* ಮಾ.16 ರಂದು ಆಸ್ಪತ್ರೆಯಿಂದ ಕಳುವಾಗಿದ್ದ ಮಗು
* ಸಿಡಿಆರ್‌ನಲ್ಲಿ ಸಿಕ್ಕಿಬಿದ್ದ ಗುಲ್ಜಾರ್ ಬಾನು
* ಮಗು ಪತ್ತೆಯಾದ್ರೂ ತಾನೇ ಕಳ್ಳಿ ಎಂದು ಒಪ್ಪಿಕೊಳ್ಳದ ಮಹಿಳೆ
ದಾವಣಗೆರೆ(ಏ.07): ದಾವಣಗೆರೆ(Davanagere) ನಗರದ ಚಾಮರಾಜಪೇಟೆಯಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಾ.16 ರಂದು ಕಳುವಾಗಿದ್ದ ಮಗು(Child) ಮಂಗಳವಾರ ಪತ್ತೆಯಾಗಿ ಬುಧವಾರ ಹೆತ್ತವರ ಮಡಿಲು ಸೇರಿದೆ. ಮಗುವನ್ನು ಕಳವು ಮಾಡಿದ್ದ ಮಹಿಳೆಯನ್ನು(Woman) ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ(Arrest). ಆಜಾದ್ ನಗರ 1 ನೇ ಮೇನ್ 15 ನೇ ಕ್ರಾಸ್ ನಿವಾಸಿ ಜಿಲಾನಿ ಅವರ ಪತ್ನಿ ಗುಲ್ಜಾರ್ ಬಾನು ಮಗು ಕದ್ದ ಆರೋಪಿಯಾಗಿದ್ದಾಳೆ.
ಮಗು ಕದಿಯಲು ಕಾರಣ?
ಜಿಲಾನಿ ಗುಲ್ಜಾರ್ ಬಾನು ದಂಪತಿಗೆ ಮೂವರು ಮಕ್ಕಳು. ಅದರಲ್ಲಿ ಮೊದಲ ಮಗಳಾದ ಫರ್ಹಾನ್ ಖಾನ್ ಅವರನ್ನು ಬೆಂಗಳೂರಿನ ತೌಸಿಫ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಹಲವು ವರ್ಷಗಳಾದ್ರು ಮಕ್ಕಳಾಗಿರಲಿಲ್ಲ.
ಹರಪನಹಳ್ಳಿ ಗುಂಡಿನಕೆರೆ ಇಸ್ಮಾಯಿಲ್ ಜಬೀವುಲ್ಲಾ ಅವರ ಪತ್ನಿ ಉಮೇಸಲ್ಮಾರಿಗೆ ಮಾ. 16 ರಂದು ಜನಿಸಿದ ಮಗುವನ್ನು ಕೆಲವೇ ಗಂಟೆಯಲ್ಲಿ ಆಸ್ಪತ್ರೆಯಿಂದ(Hospital ) ಕದ್ದೊಯ್ದಿದ್ದರು. ಆಸ್ಪತ್ರೆಯಿಂದ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಗುವನ್ನು ಆಟೋದಲ್ಲಿ ಒಯ್ದು ನಂತರ ಬೆಂಗಳೂರಿಗೆ(Bengaluru) ಹೋಗಿ ತನ್ನ ಮಗಳಿಗೆ ಮಗುವನ್ನು ಕೊಟ್ಟು ದಾವಣಗೆರೆಗೆ ಬಂದಿದ್ದಳು. ಆಜಾದ್ ನಗರದ ಗುಲ್ಜಾರ್ ಬಾನುಗೂ ಸಿಸಿಟಿವಿಯ(CCTV) ದೃಶ್ಯಾವಳಿಗಳಿಗೂ ಹೋಲಿಕೆ ಕಂಡುಬಂದಿತ್ತು. ಸುತ್ತಮುತ್ತಲಿನ ಮನೆಯವರಿಗೂ ಸಿಸಿಟಿವಿ ದೃಶ್ಯ ತೋರಿಸಿ ಖಚಿತಪಡಿಸಿಕೊಳ್ಳಲಾಗಿತ್ತು.
Sex Racket: ಇಲ್ಲೂ ಅದೇ ಕತೆ.. ಹೊರಗೆ ಸ್ಪಾ.. ಒಳಗೆ ವೇಶ್ಯಾವಾಟಿಕೆ ಅಡ್ಡೆ!
ಮಗು ಪತ್ತೆಯಾದ್ರೂ ತಾನೇ ಕಳ್ಳಿ ಎಂದು ಒಪ್ಪಿಕೊಳ್ಳದ ಮಹಿಳೆ
ಆಜಾದ್ ನಗರದಲ್ಲಿ ಮನೆ ಮನೆಗೂ ಪೊಲೀಸರು(Police), ನೆರಳು ಬೀಡಿ ಸಂಘಟನೆಯವರು ವಿಚಾರಿಸಿದ್ದರು. ಗುಲ್ಜಾರ್ ಬಾನು ಮನೆಗೆ ಭೇಟಿ ನೀಡಿ ಮಗು ಎಲ್ಲಿ ಎಂದು ಕೇಳಿದ್ದರು. ಆದ್ರೆ ಆ ಮಹಿಳೆ ಮಗು ಬಗ್ಗೆ ಏನು ಗೊತ್ತಿಲ್ಲವೆಂದು ನಾಟಕವಾಡಿದ್ದಳು. ಮರುದಿನ ಮಂಗಳವಾರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ರು ಬಾಯಿ ಬಿಟ್ಟಿರಲಿಲ್ಲ. ಅದೇ ದಿನ ಮಂಗಳವಾರ ಸಂಜೆ ದಾವಣಗೆರೆ ಬಸ್ ನಿಲ್ದಾಣದ ಪಾನ್ ಶಾಪ್ ಬಳಿ ಕೂತಿದ್ದ ಅಜ್ಜಿಗೆ ಬುರ್ಕಾದಾರಿ ಮಹಿಳೆ ಮಗು ಕೊಟ್ಟು ಅಲ್ಲಿಂದ ಪರಾರಿಯಾಗಿದ್ದರು.
ಮಗುವೇನೋ ಪತ್ತೆಯಾಯಿತು ಅದನ್ನು ಪೋಷಕರಿಗೆ ಒಪ್ಪಿಸಲು ಡಿಎನ್‌ಎ ಪರೀಕ್ಷೆ(DNA Test) ಮಾಡಬೇಕಾಗುತ್ತೇ. ಇಲ್ಲಾ ಅಂದ್ರೆ ಮಗು ಕದ್ದವರನ್ನು ಹಿಡಿಯಬೇಕಾಗುತ್ತದೆ ಎಂಬ ಗೊಂದಲದಲ್ಲಿ ಪೊಲೀಸರಿದ್ದರು ಡಿಎನ್‌ಎ ವರದಿ ಬರಲು ಒಂದೂವರೆ ತಿಂಗಳು ಕಾಯಬೇಕಾಗುತ್ತದೆ. ಮಗುವನ್ನು ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಒಪ್ಪಿಸಬೇಕು ಎನ್ನುವಷ್ಟರಲ್ಲಿ ಪೊಲೀಸರು ಮತ್ತಷ್ಟು ತನಿಖೆ(Investigation) ಚುರುಕು ಪಡಿಸಿದ್ದಾರೆ.
Robbery: ಜುಮಾ, ನಮಿತಾ, ರಾಖಿ... ದಾರಿ ತಪ್ಪಿ ಬಂದ ಉದ್ಯಮಿಯ ಕೂಡಿಹಾಕಿ ಎಲ್ಲ ದೋಚಿದ್ರು!
ಸಿಡಿಆರ್‌ನಲ್ಲಿ ಸಿಕ್ಕಿಬಿದ್ದ ಗುಲ್ಜಾರ್ ಬಾನು
ಮಗುವನ್ನು ಒಯ್ದಿಲ್ಲ ಎಂದು ಹೇಳುತ್ತಿದ್ದ ಗುಲ್ಜಾರ್ ಬಾನು ಮೊಬೈಲ್ ಕರೆಗಳ ದಾಖಲೆ ಪರಿಶೀಲನೆ ನಡೆಸಿದಾಗ ತನ್ನ ಮಗಳ ಜೊತೆ ನಿರಂತರ ಸಂಭಾಷಣೆ ನಡೆಸಿದ ಕಾಲ್ ಲೀಸ್ಟ್ ಪೊಲೀಸರಿಗೆ ಸಿಕ್ಕಿದೆ. ನಂತರ ಬುಧವಾರ ಗುಲ್ಜಾರ್ ಬಾನು ರನ್ನು ಕರೆಸಿ ವಿಚಾರಣೆ ನಡೆಸಿದಾಗ ಮಗು ಕದ್ದಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ.
ಹೆತ್ತವರ ಮಡಿಲು ಸೇರಿದ ಕಂದಮ್ಮ
ಪೊಲೀಸರು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಜಿ ಆಸ್ಪತ್ರೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿಕೊಂಡು ಹೆತ್ತ ತಾಯಿ ಉಮೇಸಲ್ಮಾಗೆ ಮಗು ನೀಡಿದ್ದಾರೆ. ಮಗು ಕಳವು ಆಗಿ ಎರಡು ವಾರ ಕಳೆದ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆ ತಾಯಿಗೆ ತನ್ನ ಮಗು ನಾಪತ್ತೆಯಾಗಿದೆ ಎಂಬ ವಿಚಾರ ಗೊತ್ತಿರಲಿಲ್ಲ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ವಿಷಯ ಗೊತ್ತಾಗಿ ತೀವ್ರ ಸಂಕಟಪಟ್ಟಿದ್ದರು. ಇದೀಗ ಮಗು ಹೆತ್ತ ತಂದೆ ತಾಯಿ ಮಡಿಲು ಸೇರಿರುವುದಕ್ಕೆ ಪೋಷಕರಲ್ಲಿ ಸಂತಸ ಮನೆ ಮಾಡಿದೆ. ಮಗುವಿಗಾಗಿ ನಿರಂತರ ಹೋರಾಟ ಮಾಡಿದ ಎಲ್ಲಾ ಸಂಘಟನೆಯವರು, ತನಿಖೆ ಮಾಡಿದ ಪೊಲೀಸರಿಗೂ ಕುಟುಂಬದವರು ಧನ್ಯವಾದ ಸಲ್ಲಿಸಿದ್ದಾರೆ.