
ಬೆಂಗಳೂರು (ಮಾ.21): ಕೋಲ್ಕತ್ತಾದಲ್ಲಿ ಗಂಡನನ್ನು ಬಿಟ್ಟುಬಂದು ಬೆಂಗಳೂರಿನಲ್ಲಿ ಅನೈತಿಕ ಸಂಬಂಧದ ಮೂಲಕ ಸಂಸಾರ ಮಾಡುತ್ತಿದ್ದ ಮಹಿಳೆಯನ್ನು ಆಕೆಯ ಗಂಡನೇ ಬಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ 14 ವರ್ಷಗಳ ಹಿಂದೆ ಕೋಲ್ಕತ್ತಾ ನಿವಾಸಿಗಳಾದ ತಬಸೂಮ್ ಹಾಗೂ ಶೇಕ್ ಸೋಹಿಲ್‌ಗೂ ಮದುವೆ ಆಗಿತ್ತು. ಆದರೆ, ದುಡಿಮೆ ಹಾಗೂ ನೆಮ್ಮದಿಯ ಜೀವನವನ್ನು ನಡೆಸಲು ಕಳೆದ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಈ ವೇಳೆ ಇಬ್ಬರೂ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದರೆ, ಈ ವೇಳೆ ತಬಸೂಮ್‌ಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಉಂಟಾಗಿದೆ. ಈ ಸ್ನೇಹ ಪ್ರೀತಿಗೆ ತಿರುಗಿ ಅನೈತಿಕ ಸಂಬಂಧಕ್ಕೆ ಕಾರಣವಾಗಿದೆ. ಇಬ್ಬರೂ ಕೂಡ ಆಗಿಂದಾಗ್ಗೆ ಸೇರುತ್ತಿರುವುದು ಗಂಡನ ಗಮನಕ್ಕೆ ಬಂದಿದೆ.
ನಟ ಅಹಿಂಸಾ ಚೇತನ್ ಬಂಧನ: ಹಿಂದುತ್ವದ ವಿರುದ್ಧ ಕೆಟ್ಟದಾಗಿ ಪೋಸ್ಟ್
ಅನೈತಿಕ ಸಂಬಂಧದ ಬೆನ್ನಲ್ಲೇ ವಾಪಸ್ ಹೋದ ದಂಪತಿ: ಇನ್ನು ಪತ್ನಿ ತಬಸೂಮ್ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪುನಃ ಪತ್ನಿಯನ್ನು ಕರೆದುಕೊಂಡು ಕೋಲ್ಕತ್ತಾಗೆ ವಾಪಸ್ ಹೋಗುದ್ದಾರೆ. ಆದರೆ, ಬೆಂಗಳೂರಿನ ಯುವಕನೊಂದಿಗೆ ನಿರಂತರವಾಗಿ ಫೋನ್ ಮೂಲಕವೇ ಸಂಪರ್ಕದಲ್ಲಿದ್ದ ತಬಸೂಮ್, ಕೋಲ್ಕತ್ತಾಗೆ ಹೋಗಿ 2 ವರ್ಷದ ನಂತರ ಗಂಡನನ್ನು ಬಿಟ್ಟು ಬೆಂಗಳೂರಿಗೆ ಆಗಮಿಸಿದ್ದಾಳೆ. ಇನ್ನು ಇಲ್ಲಿಗೆ ಆಗಮಿಸಿದ ತಬಸೂಮ್ ತನ್ನ ಪ್ರಿಯಕರ ನಯೀಮ್‌ನೊಂದಿಗೆ ಬೆಂಗಳೂರಿನ ಹೊರವಲಯ ಹೆಣ್ಣೂರಿನ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಾಗಿದ್ದಳು.
ಪ್ರಿಯಕರನನ್ನು ಹುಡುಕಿಕೊಂಡು ಬಂದ ತಬಸೂಮ್: ಕೋಲ್ಕತ್ತಾದಲ್ಲಿ ಪತ್ನಿ ಬಿಟ್ಟು ಹೋದ ಹಿನ್ನೆಲೆಯಲ್ಲಿ ಶೇಕ್ ಸೋಹಿಲ್ ಒಬ್ಬಂಟಿ ಜೀವನ ಮಾಡುತ್ತಿದ್ದನು. ಇನ್ನು ತಬಸೂಮ್ ಕೂಡ ಬೆಂಗಳೂರಿಗೆ ಬಂದು ಪ್ರಿಯಕರನೊಂದಿಗೆ ಸಂಸಾರ ಮಾಡಿಕೊಂಡು ಒಂದು ಮಗುವಿಗೂ ಜನ್ಮ ನೀಡಿದ್ದಳು. ಇನ್ನು ಅನೈತಿಕ ಸಂಬಂಧ ಆಗಿದ್ದರೂ, ಉತ್ತಮವಾಗಿ ಜೀವನ ನಡೆಯುತ್ತಿದೆ ಎಂದು ನೆಮ್ಮದಿಯಿಂದ ಇದ್ದರು. ಆದರೆ, ಕೊಲೆ ಆರೋಪಿ ಸೋಜಿಲ್‌ಗೆ ತನ್ನ ಹೆಂಡತಿ ಬೆಂಗಳೂರಿನಲ್ಲಿ ಪ್ರಿಯಕರನೊಂದಿಗೆ ನೆಮ್ಮದಿಯಿಂದ ಜೀವನ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದಿದೆ. ಹೀಗೆ ವಿಚಾರ ಗೊತ್ತಾಗುತ್ತಿದ್ದಂತೆ ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದಾನೆ.
ಮಹಿಳೆಯೊಂದಿಗೆ ಸರಸಕ್ಕೆ ಹೋದ ಬೆಂಗಳೂರು ಉದ್ಯಮಿಗೆ ಮುಂಜಿ ಮಾಡುವುದಾಗಿ ಧಮ್ಕಿ: ಕಾಮದಾಸೆಗೆ ಹೋಗಿ ಹಣ ಕಳ್ಕೊಂಡ
ಕಂಠಪೂರ್ತಿ ಕುಡಿದು ಬಂದು ಚಾಕು ಚುಚ್ಚಿದ: ಇನ್ನು ನಿನ್ನೆ ಶೇಕ್ ಸೋಹಿಲ್ ತನ್ನ ಪತ್ನಿ ತಬಸೂಮ್‌ಳನ್ನು ಹುಡುಕಿಕೊಂಡು ಬೆಂಗಳೂರಿಗೆ ಆಗಮಿಸಿ, ಕಂಠಪೂರ್ತಿ ಕುಡಿದು ಸೀದಾ ನಯೀಮ್ ಮನೆಯ ಬಳಿ ತೆರಳಿದ್ದಾನೆ. ಅಲ್ಲಿ ಪತ್ನಿ ತಬಸೂಮ್ ಬಳಿ ಬಂದು ನೀನು, ನಯೀಮ್‌ನೊಂದಿಗೆ ಸಂಸಾರ ಮಾಡಿ ಮಗುವನ್ನು ಮಾಡಿಕೊಂಡಿರುವುದು ಸರಿಯಲ್ಲ ಎಂದು ಜಗಳ ಮಾಡಿದ್ದಾನೆ. ಇನ್ನು ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಶೇಕ್ ಸೋಹಿಲ್ ಚಾಕುವಿನಿಂದ ತಬಸೂಮ್‌ಗೆ ಇರಿದು ಕೊಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿಯೇ ಒದ್ದಾಡಿ ಆಕೆ ಪ್ರಾಣಬಿಟ್ಟಿದ್ದಾರೆ. ಈ ಬಗ್ಗೆ ನಯೀಮ್ ದೂರು ನೀಡಿದ್ದು, ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ