ಕಲಬುರಗಿ: ಮರೆಮ್ಮ ದೇವಿಯ ಬೆಳ್ಳಿ ಮೂರ್ತಿ, ಬಂಗಾರದ ಮೂಗುತಿ ಕಳವು

By Kannadaprabha News  |  First Published Feb 1, 2024, 11:30 PM IST

ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬಸವರಾಜ ಹಬ್ಬಣ್ಣ 


ಕಲಬುರಗಿ(ಫೆ.01):  ತಾಲೂಕಿನ ಬಸವಪಟ್ಟಣ ಗ್ರಾಮದ ಭೀಮಾನದಿ ದಡದಲ್ಲಿರುವ ಕೌಂಟಗಿ ಮರೆಮ್ಮ ದೇವಸ್ಥಾನದ ಬೀಗ ಮುರಿದು ಕಳ್ಳರು ದೇವಸ್ಥಾನದ ಒಳಗಿದ್ದ ದೇವಿಯ 35 ಸಾವಿರ ರು. ಮೌಲ್ಯದ ಅರ್ಧ ಕೆ.ಜಿ. ಬೆಳ್ಳಿ ಮೂರ್ತಿ ದೇವಿಯ ಮೂಗಿನಲ್ಲಿದ್ದ ಒಂದು ತೊಲೆಯ 60 ಸಾವಿರ ರು. ಮೌಲ್ಯದ ಬಂಗಾರದ ಮೂಗುತಿ ಮತ್ತು ದೇವಸ್ಥಾನದ ಹುಂಡಿಯಲ್ಲಿದ್ದ 35 ಸಾವಿರ ರು. ನಗದು ಸೇರಿ 1.30 ಲಕ್ಷ ರು. ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಈ ಸಂಬಂಧ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬಸವರಾಜ ಹಬ್ಬಣ್ಣ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Latest Videos

undefined

ಅಬ್ಬಬ್ಬಾ ಮನೆಗಳ್ಳತನ ಮಾಡಲು ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಖದೀಮರು!

ದೇವಸ್ಥಾನದ ಪೂಜಾರಿ ಗಣಪತಿ ಉಪಾಸೆ ಅವರು ಮಂಗಳವಾರ, ಶುಕ್ರವಾರ, ಹುಣ್ಣಿಮೆ-ಅಮವಾಸ್ಯೆಯಂದು ಮಾತ್ರ ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು ಪೂಜೆ ಮಾಡಿ ನಂತರ ಸಾಯಂಕಾಲ 6 ಗಂಟೆಗೆ ದೇವಸ್ಥಾನದ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಾರೆ. ಅದರಂತೆ ಜನವರಿ 26 ರಂದು ದೇವಸ್ಥಾನದ ಬೀಗ ತೆರೆದು ಪೂಜೆ ಮಾಡಿ ಸಾಯಂಕಾಲ ಬೀಗ ಹಾಕಿಕೊಂಡು ಹೋಗಿದ್ದಾರೆ. ಜ.27 ರಂದು ಬೆಳಿಗ್ಗೆ ದೇವಸ್ಥಾನದ ದರ್ಶನಕ್ಕೆ ಹೋದಾಗ ದೇವಸ್ಥಾನದಲ್ಲಿ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!