KYC fraud : ವಿನೋದ್ ಕಾಂಬ್ಳಿಗೆ ಲಕ್ಷ ರೂ. ವಂಚನೆ, ಆದ್ರೆ ಹಣ ವಾಪಸ್ ಬಂತು!

Published : Dec 10, 2021, 09:45 PM ISTUpdated : Dec 10, 2021, 09:46 PM IST
KYC fraud : ವಿನೋದ್ ಕಾಂಬ್ಳಿಗೆ ಲಕ್ಷ ರೂ. ವಂಚನೆ, ಆದ್ರೆ ಹಣ ವಾಪಸ್ ಬಂತು!

ಸಾರಾಂಶ

* ವಿನೋದ್ ಕಾಂಬ್ಳಿ ಬ್ಯಾಂಕ್ ಖಾತೆಗೆ ವಂಚಕರ ಕನ್ನ * ಕೆವೈಸಿ ಅಪ್ ಡೇಟ್ ಮಾಡಬೇಕು ಎಂದು ಕರೆ ಮಾಡಿದ್ರು * ಕಳಿಸಿದ ಲಿಂಕ್ ಓಪನ್ ಮಾಡಿದ ಕಾಂಬ್ಳಿ ಖಾತೆಯಿಂದ ಒಂದು ಲಕ್ಷ ಕಟ್

ಮುಂಬೈ (ಡಿ. 10)  ತಂತ್ರಜ್ಞಾನ ಬೆಳೆದಂತೆ ಆನ್ ಲೈನ್ (Online) ವಂಚನೆಯೂ ಹೆಚ್ಚಾಗಿದೆ. ಸೈಬರ್ ಅಪರಾಧ (Cyber Crime)ತಡೆಗೆ ಪೊಲೀಸರು ಹರಸಾಹಸ ಮಾಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ.  ಭಾರತ ಕ್ರಿಕೆಟ್‌ (Team India) ತಂಡದ ಮಾಜಿ ಆಟಗಾರ ವಿನೋದ್‌ ಕಾಂಬ್ಳಿ(Vinod Kambli) ಅವರಿಗೆ  ಒಂದು ಲಕ್ಷ ರೂ.  ವಂಚನೆಯಾಗಿದೆ.

ಬಾಂದ್ರಾ ಪೊಲೀಸ್‌ ಠಾಣೆಗೆ ಕಾಂಬ್ಳಿ ದೂರು ದಾಖಲಿಸಿದ್ದಾರೆ.  ಬ್ಯಾಂಕ್‌ ಸಿಬ್ಬಂದಿ ಎಂದು ಹೇಳಿಕೊಂಡು ವಿನೋದ್‌ ಕಾಂಬ್ಳಿಗೆ ಕರೆ ಮಾಡಿದ್ದ ವ್ಯಕ್ತಿ ನಿಮ್ಮ ಕೆವೈಸಿ ಅಪ್ ಡೇಟ್ ಮಾಡಬೇಕು ಎಂದು ಕೇಳಿದ್ದಾನೆ.
 
ಇದಾದ ಮೇಲೆ ಲಿಂಕ್ ಒಂದನ್ನು ಕಳಿಸಿ ಅದರಲ್ಲಿರುವ ಅರ್ಜಿ ಡೌನ್ ಲೋಡ್ ಮಾಡಿಕೊಳ್ಳಿ ಎಂದು ತಿಳಿಸಿದ್ದಾನೆ.  ವಂಚಕನ ಮಾತು ನಂಬಿದ ಕಾಂಬ್ಳಿ ಲಿಂಕ್ ಓಪನ್ ಮಾಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಿನೋದ್ ಅವರ ಖಾತೆಯಿಂದ ಒಂದು ಲಕ್ಷ ರೂ. ಕಟ್ ಆಗಿದೆ.

ದೂರು ದಾಖಲಾದ ಬಳಿಕ ಮುಂಬೈ ಪೋಲಿಸರು ಹಾಗೂ ಸೈಬರ್‌ ಪೊಲೀಸರು ವಿನೋದ್ ಕಾಂಬ್ಳಿ ಖಾತೆ ಹೊಂದಿದ್ದ ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ವಂಚಕನಿಂದ ಕಳೆದುಕೊಂಡಿದ್ದ ಒಂದು ಲಕ್ಷ ರೂ. ಹಣವನ್ನು ಮಾಜಿ ಕ್ರಿಕೆಟಿಗನ ಖಾತೆಗೆ ಹಾಕಿದ್ದಾರೆ.

ಬಿಗ್ ಬಾಸ್ ಗೂ ಎಂಟ್ರಿ ಕೊಟ್ಟಿದ್ದ ವಿನೋದ್ ಕಾಂಬ್ಳಿ

ಯಾವಾಗ ಪ್ರಕರಣ:   ಡಿಸೆಂಬರ್‌ 3 ರಂದು ಬ್ಯಾಂಕ್‌ ಸಿಬ್ಬಂದಿಯೆಂದು ಒಬ್ಬ ವ್ಯಕ್ತಿ ವಿನೋದ್‌ ಕಾಂಬ್ಳೆಗೆ ಕರೆ ಮಾಡಿದ್ದಾರೆ ಹಾಗೂ ಬ್ಯಾಂಕ್‌ ಸಂಬಂಧ ಕೆವೈಸಿಯನ್ನು ಅಪಡೇಟ್‌ ಮಾಡಲು ಹೇಳಿದ್ದಾರೆ. ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ವಂಚಕ ಮಾಜಿ ಕ್ರಿಕೆಟಿಗನ ಫೋನ್‌  ನಲ್ಲಿನ ವಿಚಾರಗಳನ್ನು ಹ್ಯಾಕ್ ಮಾಡಿಕೊಂಡಿದ್ದಾನೆ.  ವಿನೋದ್ ಬ್ಯಾಂಕ್‌  ವಿವರ ಹಾಗೂ ಓಟಿಪಿ ಪಡೆದುಕೊಂಡು ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ತಕ್ಷಣ ಎಚ್ಚೆತ್ತುಕೊಂಡು ಪೊಲೀಸರಿಗೆ  ಮಾಹಿತಿ ನೀಡಿದೆ, ಸೈಬರ್ ಪೊಲೀಸ್ ಇಲಾಖೆ ನೆರವಿಗೆ ಬಂದು ನನ್ನ ಹಣವನ್ನು ಮರಳಿ ಸಿಗುವಂತೆ ಮಾಡಿತು. ತಕ್ಷಣ ಅಕೌಂಟ್ ಬ್ಲಾಕ್ ಮಾಡಲಾಯಿತು. ಈ ವಿಚಾರದಲ್ಲಿ ಮೊದಲು ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ.  ಯಾರೂ ನನ್ನ ಹಾಗೆ ಮೋಸ ಹೋಗಬೇಡಿ ಎಂದು ಕಾಂಬ್ಳಿ  ಕೇಳಿಕೊಂಡಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗೆಳೆಯ ಕಾಂಬ್ಳಿ ಅವರೊಂದಿಗೆ ಕ್ರಿಕೆಟ್ ಜೀವನ ಆರಂಭಿಸಿದರು. ಎಡಗೈ ಬ್ಯಾಟ್ಸ್ ಮನ್ ಭಾರತದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದರು. 17 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಸೇರಿದಂತೆ 1084 ರನ್‌ ಗಳಿಸಿದರೆ 104 ಏಕದಿನ ಪಂದ್ಯಗಳಿಂದ 2 ಶತಕ ಸೇರಿದಂತೆ 2477 ರನ್‌ ಕಲೆ ಹಾಕಿದ್ದು ವಿನೋದ್ ಸಾಧನೆ.

ಮುಂಬೈನಲ್ಲೇ ಇನ್ನೊಂದು ಪ್ರಕರಣ  ದಾಖಲು:   ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ 74 ವರ್ಷದ ನಟಿರೊಬ್ಬರು  ದೂರು ನೀಡಿದ್ದರು.  ವೈನ್ ಸ್ಟೋರ್ ನ ಉದ್ಗೋಗಿ ಎಂದು ಹೇಳಿ ನಂಬಿಸಿ 3.05 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಿದ್ದರು.  ತಮ್ಮ ಆಪ್ತರಿಗೆ ದುಬಾರಿ ವಿಸ್ಕಿಯೊಂದನ್ನು ಗಿಫ್ಟ್ ನೀಡಲು ನಟಿ ಹುಡುಕಾಟ ನಡೆಸಿದ್ದರು. ಆಗ ಸಿಕ್ಕ ನಂಬರ್ ಗೆ ಕರೆ ಮಾಡಿದಾಗ ನಾನು ಅತಿ ಕಡಿಮೆ ದರದಲ್ಲಿ ಕೊಡಿಸುತ್ತೇನೆ ಎಂದು ನಂಬಿಸಿದ ವ್ಯಕ್ತಿ ಒಟಿಪಿ ಪಡೆದುಕೊಂಡಿದ್ದಾನೆ. ಡೆಬಿಟ್ ಕಾರ್ಡ್ ವಿವರ ಪಡೆದುಕೊಂಡು  ಖಾತೆಯಲ್ಲಿದ್ದ ಎಲ್ಲ ಹಣ ಡ್ರಾ  ಮಾಡಿಕೊಂಡಿದ್ದಾನೆ. 

ಸೈಬರ್ ಕಳ್ಳರ (Cyber Crime) ಹಾವಳಿ ಮಾತ್ರ ನಿರಂತರ.. ನಿವೃತ್ತ ಐಪಿಎಸ್ ಅಧಿಕಾರಿ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಎಗರಿಸಿದ್ದಾರೆ. ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಗೆ (Shankar Bidari) ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.

ಪಾನ್ ಕಾರ್ಡ್(PAN Card)  ನಂ. ಲಿಂಕ್  ಮಾಡಬೇಕೆಂದು ಕರೆ ಮಾಡಿದ್ದಾರೆ. ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್ (Bank) ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ  ಬಳಿಕ ಮೊಬೈಲ್ ಗೆ ಬರುವ ಮೇಸೆಜ್ ನ ಓಟಿಪಿ ನಂ. ಕೇಳಿದ್ದಾರೆ. ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್ ನಲ್ಲಿದ್ದ 89 ಸಾವಿರ ಹಣ ಕಡಿತವಾಗಿತ್ತು. 


ಸೈಬರ್ ಅಪರಾಧದ ಬಗ್ಗೆ ಪೊಲೀಸ್ ಇಲಾಖೆ ಆಗಾಗ ಎಚ್ಚರಿಸುವ ಕೆಲಸ ಮಾಡಿಕೊಂಡೆ ಬಂದಿದೆ. ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ.. ಆಧಾರ್ ಅಪ್ ಡೇಟ್ ಮಾಡಬೇಕಿದೆ.. ಬಹುಮಾನ ಬಂದಿದೆ.. ಸ್ಕ್ರಾಚ್ ಕಾರ್ಡ್ ಕಳಿಸಿದ್ದೇವೆ ಸ್ಕ್ರಾಚ್ ಮಾಡಿ..  ಕೋಡ್ ಸ್ಕಾನ್ ಮಾಡಿ.. ನಿಮಗೆ ಲಾಟರಿ ತಾಗಿದೆ ಹೀಗೆ ಹಲವಾರು ನೆಪದಲ್ಲಿ ಸೈಬರ್ ವಂಚಕರು ಕರೆ ಮಾಡುತ್ತಾರೆ.. ಇಲ್ಲ ಮೊಬೈಲ್ ಗೆ ಮೆಸೇಜ್ ಕಳಿಸುತ್ತಾರೆ. ಒಂದು ಚೂರು ಜಾಗೃತೆ ತಪ್ಪಿದರೂ ಅವರ ಬಲೆಗೆ ಬೀಳಬೇಕಾಗುತ್ತದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!