KSOU: ಮುಕ್ತ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ..!

By Kannadaprabha News  |  First Published Sep 14, 2022, 12:12 PM IST

ತೇಜಸ್ವಿ ಅವರು ಕೆಲಸಕ್ಕೆ ಬಂದು ಕೊಠಡಿಯನ್ನು ತೆರೆದಾಗ ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆ ಚೂರು ಜೊತೆಗೆ ಫೋಟೋ ಕತ್ತರಿಸಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ.


ಮೈಸೂರು(ಸೆ.14):  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಭಾಗದ ಸಹ ಪ್ರಾಧ್ಯಾಪಕರಾದ ತೇಜಸ್ವಿ ನವಿಲೂರು ಅವರನ್ನು ಸಿದ್ದಪಾಠಗಳನ್ನು ತಯಾರಿ ಮಾಡಿಕೊಡುವಲ್ಲಿ ವಿಳಂಬ ಮಾಡಿದರೆಂದು ಅಮಾನತು ಮಾಡಿ, ಅವರ ಕೊಠಡಿ ಸೇರಿದಂತೆ ಎಲ್ಲಾ ಶೈಕ್ಷಣಿಕ ಸೌಲಭ್ಯಗಳ ಬಳಕೆಗೆ ನಿರ್ಬಂಧ ಹೇರಲಾಗಿತ್ತು. ಸಂಶೋಧನಾ ವಿದ್ಯಾರ್ಥಿಗಳ ಮನವಿಯ ಮೇರೆಗೆ ವಿವಿ ಅವರ ಅಮಾನತು ಆದೇಶವನ್ನು ಹಿಂಪಡೆದಿದೆ.

ಹೀಗಾಗಿ, ಸೋಮವಾರ ತೇಜಸ್ವಿ ಅವರು ಕೆಲಸಕ್ಕೆ ಬಂದು ಕೊಠಡಿಯನ್ನು ತೆರೆದಾಗ ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆ ಚೂರು ಜೊತೆಗೆ ಫೋಟೋ ಕತ್ತರಿಸಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ.
ಈ ವಾಮಾಚಾರವನ್ನು ಯಾರು ಮಾಡಿದ್ದಾರೆಂಬುದು ಗೊತ್ತಿಲ್ಲ. ಆರು ತಿಂಗಳ ಹಿಂದೆ ಎಲ್ಲವನ್ನು ಸ್ವಚ್ಛ ಮಾಡಲಾಗಿತ್ತು. ಆದರೂ ಈ ರೀತಿ ಆಗಿರುವುದು ಹೇಗೆ? ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಸಂಬಂಧ ತೇಜಸ್ವಿ ನವಿಲೂರು ಅವರು ರಾಜ್ಯ ಮುಕ್ತ ವಿವಿ ಕುಲಸಚಿವರಿಗೆ ದೂರು ನೀಡಿದ್ದಾರೆ.

Tap to resize

Latest Videos

Crime News: ವ್ಯಾಪಾರದಲ್ಲಿ ನಷ್ಟ: 3 ವರ್ಷದ ಮಗಳ ಮೇಲೆ ವಾಮಾಚಾರ ಮಾಡಿ ಕೊಂದ ತಂದೆ

ವಿವಿಯಲ್ಲಿ ವಾಮಾಚಾರ: ದುಷ್ಕರ್ಮಿಗಳನ್ನು ಬಂಧಿಸಿ

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ವಾಮಾಚಾರ ನಡೆಸಿರುವ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಮುಕ್ತ ವಿಶ್ವವಿದ್ಯಾಲಯವನ್ನು ಸದಾ ವಿವಾದಗಳ ಗದ್ದಲದಲ್ಲೇ ಸಿಲುಕಿಸುತ್ತಿರುವವರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಕೆಲ ದುಷ್ಕರ್ಮಿಗಳು ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ ಕೂದಲು ಬಳೆ ಚೂರು ಜತೆಗೆ ಫೋಟೋ ಕತ್ತರಿಸಿ ಪತ್ರಿಕೋದ್ಯಮದ ಮುಖ್ಯಸ್ಥರ ಕೊಠಡಿಯಲ್ಲಿ ಹಾಕಿರುವುದು ಶೋಭೆ ತರುವ ವಿಚಾರವಲ್ಲ. ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ವಿಚಾರಣೆ ಮಾಡಿ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಪೊಲೀಸ್‌ ಆಯುಕ್ತರನ್ನು ಆಗ್ರಹಿಸಿದ್ದಾರೆ.
 

click me!