂಪತಿ ವೀರಣ್ಣಪಾಳ್ಯದಲ್ಲಿ ನೆಲೆಸಿದ್ದರು. ಸಾಫ್ಟ್‌ವೇರ್ ಕಂಪನಿಯಲ್ಲಿ(Software Company) ಸಂಗೀತಾ ಉದ್ಯೋಗದಲ್ಲಿದ್ದರೆ(Job), ವಿನಯ್ ಸಿವಿಲ್ ಎಂಜಿನಿಯರ್(Civil Engineer) ಆಗಿದ್ದರು. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪವಾಗಿದ್ದು, ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ಗುರುವಾರ ಸಂಜೆ 6.30ರ ಸುಮಾರಿಗೆ ಸಂಗೀತಾ ಮತ್ತು ವಿನಯ್ ನಡುವೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಘಟನೆಯಿಂದ ಬೇಸರಗೊಂಡ ಸಂಗೀತಾ, ಸೀದಾ ತನ್ನ ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Domestic Violence : ಪಾಪಿ ಪತಿ... ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಟೆಕ್ಕಿ ಸುಸೈಡ್
ತಮ್ಮ ಮಗಳ ಸಾವಿಗೆ ಅಳಿಯ ವಿನಯ್ ಕಾರಣವಾಗಿದ್ದಾನೆ ಎಂದು ಆರೋಪಿಸಿ ಅಮೃತಹಳ್ಳಿ ಠಾಣೆ ಪೊಲೀಸರಿಗೆ ಮೃತ ಸಂಗೀತಾ ಪೋಷಕರು ದೂರು(Complaint) ನೀಡಿದ್ದಾರೆ. ಅದರನ್ವಯ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಲಬಾಧೆ: ರೈತ ಆತ್ಮಹತ್ಯೆ
ರಾಣಿಬೆನ್ನೂರು: ಸಾಲಬಾಧೆ(Loan) ತಾಳಲಾರದೆ ರೈತನೊಬ್ಬ(Farmer) ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ತಡರಾತ್ರಿ ಹಾವೇರಿ(Haveri) ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಗಂಗಾಜಲ ತಾಂಡಾದಲ್ಲಿ ಸಂಭವಿಸಿದೆ. ತಾಂಡಾದ ವೀರೇಶ ಲಮಾಣಿ (40) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಎರಡು ಎಕರೆ ಜಮೀನು ಹೊಂದಿದ್ದು ಕೃಷಿಗಾಗಿ ರಾಣಿಬೆನ್ನೂರಿನ ಕೆನರಾ ಬ್ಯಾಂಕಿನಲ್ಲಿ 1 ಲಕ್ಷ, ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ಹಾಗೂ ಖಾಸಗಿಯಾಗಿ 2 ಲಕ್ಷ ಒಟ್ಟು 5 ಲಕ್ಷ ಸಾಲ ಮಾಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಜಮೀನಿನಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಫಸಲು ಸರಿಯಾಗಿ ಬಾರದೆ ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Darbhanga: ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಟ್ರೈನಿ ಮಹಿಳಾ ಸಬ್ ಇನ್ಸ್‌ಪೆಕ್ಟರ್!
ಅನಾರೋಗ್ಯ: ಬಾಲಕಿ ಆತ್ಮಹತ್ಯೆ
ಉಡುಪಿ(Udupi): ಇಲ್ಲಿನ ಬನ್ನಂಜೆಯ ಗರಡಿಯ ಬಳಿ ಶಾಲಾ ಬಾಲಕಿ ದೀಪಾ ತಳವಾರ (15) ಎಂಬಾಕೆ ಅನಾರೋಗ್ಯದಿಂದ(Illness) ನೇಣು ಬಿಗಿದುಕೊಂಡು ಮೃತಟ್ಟಿದ್ದಾಳೆ. ಮೂಲತಃ ಬಾಗಲಕೋಟೆಯವರಾದ(Bagalkot) ಹೆತ್ತವರೊಂದಿಗೆ ಆಕೆ ವಾಸಿಸುತ್ತಿದ್ದಳು. ಹುಟ್ಟಿದಾಗಿನಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜಿಗುಪ್ಸೆಗೊಂಡು ಗುರುವಾರ ತಮ್ಮ ಬಾಡಿಗೆ ಮನೆಯ ಮಾಡಿಗೆ ನೈಲಾನ್ ಸೀರೆ ಕಟ್ಟಿಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಉಡುಪಿ: ಇಲ್ಲಿನ ಗುಂಡಿಬೈಲಿನ ಹರಿನಗರದಲ್ಲಿ ನಿತ್ಯಾನಂದ ಶೆಟ್ಟಿಗಾರ (41) ಎಂಬವರು ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ತೊಂದರೆ ಮತ್ತು ತಾಯಿಯ ಸಾವಿನಿಂದ ಜಿಗುಪ್ಸೆಗೊಂಡು ಮನೆಯ ಮಲಗುವ ಕೋಣೆಯ ಸೀಲಿಂಗ್ ಫ್ಯಾನಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.