Asianet Suvarna News Asianet Suvarna News

ವಿವಾಹಿತೆ ಮೇಲೆ ಅತ್ಯಾಚಾರ ಎಸಗಿದ 60ರ ಉದ್ಯಮಿ, 81ರ ಪ್ರಖ್ಯಾತ ಲೇಖಕ ಅರೆಸ್ಟ್!

* ಭದ್ರತಾ ಸಿಬ್ಬಂದಿ ಪತ್ನಿ ಮೇಲೆ ಅತ್ಯಾಚಾರ ಎಸಗಿದರು
* ಮಧ್ಯ ಪ್ರದೇಶದ ಖ್ಯಾತ ಲೇಖಕ ಇದೀಗ ಅತ್ಯಾಚಾರದ ಆರೋಪಿ
* ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿ ಬಳಸಿಕೊಂಡಿದ್ದರು

Businessman films domestic help changing clothes gangrapes her with 81-year-old friend mah
Author
Bengaluru, First Published Aug 10, 2021, 11:55 PM IST
  • Facebook
  • Twitter
  • Whatsapp

ಭೋಪಾಲ್(ಆ. 10) ಮಧ್ಯಪ್ರದೇಶದಿಂದ ಬೆಚ್ಚಿ ಬೀಳಿಸುವ ಸುದ್ದಿಯೊಂದು ವರದಿಯಾಗಿದೆ.  ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ 60 ವರ್ಷದ ಉದ್ಯಮಿ ಮತ್ತು ಆತನ 81 ವರ್ಷದ ಸ್ನೇಹಿತ ಸೇರಿ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ  ಆರೋಪಿಗಳಾದ ಶಿವ ನಾರಾಯಣ್ ಪಾಂಡೆ ಮತ್ತು ಆತನ ಸ್ನೇಹಿತ ದೇವೇಂದ್ರ ಪಾಂಡೆ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಶಿವ ನಾರಾಯಣ್ ಭದ್ರತಾ ಏಜೆನ್ಸಿಯ ಮಾಲೀಕರಾಗಿದ್ದು, ಅವರ ಸ್ನೇಹಿತ ದೇವೇಂದ್ರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ.  ಲೇಖಕರಾಗಿಯೂ ಹೆಸರು ಸಂಪಾದನೆ ಮಾಡಿದ್ದರು, ಬೇಡದಕ ಕಾವ್ಯ ನಾಮದಿಂದ ಮಧ್ಯಪ್ರದೇಶದಲ್ಲಿ ಚಿರಪರಿಚಿತ.

ಮೈಸೂರು ವಿವಿ ಪ್ರಾಧ್ಯಾಪಕ ರಾಸಲೀಲೆ ವಿಡಿಯೋಕ್ಕೆ ಟ್ವಿಸ್ಟ್

ಆರೋಪಿಗಳಿಬ್ಬರು ಸೇರಿಕೊಂಡು ಭದ್ರತಾ ಸಿಬ್ಬಂದಿಯ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಶಿವ ನಾರಾಯಣ್ ಅವರು ಮನೆಯ ಸಹಾಯಕರಾಗಿ ಕೆಲಸ ಮಾಡಲು ಭದ್ರತಾ ಸಿಬ್ಬಂದಿಯ ಪತ್ನಿಯನ್ನು ನೇಮಿಸಿಕೊಂಡಿದ್ದರು. ಸುಮಾರು ಒಂದು ವರ್ಷದ ಹಿಂದೆ ಆಕೆಯ ಬಟ್ಟೆಗಳನ್ನು ಬದಲಾಯಿಸುತ್ತಿವಾಗ ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದರು.

ಇದೇ ವಿಡಿಯೋ ಇಟ್ಟುಕೊಂಡು ಲೈಂಗಿವಾಗಿ ಸಹಕರಿಸು ಇಲ್ಲವಾದರೆ ಎಲ್ಲ ಕಡೆ ವೈರಲ್ ಮಾಡುತ್ತೇವೆ ಎಂದು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿಕೊಂಡು ಬಂದಿದ್ದರು. . ಭಾನುವಾರ, ದೇವೇಂದ್ರ ಅವರು ಫಾರ್ಮ್‌ಹೌಸ್‌ಗೆ ಭೋಜನಕ್ಕೆ  ಎಂದು ಒಟ್ಟಿಗೆ ಸೇರಿದ್ದರು.  ಈ ವೇಳೆ ಇಬ್ಬರು ಸೇರಿ ಮತ್ತೊಮ್ಮೆ ಅತ್ಯಾಚಾರ ಎಸಗಿದ್ದಾರೆ.

ನೊಂದ ಮಹಿಳೆ ಕೊನೆಗೆ ದಾರುಣ ಕತೆಯನ್ನು ತನ್ನ ಪತಿ ಬಳಿ ಹೇಳಿಕೊಂಡಿದ್ದಾಳೆ. ನಂತರ ದಂಪತಿ ಪೊಲೀಸ್ ಮೊರೆ ಹೋಗಿದ್ದು ಆರೋಪಿಗಳಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

 

Follow Us:
Download App:
  • android
  • ios