ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಪೂರೈಕೆ; ಮಿಜೋರಾಂ ಮೂಲದ ವ್ಯಕ್ತಿ ಬಂಧನ

Published : Oct 18, 2022, 08:29 AM ISTUpdated : Oct 18, 2022, 08:32 AM IST
ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಪೂರೈಕೆ; ಮಿಜೋರಾಂ ಮೂಲದ ವ್ಯಕ್ತಿ ಬಂಧನ

ಸಾರಾಂಶ

ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್‌್ಸ ಪೂರೈಕೆ ಮಿಜೋರಾಂ ಮೂಲದ ವ್ಯಕ್ತಿಯ ಬಂಧನ 3 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಬೆಂಗಳೂರು (ಅ.18) : ಫುಡ್‌ ಡೆಲಿವರಿ ಹುಡುಗರ ಸೋಗಿನಲ್ಲಿ ಗ್ರಾಹಕರಿಗೆ ಗಾಂಜಾ ಪೂರೈಸುತ್ತಿದ್ದ ಚಾಲಾಕಿ ಪೆಡ್ಲರ್‌ವೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್‌ಎಎಲ್‌ ನಿವಾಸಿ ಡೇವಿಡ್‌ ಬಂಧಿತನಾಗಿದ್ದು, ಆರೋಪಿಯಿಂದ .3 ಲಕ್ಷ ಮೌಲ್ಯದ 4 ಕೇಜಿ ಗಾಂಜಾ, ಮೊಬೈಲ್‌ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ಬೆಳ್ಳಂದೂರು ಸಮೀಪ ಗಾಂಜಾ ಮಾರಾಟಕ್ಕೆ ವ್ಯಕ್ತಿಯೊಬ್ಬ ಯತ್ನಿಸಿರುವ ಬಗ್ಗೆ ಲಭ್ಯವಾದ ಮಾಹಿತಿ ಮೇರೆಗೆ ಸಿಸಿಬಿ ಕಾರ್ಯಾಚರಣೆ ನಡೆಸಿದೆ.

ಡ್ರಗ್ಸ್, ಐಷಾರಾಮಿ ಜೀವನಕ್ಕೆ ಕಳ್ಳತನ: ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳೇ ಟಾರ್ಗೆಟ್‌

ಮಿಜಾರಂ ಮೂಲದ ಡೇವಿಡ್‌, ಐದು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಆರಂಭದಲ್ಲಿ ರಸ್ತೆ ಬದಿ ಹೋಟೆಲ್‌ ಆರಂಭಿಸಿದ್ದ. ನಂತರ ಸುಲಭವಾಗಿ ಹಣ ಸಂಪಾದನೆಗೆ ಗಾಂಜಾ ದಂಧೆಗಳಿದ ಆತ, ಈಶಾನ್ಯ ರಾಜ್ಯದ ಪೆಡ್ಲರ್‌ ಮೂಲಕ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡಿದ್ದ. ಆಗ ಆತನನ್ನು ಹೆಣ್ಣೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾಗ ಡೇವಿಡ್‌ಗೆ ಕೇರಳ ಮೂಲದ ಪೆಡ್ಲರ್‌ ಪರಿಚಯವಾಗಿದೆ. ಕೊನೆಗೆ ಡೇವಿಡ್‌ಗೆ ಜಾಮೀನು ಕೊಡಿಸಲು ನೆರವಾದ ಆ ಪೆಡ್ಲರ್‌, ನಂತರ ಡೇವಿಡ್‌ ಮೂಲಕ ನಗರದಲ್ಲಿ ಗಾಂಜಾ ದಂಧೆ ಶುರು ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.

ಡ್ರಗ್ ಪೆಡ್ಲರ್ ಹೊಟ್ಟೆಯಲ್ಲಿತ್ತು 13.6 ಕೋಟಿ ರೂ. ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್!

ಗಾಂಜಾ ಪೂರೈಸಲು ಟೀ ಶರ್ಟ್ ಗುರುತು

ವಾಟ್ಸ್‌ ಆಪ್‌ ಮೂಲಕವೇ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಗಾಂಜಾ ದಂಧೆಕೋರ, ಗಾಂಜಾ ಬುಕ್‌ ಮಾಡಿದ ಗ್ರಾಹಕರನಿಗೆ ಪೂರೈಸಲು ಟೀ ಶರ್ಟನ್ನು ಗುರುತಾಗಿ ಬಳಸಿಕೊಳ್ಳುತ್ತಿದ್ದ. ಅಲ್ಲದೆ ಗಾಂಜಾ ಪೂರೈಸಲು ತೆರಳುವ ತಮ್ಮ ತಂಡದ ಪೆಡ್ಲರ್‌ನನ್ನು ಜಿಪಿಎಸ್‌ ಮೂಲಕ ದಂಧೆಕೋರರು ಟ್ರ್ಯಾಕ್‌ ಮಾಡುತ್ತಿದ್ದರು. ಬೆಳ್ಳಂದೂರು ಸಮೀಪ ಸಾಫ್‌್ಟವೇರ್‌ ಕಂಪನಿಯ ಉದ್ಯೋಗಿಗೆ ಡೇವಿಡ್‌ಗೆ ಗಾಂಜಾ ಪೂರೈಸಲು ಸೂಚಿಸಲಾಗಿತ್ತು. ಆಗ ಮುಖ್ಯ ಪೆಡ್ಲರ್‌ಗೆ ಆ ಗ್ರಾಹಕ ತಾನು ಧರಿಸಿದ್ದ ಟೀ ಶರ್ಚ್‌ನ ಭಾವಚಿತ್ರವನ್ನು ವಾಟ್ಸ್‌ ಮೂಲಕ ಕಳುಹಿಸಿದ್ದ. ಈ ಫೋಟೋವನ್ನು ಡೇವಿಡ್‌ಗೆ ಕಳುಹಿಸಿ ಆ ಟೀ ಶರ್ಟ್ ಧರಿಸಿದ್ದ ಗ್ರಾಹಕನಿಗೆ ಗಾಂಜಾ ನೀಡುವಂತೆ ಹೇಳಲಾಗಿತ್ತು. ಹೀಗಾಗಿ ಗ್ರಾಹಕ ಮತ್ತು ಡೇವಿಡ್‌ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ಇನ್ನು ತಮ್ಮ ತಂಡದ ಸದಸ್ಯ ಏನಾದರೂ 5 ನಿಮಿಷ ಸಂಪರ್ಕ ಕಡಿತಗೊಂಡರೆ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಭಾವಿಸಿ ದಂಧೆಕೋರರು ಪರಾರಿಯಾಗುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ