ಮಂಡ್ಯದಲ್ಲೊಂದು ವಿಚಿತ್ರ ಮಿಸ್ಸಿಂಗ್ ಕೇಸ್: ತನ್ನನ್ನ ತಾನು ಕೊಲೆಯಾದ ರೀತಿ ಬಿಂಬಿಸಿ ಗೋವಾ ಟ್ರಿಪ್ ಮಾಡಿದ್ದ ಭೂಪ

Published : Sep 14, 2022, 11:35 AM IST
ಮಂಡ್ಯದಲ್ಲೊಂದು ವಿಚಿತ್ರ ಮಿಸ್ಸಿಂಗ್ ಕೇಸ್: ತನ್ನನ್ನ ತಾನು ಕೊಲೆಯಾದ ರೀತಿ ಬಿಂಬಿಸಿ ಗೋವಾ ಟ್ರಿಪ್ ಮಾಡಿದ್ದ ಭೂಪ

ಸಾರಾಂಶ

ತನ್ನನ್ನು ಅಪಹರಿಸಿ ಕೊಲೆ ಮಾಡಿದ್ದಾರೆಂದು ಬಿಂಬಿಸಿ ವ್ಯಕ್ತಿಯೋರ್ವ ಗೋವಾ ಪ್ರವಾಸಕ್ಕೆ ಹೋಗಿದ್ದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮನು ಎಂಬ ಯುವಕ ತನ್ನನ್ನು ತಾನು ಅಪಹರಿಸಿ ಕೊಲೆಯಾಗಿದ ರೀತಿ ಬಿಂಬಿಸಿಕೊಂಡಿದ್ದನು. 

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಸೆ.14): ತನ್ನನ್ನು ಅಪಹರಿಸಿ ಕೊಲೆ ಮಾಡಿದ್ದಾರೆಂದು ಬಿಂಬಿಸಿ ವ್ಯಕ್ತಿಯೋರ್ವ ಗೋವಾ ಪ್ರವಾಸಕ್ಕೆ ಹೋಗಿದ್ದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮನು ಎಂಬ ಯುವಕ ತನ್ನನ್ನು ತಾನು ಅಪಹರಿಸಿ ಕೊಲೆಯಾಗಿದ ರೀತಿ ಬಿಂಬಿಸಿಕೊಂಡಿದ್ದನು. ಸಾಲ ಪಡೆದು ಬೆದರಿಕೆ ಹಾಕಿದ್ದವರಿಗೆ ಬುದ್ದಿ ಕಲಿಸಲು ಮನು ಮಾಡಿದ್ದ ಕಿಡ್ನಾಪ್ & ಮರ್ಡರ್ ಪ್ಲಾನ್ 20 ದಿನದ ಬಳಿಕ ಬಯಲಾಗಿದೆ.‌ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ಆತಂಕ ಹುಟ್ಟಸಿದ್ದ ಭೂಪನನ್ನು ಮಂಡ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮನೆಯಲ್ಲಿ ಕೋಳಿ ರಕ್ತ ಚೆಲ್ಲಿ, ತಲೆಯ ವಿಗ್ ಬಿಸಾಡಿ ರಾತ್ರೋರಾತ್ರಿ ಎಸ್ಕೇಪ್: ಕಿಡ್ನಾಪ್ & ಮರ್ಡರ್ ಡ್ರಾಮಾ ಮಾಡಿದ್ದ ಮನು ಎಂಬಾತ ಎಲ್ಲರನ್ನೂ ಕೊಲೆಯಾದ ರೀತಿ ನಂಬಿಸಲು ಮನೆಯಲ್ಲಿ ಕೋಳಿ ರಕ್ತ ಚೆಲ್ಲಿ ವಿಗ್ ಎಸೆದಿದ್ದನು.‌ ಬಳಿಕ ನಾಲೆಯೊಂದರ ಬಳಿ ಚಪ್ಪಲಿ ಬಿಟ್ಟು ತಾನು ಕೊಲೆಯಾಗಿದ್ದ ರೀತಿ ಸೀನ್ ಕ್ರಿಯೇಟ್ ಮಾಡಿದ್ದನು. ಬಳಿಕ  ಗೋವಾಗೆ ತೆರಳಿದ್ದ ಆತ ಅಲ್ಲಿ ಎಂಜಾಯ್ ಮಾಡ್ತಿದ್ರೆ, ಇತ್ತ ಆತಂಕಗೊಂಡಿದ್ದ ಮನೆಯವರು ಅರಕೆರೆ ಪೊಲೀಸರಿಗೆ ದೂರು ನೀಡಿದ್ರು. ರಕ್ತ, ತಲೆ ಕೂದಲು ನಾಲೆ ಬಳಿ ಚಪ್ಪಲಿ ಕಂಡಿದ್ದ ಸ್ಥಳೀಯರು ಮನು ಕೊಲೆಯಾದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. 

Bengaluru Crime: ಮಗನನ್ನು ಕೊಂದು ತಾಯಿಯೂ ಆತ್ಮಹತ್ಯೆ, ಕಾರಣ ನಿಗೂಢ

ಹೀಗಾಗಿ‌ ಪೊಲೀಸರು ಕೂಡ ಕೆಲವರನ್ನ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಗೋವಾದಿಂದ ವಾಪಸ್ಸಾಗಿದ್ದ ಮನು ಬೆಂಗಳೂರಿನ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದನು. ನಿರಂತರ ವಿಚಾರಣೆ ಬಳಿಕ ಮನು ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿದ ಖಾಕಿಗೆ ಆತ ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ವೇಳೆ ಸಾಲ ಪಡೆದು ಬೆದರಿಕೆ ಹಾಕಿದ್ದವರಿಗೆ ಬುದ್ದಿ ಕಲಿಸಲು ಕಿಡ್ನಾಪ್ & ಮರ್ಡರ್ ಡ್ರಾಮಾ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

8 ಲಕ್ಷ ಸಾಲ‌ ಪಡೆದಿದ್ದ ಮಹಿಳೆ ಪರವಾಗಿ ಮನುಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿ: ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಮನು, ಸುಪ್ರೀಯಾ ಎಂಬುವರಿಗೆ 8 ಲಕ್ಷ ಸಾಲ ನೀಡಿದ್ದನು ಎನ್ನಲಾಗಿದೆ. ಸಾಲ ನೀಡುವ ವೇಳೆ ಖಾಲಿ ಚೆಕ್ ಹಾಗೂ ಪ್ರನೋಟ್ ಪಡೆದಿದ್ದನು. ಇತ್ತೀಚೆಗೆ ಸಾಲ ಹಿಂದಿರುಗಿಸುವಂತೆ ಕೇಳಿದ್ದ ಆತನಿಗೆ ಸುಪ್ರೀಯಾ ಸತಾಯಿಸಿದ್ದಳು ಎನ್ನಲಾಗಿದೆ.‌ ಕೆಲ ದಿನಗಳ ಹಿಂದೆ ಸುಪ್ರೀಯಾ ಬಳಿ ಪಡೆದಿದ್ದ ಖಾಲಿ ಚೆಕ್ ವಾಪಾಸ್ ನೀಡುವಂತೆ ಅಪರಿಚಿತ ವ್ಯಕ್ತಿಯೊಬ್ಬ ಮನುಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. 

Belagavi Crime: ಗಂಡನ ಮನೆಗೆ ಬರಲು ಒಲ್ಲೆ ಎಂದ ಪತ್ನಿ ಮೇಲೆ ಫೈರಿಂಗ್‌..!

ಅಷ್ಟೇ ಅಲ್ಲದೇ ಸಲಗ ಸಿನಿಮಾ ರೀತಿ ಮರ್ಡರ್ ಮಾಡುವುದಾಗಿ ಅವಾಜ್ ಹಾಕಿದ್ದಾನೆ. ಹಣ ನಿಧಾನವಾಗಿ ಕೊಡ್ತೀವಿ ನೀನು ಸುಮ್ಮನೆ ಚೆಕ್ ವಾಪಸ್ ನೀಡು ಎಂದು ಹೆದರಿಸಿದ್ದಾನೆ. ಸುಪ್ರಿಯಾ ಹಾಗೂ ಬೆದರಿಕೆ ಹಾಕಿದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ ಮನು. ಕಿಡ್ನಾಪ್ & ಮರ್ಡರ್ ಡ್ರಾಮಾ ನಡೆಸಿದ್ದನು. ಸದ್ಯ ಈ ಸಂಬಂಧ ಸುಪ್ರಿಯಾಳನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ದಂಪತಿ, ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಟೆಕ್ಕಿ ದುರಂತ ಸಾವು, ಡೆಟ್‌ನೋಟ್‌ನಲ್ಲಿ ಶಾಕಿಂಗ್ ಮಾಹಿತಿ!