ಪೋನ್ ಮುಂದೆ ಬಚ್ಚೆ ಬಿಚ್ಚಿ ಬೆತ್ತಲೆ ಲೈವ್ ಬಾ, ವಿದೇಶಿ ಗಂಡನ ಹುಚ್ಚಾಟ!

By Suvarna News  |  First Published Sep 6, 2021, 5:51 PM IST

* ಪತ್ನಿಗೆ ತಿಳಿಸದೇ ವಿದೇಶಕ್ಕೆ ಹಾರಿದ ಪತಿರಾಯ
* ಪೋನ್ ಕ್ಯಾಮರಾ ಮುಂದೆ ಬಚ್ಚೆ ಬಿಚ್ಚಿ ಬೆತ್ತಲೆ ಲೈವ್ ಬಾ!
* ಕಿರುಕುಳ ನೀಡುತ್ತಿದ್ದ ಪತಿರಾಯನ ಮೇಲೆ ದೂರು ದಾಖಲು


ಅಹಮದಾಬಾದ್(ಸೆ. 06)  ಗುಜುರಾತ್ ನ ಅಹಮದಾಬಾದ್ ನಿಂದ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಮಹಿಳೆಯೊಬ್ಬಳ ಮೇಲೆ ಎಲ್ಲ ಅತ್ತೆಯಂದಿರು ಸೇರಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಹಿಳೆ ತನ್ನ ಅತ್ತೆ ಮತ್ತು ಗಂಡನ ಮೇಲೆ ದೂರು ದಾಖಲಿಸಿದ್ದಾರೆ.

ಕೆನಾಡಾದಲ್ಲಿ ವಾಸವಿದ್ದ ಗಂಡ ವಿಡಿಯೋ ಕಾಲ್ ನಲ್ಲಿಯೇ  ಲೈಂಗಿಕ ಚಟುವಟಿಕೆ ಮಾಡೋಣ ಎಂದು ಒತ್ತಾಯ ಮಾಡಿದ್ದಾನೆ. ಇದರಿಂದ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.

Tap to resize

Latest Videos

undefined

ದೂರುದಾರೆ  ಅಹಮದಾಬಾದ್‌ನ ಗೋಟಾ ಪ್ರದೇಶದ   30 ವರ್ಷದ ನಿವಾಸಿಯಾಗಿದ್ದಾರೆ.  ಸಮುದಾಯದ ಮ್ಯಾಟ್ರಿಮೋನಿಯೊಂದರಲ್ಲಿ ಪರಿಚಯವಾದ ಜೋಡಿ ಮದುವೆಯಾಗುವ ನಿರ್ಧಾರಕ್ಕೆ ಬಂದರು.  ಮದುವೆಯಾದ ಮೇಲೆ ಗಂಡ ಮನೆಗೆ ಪ್ರತಿದಿನ ತಡವಾಗಿ ಬರಲು ಆರಂಭಿಸಿದ.  ದಿನಾ ಕುಡಿದು ಬರಲು ಆರಂಭಿಸಿ ಹೆಂಡತಿಯ ಮೇಲೆ ಹಲ್ಲೆ ಮಾಡುತ್ತಿದ್ದ.

15 ರ ಮಗಳ ಬೆತ್ತಲೆ ಪೋಟೋ ಕ್ರೇಜ್ ನೋಡಿ ಪಾಲಕರಿಗೆ ಹೃದಯಾಘಾತ

ಆಗಸ್ಟ್ 25, 2020 ರಂದು ಗಂಡ ಹೆಂಡತಿಗೂ ತಿಳಿಸದೆ ವಿದೇಶಕ್ಕೆ ಹಾರಿದ.  ವಿದೇಶಕ್ಕೆ ಬಂದವನೆ ಪತ್ನಿಗೆ ಅಶ್ಲೀಲ ಸಂದೇಶ ರವಾನಿಸಲು ಆರಂಭಿಸಿದ.  ಅಶ್ಲೀಲ ಚಾಟ್ ಮಾಡಬೇಕು ಎಂದು ಮೇಲಿಂದ ಮೇಲೆ ಒತ್ತಾಯ ಮಾಡತೊಡಗಿದ.. ಇದನ್ನು ವಿರೋಧಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ.

ಗಂಡನ ಕಿರುಕುಳ ಇಲ್ಲಿಗೆ ನಿಲ್ಲಲಿಲ್ಲ. ಪೋನ್ ಕ್ಯಾಮರಾದ ಮುಂದೆ ನಿನ್ನ ಎಲ್ಲ ಬಟ್ಟೆ ಕಳಚು.. ಲೈವ್ ಬಾ ಎಂದು ಪೀಡನೆ ಆರಂಭಿಸಿದ. ಇದನ್ನು ನಿರಾಕರಿಸಿದ್ದಕ್ಕೆ ತನ್ನ ಸಂಬಂಧಿಕರ ಮೂಲಕ ಮಹಿಳೆಯ ಮೇಲೆ ಹಲ್ಲೆ ಮಾಡಿಸಿದ ಎಂದು ಮಹಿಳೆ ಆರೋಪಿಸಿದ್ದಾರೆ.

ಇದಾದ ಮೇಲೆ ಮಹಿಳೆಯ ಮೊಬೈಲ್ ಕಸಿದುಕೊಂಡ ಅತ್ತೆಯಂದಿರು ತವರು ಮನೆಯಿಂದ ಹಣ, ಚಿನ್ನ ತರುವಂತೆ ಒತ್ತಾಯ ಮಾಡಿದ್ದಾರೆ. ಈ ಎಲ್ಲ ಘಟನೆಗಳಿಂದ ಬೇಸತ್ತ ಮಹಿಳೆ ದೂರು ದಾಖಲಿಸಿದ್ದಾರೆ. 

click me!