ಬೆಂಗಳೂರು; ಗ್ಯಾಸ್ ಗೀಸರ್ ಮೋನಾಕ್ಸೈಡ್ ಸೋರಿಕೆ, MBBS ವಿದ್ಯಾರ್ಥಿನಿ ದುರ್ಮರಣ

By Suvarna News  |  First Published Sep 6, 2021, 5:10 PM IST

* ಮಹಾಲಕ್ಷ್ಮೀ ಲೇಔಟ್ ನ ಮನೆಯ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದ ಸಂಪದ

* 2 ಗಂಟೆ ಕಳೆದರೂ ಸ್ನಾನದ ಮನೆಯಿಂದ ಹೊರಬಾರದ ವಿದ್ಯಾರ್ಥಿನಿ

* ಗಾಬರಿಗೊಂಡ ಕುಟುಂಬದವರು ಡೋರ್ ಮುರಿದು ನೋಡಿದ ಬಳಿಕ ಕುಸಿದು ಬಿದ್ದಿದ್ದ ಸಂಪದ

* ಆಸ್ಪತ್ರೆಗೆ ಕರೆತರುವ ಮೊದಲೆ ಮೃತಪಟ್ಟಿರುವುದಾಗಿ ತಿಳಿಸಿದ ವೈದ್ಯರು


ಬೆಂಗಳೂರು(ಸೆ. 06) ಗ್ಯಾಸ್ ಗೀಸರ್  ಉಸಿರುಗಟ್ಟಿ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಸಂಪದ (23) ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿದ್ದಾರೆ. 

ಸೆಪ್ಟೆಂಬರ್ 4 ರ ಮಧ್ಯಾಹ್ನ 12:30 ರ ವೇಳೆಗೆ ಸ್ನಾನಕ್ಕೆಂದು ತೆರಳಿದ್ದ ವಿದ್ಯಾರ್ಥಿನಿ ತೆರಳಿದ್ದರು. ಈ ವೇಳೆ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿ ಉಸಿರುಗಟ್ಟಿ ಸಾವು ಕಂಡಿದ್ದಾರೆ ಮಹಾಲಕ್ಷ್ಮೀ ಲೇಔಟ್ ನ ಮನೆಯ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದ ಸಂಪದ ಅಲ್ಲೇ ಸಾವು ಕಂಡಿದ್ದಾರೆ.#

Tap to resize

Latest Videos

undefined

ದಂಪತಿ ಪ್ರಾಣಕ್ಕೆ ಸಂಚಕಾರ ತಂತು ಬಾತ್ ರೂಂ ಶೃಂಗಾರ

2 ಗಂಟೆ ಕಳೆದರೂ ಸ್ನಾನದ ಮನೆಯಿಂದ ವಿದ್ಯಾರ್ಥಿನಿ ಹೊರಬಂದಿಲ್ಲ. ಗಾಬರಿಗೊಂಡ ಕುಟುಂಬದವರು ಡೋರ್ ಮುರಿದು ನೋಡಿದ ಬಳಿಕ ಕುಸಿದು ಬಿದ್ದಿದ್ದ ಸಂಪದಳನ್ನು ಕಂಡಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆತರುವ ಮೊದಲೆ ಮೃತಪಟ್ಟಿರುವುದಾಗಿ ತಿಳಿಸಿದ ವೈದ್ಯರು ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

click me!