ತಮ್ಮ ಸೋದರ ಸಂಬಂಧಿ ಮಹಿಳೆಯ ಚಿನ್ನದ ಸರ ಕಳವು ಮಾಡಿದ್ದ ಮಹಿಳೆಯೊಬ್ಬಳನ್ನು ದಂಡು ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಠದಹಳ್ಳಿ ನಿವಾಸಿ ಚಂದ್ರಶರ್ಮಾ ಬಂಧಿತಳು.
ಬೆಂಗಳೂರು (ಫೆ.2) : ತಮ್ಮ ಸೋದರ ಸಂಬಂಧಿ ಮಹಿಳೆಯ ಚಿನ್ನದ ಸರ ಕಳವು ಮಾಡಿದ್ದ ಮಹಿಳೆಯೊಬ್ಬಳನ್ನು ದಂಡು ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಠದಹಳ್ಳಿ ನಿವಾಸಿ ಚಂದ್ರಶರ್ಮಾ ಬಂಧಿತಳಾಗಿದ್ದು, ಆರೋಪಿಯಿಂದ ₹8.51 ಲಕ್ಷ ಮೌಲ್ಯದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಕೇರಳದಿಂದ ನಗರಕ್ಕೆ ಬರುವಾಗ ರೈಲಿನಲ್ಲಿ ತಮ್ಮ ಸಂಬಂಧಿ ನಾಗವಾರಪಾಳ್ಯದ ಲಲಿತಾ ಅವರ ಚಿನ್ನಾಭರಣವನ್ನು ಆರೋಪಿ ಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು: ಐಫೋನ್ ಎಂದು ನಕಲಿ ಫೋನ್ ಕೊಟ್ಟು ₹60,000 ವಂಚನೆ!
ಜ.25 ಕೇರಳ ರಾಜ್ಯದ ಪಾಲ್ಕಾಡ್‌ನಲ್ಲಿ ನಡೆದ ತಮ್ಮ ಸಂಬಂಧಿ ಮನೆಯ ಗೃಹ ಪ್ರವೇಶಕ್ಕೆ ನಾಗವಾರಪಾಳ್ಯದ ಲಲಿತಾ ಹೋಗಿದ್ದರು. ಎರಡು ದಿನಗಳ ಬಳಿಕ ಬಂಧುಗಳ ಜತೆ ಕೊಚ್ಚುವೇಲಿ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಲಿತಾ ನಗರಕ್ಕೆ ಮರಳಿದ್ದರು. ಕೆ.ಆರ್.ಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಮನೆಗೆ ಮರಳಿದ ಬಳಿಕ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಅವರಿಗೆ ಗೊತ್ತಾಗಿದೆ.
ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!
ಆದರೆ ಲಲಿತಾ ಅವರ ಜತೆ ಕೇರಳದಿಂದ ಪ್ರಯಾಣಿಸಿದ್ದ ಸಂಬಂಧಿ ಚಂದ್ರಶರ್ಮಾ ದಂಡು ರೈಲು ನಿಲ್ದಾಣದಲ್ಲೇ ಇಳಿದು ಹೋಗಿದ್ದಳು. ಈ ಕಳ್ಳತನ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಚಂದ್ರಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.