JJNagar Chandru Murder Case ಮನೆಗೆ ಭೇಟಿ ನೀಡಿ ಸಾಂತ್ವಾನ, ಬಿಜೆಪಿಯಿಂದ ₹5 ಲಕ್ಷ ಪರಿಹಾರ

Published : Apr 06, 2022, 08:38 PM ISTUpdated : Apr 06, 2022, 08:40 PM IST
JJNagar Chandru Murder Case ಮನೆಗೆ ಭೇಟಿ ನೀಡಿ ಸಾಂತ್ವಾನ, ಬಿಜೆಪಿಯಿಂದ ₹5 ಲಕ್ಷ ಪರಿಹಾರ

ಸಾರಾಂಶ

ಮೊನ್ನೆ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಚಂದ್ರು ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಚಂದ್ರು ನಿವಾಸಕ್ಕೆ ಬಿಜೆಪಿ ನಿಯೋಗ  ಭೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದೆ. ಬಳಿಕ ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ನಗದು ಪರಿಹಾರ ನೀಡಲಾಗಿದೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಏ.6): ಜೆಜೆ ನಗರ ಚಂದ್ರು (JJNagar Chandru) ಕೊಲೆ ಪ್ರಕರಣ (Murder Case) ಭಾರೀ ಚರ್ಚೆಗೆ ಗ್ರಾಸವಾಗಿದೆ. ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿತ್ತು.ಆದರೆ ಇದಕ್ಕೆ ಕಮಿಷನರ್ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದರು. ಈ ನಡುವೆ ಇಂದು ಬಿಜೆಪಿಯ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಎಂಪಿ ಪಿ.ಸಿ ಮೋಹನ್ ,ಎಂಎಲ್ ಸಿ ರವಿ ಕುಮಾರ್ ಸೇರಿದಂತೆ ಹಲವು ಮುಖಂಡರ ಬಿಜೆಪಿ ನಿಯೋಗ ಮೃತ  ಚಂದ್ರು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದಾರೆ. ಬಳಿಕ ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ನಗದು ಪರಿಹಾರ ವಿತರಿಸಿದ್ದಾರೆ.

 ಚಂದ್ರು ಮನೆಯವರಿಗೆ ಸಾಂತ್ವನ ಬಳಿಕ‌ ಮಾತನಾಡಿದ ಸಿ. ಟಿ. ರವಿ ನಾವು ಇಲ್ಲಿಗೆ ಬರೋವರೆಗೂ ನವೀನ್, ಚಂದ್ರು ಅಣ್ಣ ಬಿಜೆಪಿ ಬೂತ್ ಕಮಿಟಿ ಸೆಕ್ರೆಟರಿ ಅಂತ ನಮಗೆ ಗೊತ್ತಿರ್ಲಿಲ್ಲ. ಅವತ್ತು‌ ಒಂದು ಸಣ್ಣ ಕಾರಣಕ್ಕೆ ಚಂದ್ರು ಹತ್ಯೆ ಆಗಿದೆ. ಅಕ್ಕಪಕ್ಕದ ಅಂಗಡಿಯವ್ರು ಬಚಾವ್ ಮಾಡಲಿಲ್ಲ. ಅಕ್ಕಪಕ್ಕದವ್ರು ನೆರವಿಗೆ ಬಂದಿದ್ರೆ ಕಾಪಾಡಬಹುದಿತ್ತೇನೋ? ಉರ್ದು ಮಾತಾಡ್ಲಿಲ್ಲ‌‌ ಅಂತ ಚುಚ್ಚಿದ್ದಾರೆ. ಇದನ್ನು ಅವರ ಮನೆಯವ್ರೇ ಹೇಳಿರೋದು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು  ಸಿ ಟಿ ರವಿ ಒತ್ತಾಯಿಸಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ಮಾತಾಡಬೇಕು. ಉರ್ದು ಮಾತಾಡ್ಬೇಕು ಅಂತ ಇವ್ರು ಹೇಳಿ ಕೊಲೆ ಮಾಡಿದಾರೆ. ಹಂತಕರು ಹ್ಯಾಬಿಚುವಲ್ ಕ್ರಿಮಿನಲ್ಸ್ ಅಂತ ಇದೆ. ಇದರ ತನಿಖೆ ಆಗಬೇಕು ಎಂದಿದ್ದಾರೆ.

ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ: ಸಿದ್ದರಾಮಯ್ಯ

ಚಂದ್ರು ಮನೆಯವರಿಗೆ ಐದು ಲಕ್ಷ ಪರಿಹಾರ: ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ಪರಿಹಾರ ಕೊಟ್ಟಿದೀವಿ ಸರ್ಕಾರದಿಂದಲೂ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ರು. ಚಂದ್ರು ಕೊಲೆ ಕೋಮು‌ಭಾವನೆ ಕೆರಳಿಸಲು ಆಗಿದೆಯಾ ಅನ್ನೋ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡುವ ಬಗ್ಗೆ ಸಿಎಂ ಜತೆ ಮಾತಾಡ್ತೀನೆ.

 

ಮಂಡ್ಯ ಯುವತಿ ಬಗ್ಗೆ ಆಲ್ ಖೈದಾ ಮುಖ್ಯಸ್ಥ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಸಿದ  ಸಿ ಟಿ ರವಿ ಭಾರತದ ನೆಲವನ್ನು ಭಯೋತ್ಪಾದನೆ ಚಟುವಟಿಕೆ ಗೆ ಬಳಸಲು ಮೊದಲಿಂದಲೂ ಯತ್ನ ನಡೀತಿದೆ. ಭಟ್ಕಳ, ಕೇರಳದಿಂದ ಐಸಿಸ್ ಗೆ ಹೋಗಿ ಸೇರ್ತಾರೆ. ಇಲ್ಲಿನ ನೆಲವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲು ಅಲ್ಖೈದಾ ಹವಣಿಸ್ತಿದೆ. ಇದಕ್ಕೆ ಬಿಜೆಪಿ ಅವಕಾಶ ಕೊಡಲ್ಲ. ಇಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ‌ ತಿನಿಸುವ ಸರ್ಕಾರ ಇಲ್ಲ. ಇಲ್ಲಿರೋದು ಬಿಜೆಪಿ ಸರ್ಕಾರ. ಭಯೋತ್ಪಾದಕ ಚಟುಚಟಿಕೆಗಳಿಗೆ ಅವಕಾಶ ಕೊಡಲ್ಲ ಎಂದು ಎಚ್ಚರಿಕೆ ನೀಡಿದ್ರು.

ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಗಳಲ್ಲಿ ಸಹಿಷ್ಣುತೆ ಇಲ್ಲ. ಅನ್ನೋದು ಗೊತ್ತಾಗಿದೆ. ಶಾಸಕರಿಗೇ ರಕ್ಷಣೆ ಸಿಗ್ಲಿಲ್ಲ. ಸಣ್ಣ ಸಣ್ಣದಕ್ಕೆಲ್ಲ ಯಾಕೆ ಹಿಂಸಾತ್ಮಕ ಯಾಕೆ ಆಗ್ತಾರೆ? ಇದು ವೈಯಕ್ತಿಕ ಹಿನ್ನೆಲೆಯಲ್ಲಿ ಆಗಿದ್ದೋ ಕೋಮು ಗಲಭೆ ಉಂಟು‌ಮಾಡುವ ಸಂಚಿದೆಯಾ ಅಂತ ತನಿಖೆ ನಡೆಯಬೇಕು ಎಂದು ಸಿ. ಟಿ .ರವಿ ಒತ್ತಾಯಿಸಿದ್ರು.

ಜೆಜೆನಗರ ಚಂದ್ರು ಕೊಲೆ ಪ್ರಕರಣ ಗೃಹ ಸಚಿವ ಅರಗ ಜ್ಞಾನೇಂದ್ರ ಎಡವಟ್ಟು!

ಕಾಂಗ್ರೆಸ್ ನಾಯಕರಿಗೆ ಸಿಟಿ ರವಿ ಟಾಂಗ್: ಸಮವಸ್ತ್ರ ವಿರುದ್ಧ ಹಿಜಾಬ್ ತಂದ್ರು.ಕೋರ್ಟ್ ತೀರ್ಪು ಬಳಿಕ ಬಂದ್ ಗೆ ಕರೆ ಕೊಟ್ರು.ಅವರ ಉದ್ದೇಶ ಸಮಾಜ ಒಡೆಯೋದು ತಾನೇ.ಸಿಐಎ ಪೌರತ್ವ ಕೊಡೋ ವಿಧೇಯಕ, ಕಿತ್ತುಕೊಳ್ಳುವ ವಿಧೇಯಕ ಅಲ್ಲ.ಅದರ ವೇದಿಕೆಯಲ್ಲಿ ಹೋಗಿ ಮಾತಾಡಿದವ್ರು ಪರಮ‌ನೀಚರು. ಮತ ಬ್ಯಾಂಕ್ ಗಾಗಿ ಭಾಷಣ ಮಾಡಿದರು. ಸಮಾಜ ಒಡೆಯುವ ಕೆಲಸ ಮಾಡಿದ್ರು. ದೇಶದಲ್ಲಿ ಅರಾಜಕತೆ ಉಂಟು ಮಾಡೋದು ಅವ್ರ ಉದ್ದೇಶವಾಗಿದೆ. ಇದಕ್ಕೆ ಹೊರಗಿಂದಲೂ ಫಂಡಿಂಗ್ ಆಗಿದೆ ಅಂತ ಕೆಲವರು ಹೇಳ್ತಾರೆ. ಈ ನಿಟ್ಟಿನಲ್ಲೂ ತನಿಖೆ ಆಗಬೇಕು.

ಸಮವಸ್ತ್ರ ವಿರುದ್ಧ ಹಿಜಾಬ್ ತಂದ್ರು: 1983 ಯಿಂದಲೂ ಸಮವಸ್ತ್ರ ಇದೆ. ಇದ್ದಕ್ಕಿದ್ದಂತೆ ಹಿಜಾಬ್ ಯಾಕೆ ತಂದ್ರು? ಕೋರ್ಟ್ ತೀರ್ಪು ವಿರುದ್ಧ ಬಂದ್ ಕರೆ ಕೊಟ್ರು. ಈ ತರದ ಜನ ಅಪಾಯಕಾರಿಯಾಗಿದ್ದಾರೆ.ಅವರಿಗೆ ಬೆಂಬಲ ಕೊಡೋರು ಪರಮ ನೀಚರು. ಇದರ ಪರಿಣಾಮವಾಗಿ ಹರ್ಷ ಕೊಲೆ ಆಯ್ತು.ಈಗ ಚಂದ್ರು ಕೊಲೆ ಆಯ್ತು. ಇನ್ನೆಷ್ಟು ಬಲಿ ಬೇಕು. ತಮ್ಮ ಶಾಸಕರ ಮನೆ ಸುಟ್ಟರೂ ಬುದ್ಧಿ ಹೇಳದವರಿಂದ ಸಮಾಜ ನಾಶ ಆಗ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಸಿಟಿ ರವಿ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?