*ದಾವಣಗೆರೆಯ ನಲ್ಲೂರು ಶಾಲೆಯಲ್ಲಿ ಘಟನೆ
*ಶಿಕ್ಷಕ ಬುದ್ಧಿವಾದ ಹೇಳಿದ್ದಕ್ಕೆ ಕಿಡಿಗೇಡಿ ಕೃತ್ಯ
* ವ್ಯಾಪಕ ಆಕ್ರೋಶ, ಟೀಸಿ ಕೊಟ್ಟು ಕಳಿಸಲು ಆಗ್ರಹ
* ಸೋಶಿಯಲ್ ಮೀಡಿಯಾದಲ್ಲಿಯೂ ವ್ಯಾಪಕ ಪ್ರತಿಕ್ರಿಯೆ
ದಾವಣಗೆರೆ(ಡಿ. 11) ಬುದ್ಧಿ ಹೇಳುತ್ತಾರೆಂಬ ಕಾರಣಕ್ಕೆ ಶಿಕ್ಷಕರೊಬ್ಬರ (Teacher)ವಿರುದ್ಧ ಅಸಮಾಧಾನಗೊಂಡಿದ್ದ ವಿದ್ಯಾರ್ಥಿಗಳ (Students)ಗುಂಪೊಂದು ಶಿಕ್ಷಕನ ತಲೆಗೆ ಕಸದ ಬುಟ್ಟಿಹಾಕಿ, ಹಲ್ಲೆ ನಡೆಸಿರುವ ಅನಾಗರಿಕ ಘಟನೆ ಚನ್ನಗಿರಿ(Davanagere) ತಾಲೂಕಿನ ನಲ್ಲೂರು ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ನಡೆದಿದ್ದು ಇದರ ವೀಡಿಯೋ ವೈರಲ್(Video Vral) ಆಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕಿಡಿಗೇಡಿ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ(ಟಿ.ಸಿ) ಕೊಡುವುದು ಮಾತ್ರವಲ್ಲದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆಯೂ ಒತ್ತಾಯಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ದೌಡಾಯಿಸಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಪಾಲಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಸಂತ್ರಸ್ತ ಶಿಕ್ಷಕ ಪ್ರಕಾಶ, ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು ಆ ವಿದ್ಯಾರ್ಥಿಗಳಿಗೆ ಟಿ.ಸಿ.ಕೊಟ್ಟು ಕಳಿಸುವಂತೆ ಸೂಚನೆ ನೀಡಿದ್ದಾರೆ.
undefined
ಘಟನೆ ವಿವರ: ನಲ್ಲೂರು ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದ ಹಿಂದಿ ಸಹಶಿಕ್ಷಕರೊಬ್ಬರು ಬುದ್ಧಿಮಾತು ಹೇಳಿದ ಕಾರಣಕ್ಕೆ 10ನೇ ತರಗತಿಯ ಮೂರ್ನಾಲ್ಕು ಮಂದಿ ಕಿಡಿಗೇಡಿ ವಿದ್ಯಾರ್ಥಿಗಳ ಗುಂಪು ಈ ಕೃತ್ಯ ಎಸಗಿದ್ದಾರೆ. ಅನೇಕ ದಿನಗಳಿಂದಲೂ ಶಾಲೆಯ ಈ ವಿದ್ಯಾರ್ಥಿಗಳ ಗುಂಪು ಇಂತಹ ಕೃತ್ಯಗಳನ್ನು ಎಸಗಿಕೊಂಡೇ ಬರುತ್ತಿತ್ತು. ಆದರೆ, ಶಿಕ್ಷಕ ಮಾತ್ರ ಹುಡುಗು ಬುದ್ಧಿ ಇಂದಲ್ಲ, ನಾಳೆ ವಿದ್ಯಾರ್ಥಿಗಳು ಬದಲಾಗುತ್ತಾರೆ ಎಂಬ ಸಂಯಮದಲ್ಲೇ ಇದ್ದರು. ಆದರೆ, ಇತ್ತೀಚೆಗೆ ಶಿಕ್ಷಕನ ತಲೆಗೆ ಕಸದ ಬುಟ್ಟಿಮುಚ್ಚಿ ಹಲ್ಲೆ ನಡೆಸಿದ್ದಾರೆ. ಇದನ್ನು ವೀಕ್ಷಿಸಿದ ಬೇರೆ ವಿದ್ಯಾರ್ಥಿಗಳ್ಯಾರೋ ವೀಡಿಯೋ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದಾರೆ.
ಪುನೀತ್ ರಾಜ್ ಕುಮಾರ್ ಹಾಡು ಹೇಳಿ ಶಿಕ್ಷಕರಿಗೆ ವಂದನೆ
ಕ್ಷಮೆ ಕೇಳಿಸಿದ ಎಬಿವಿಪಿ: ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಶಾಲೆಗೆ ಧಾವಿಸಿದ ಎಬಿವಿಪಿ ಕಿಡಿಗೇಡಿತನ ಮಾಡಿದ ವಿದ್ಯಾರ್ಥಿಗಳನ್ನು ಕರೆಸಿ ಶಿಕ್ಷಕರ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದೆ.
ಸೋಶಿಯಲ್ ಮೀಡಿಯಾದ ಪರಿಣಾಮವೋ, ಆಧುನಿಕ ಜಗತ್ತಿನ ಪರಿಣಾಮವೋ ವಿದ್ಯಾರ್ಥಿಗಳು ಈ ರೀತಿ ನಡೆದುಕೊಳ್ಳುತ್ತಿರುವುದನ್ನು ಮಾತ್ರ ಸಹಿಸಲು ಅಸಾಧ್ಯ. ಸೋಶಿಯಲ್ ಮೀಡಿಯಾದಿಂದಲೇ ಇಂಥಹ ಪ್ರಕರಣ ಬೆಳಕಿಗೆ ಬಂದಿರುವುದು ಮಾತ್ರ ವಿಪರ್ಯಾಸ
ವಿದ್ಯಾರ್ಥಿಯನ್ನು ಕರೆಯಲು ಹೋದ ಶಿಕ್ಷಕನ ಮೇಲೆ ಹಲ್ಲೆ: ಶಾಲೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಯನ್ನು ಶಾಲೆಗೆ ಕಳಿಸುವಂತೆ ಪೋಷಕರ ಬಳಿ ಮಾತನಾಡಲು ಹೋದ ಶಿಕ್ಷಕರರ ಮೇಲೆ ಪಾನಮತ್ತ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿರುವ ಪ್ರಕರಣ ಕುಣಿಗಲ್ ನಿಂದ ವರದಿಯಾಗಿತ್ತು.
ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜು ಹಲ್ಲೆಗೆ ಒಳಗಾಗಿದ್ದರು ಲಾಳಾಪುರ ಕಾಲೋನಿಯ ವಿದ್ಯಾರ್ಥಿ ಸೋಮಶೇಖರ್ ಹಲವು ದಿನಗಳಿಂದ ಶಾಲೆಗೆ ಗೈರು ಹಾಜರಾಗಿದ್ದರಿಂದ ಪೋಷಕರನ್ನು ಕೇಳಲು ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜು ಪೋಷಕರ ಮನೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾಗ ಪಕ್ಕದ ಪೆಟ್ಟಿಗೆ ಅಂಗಡಿ ಬಳಿ ಕುಳಿತ್ತಿದ್ದ ಪ್ರಸಾದ್ ಎಂಬುವವನು, ಅವರ ಮಕ್ಕಳನ್ನು ವಿಚಾರಿಸುತ್ತೀಯ ನಮ್ಮ ಮಕ್ಕಳನ್ನು ಏಕೆ ವಿಚಾರಿಸುವುದಿಲ್ಲ ಎಂದು ಕೇಳಿದ್ದ.
ಇದಕ್ಕೆ ಶಿಕ್ಷಕ ನೀವು ಯಾರು ನನಗೆ ಗೊತ್ತಿಲ್ಲ, ನಿಮ್ಮ ಮಕ್ಕಳು ನಮ್ಮ ಶಾಲೆಗೆ ಬರುತ್ತಿಲ್ಲ ಎಂದು ಹೇಳಿದಾಗ, ನೀನು ಕತ್ತೆ ಕಾಯುತ್ತಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ಮುಖ್ಯ ಶಿಕ್ಷಕರನ್ನು ನಿಂದಿಸಿ ಅವರ ಶರ್ಟ್ ಕಾಲರ್ ಹಿಡಿದು ತಲೆ ಹಾಗೂ ಕಪ್ಪಾಳದ ಮೇಲೆ ಹೊಡೆದು ಬಳಿಕ ಮತ್ತೊಬ್ಬ ವ್ಯಕ್ತಿ ಅವನ ಜೊತೆಯಲ್ಲಿ ಬಂದು ಇಬ್ಬರು ಸೇರಿ ಹಲ್ಲೆ ಮಾಡಿದ್ದರು.