ತಲೆ ಇದ್ದ ಚಿರತೆಯ ಚರ್ಮ, ಕಾಡುಹಂದಿಯ ಕೋರೆ ವಶಕ್ಕೆ ಇಬ್ಬರ ಬಂಧನ

Published : May 06, 2025, 02:58 PM IST
ತಲೆ ಇದ್ದ ಚಿರತೆಯ ಚರ್ಮ, ಕಾಡುಹಂದಿಯ ಕೋರೆ ವಶಕ್ಕೆ ಇಬ್ಬರ ಬಂಧನ

ಸಾರಾಂಶ

ನಾಗ್ಪುರದ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ವನ್ಯಜೀವಿ ಕಳ್ಳಸಾಗಣೆದಾರರನ್ನು ಬಂಧಿಸಿ, ಚಿರತೆ ಚರ್ಮ ಮತ್ತು ಕಾಡುಹಂದಿ ಕೋರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂಬೈ: ಒಂದೆಡೆ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ದೇಶ ನಮೀಬಿಯಾದಿಂದ ಭಾರತದಲ್ಲಿ ಅಳಿದು ಹೋಗಿದ್ದಂತಹ ಚೀತಾಗಳನ್ನು ತಂದು ವನ್ಯಜೀವಿಗಳನ್ನು ದೇಶದಲ್ಲಿ ಮತ್ತೆ ಪುನರ್ನೆಲೆಸುವಂತಹ ಪ್ರಯತ್ನ ಮಾಡಿದ್ದರೆ, ಮತ್ತೊಂದೆಡೆ ಖದೀಮರು ಈ ವನ್ಯಜೀವಿಗಳನ್ನು ಬೇಟೆಯಾಡಿ ಪ್ರಕೃತಿಯ ಸರ್ವನಾಶ ಮಾಡಲು ಮುಂದಾಗಿದ್ದಾರೆ. ಹೀಗೆ ಕಾಡುಪ್ರಾಣಿಗಳನ್ನು ಗುರಿಯಾಗಿಸಿಕೊಂಡು ವ್ಯವಹಾರ ಮಾಡುತ್ತಿದ್ದ ಇಬ್ಬರನ್ನು ಈಗ ಅಧಿಕಾರಿಗಳು ಬಂಧಿಸಿದ್ದಾರೆ.

ನಾಗ್ಪುರದ ಕಂದಾಯ ಗುಪ್ತಚರ (Revenue Intelligence)ಇಲಾಖೆಯ ಅಧಿಕಾರಿಗಳು ವನ್ಯಜೀವಿಗಳ ಕಳೆಬರದ ಮಾರಾಟ ವ್ಯವಹಾರದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದು, ಅವರಿಂದ ತಲೆ ಇರುವ 2 ಚಿರತೆ ಚರ್ಮ, ಕಾಡುಹಂದಿಯ ಕೋರೆಯನ್ನು(ಹಲ್ಲು) ವಶಕ್ಕೆ ಪಡೆಯಲಾಗಿದೆ. ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳ ವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ನಾಗ್ಪುರದ ರೆವೆನ್ಯೂ ಇಂಟೆಲಿಜೆನ್ಸ್‌ ಈ ಕಾರ್ಯಾಚರಣೆಗೆ ಇಳಿದಿದ್ದು, ವನ್ಯಜೀವಿಗಳ ಜೀವಕ್ಕೆ ಎರವಾಗಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮೇ. 4ರಂದು ಉಜ್ಜಯಿನಿಯ ಹೊಟೇಲೊಂದರಲ್ಲಿ ಈ  ವ್ಯವಹಾರದಲ್ಲಿ ತೊಡಗಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. 

ಚಿರತೆ ಚರ್ಮ ಮತ್ತು ಕಾಡು ಹಂದಿಯ ಕೋರೆ ಎರಡನ್ನೂ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಚಿರತೆಗಳನ್ನು ವನ್ಯಜೀವಿ (ರಕ್ಷಣೆ) ಕಾಯ್ದೆಯ ವೇಳಾಪಟ್ಟಿ I ರಲ್ಲಿ ಪಟ್ಟಿ ಮಾಡಲಾಗಿದೆ. ಅದರಲ್ಲಿರುವಂತೆ ಚಿರತೆ ಚರ್ಮ ಅಥವಾ ಪ್ರಾಣಿಗಳ ಯಾವುದೇ ಭಾಗದ ವ್ಯಾಪಾರ, ಮಾರಾಟ, ಖರೀದಿ ಅಥವಾ ವಶಕ್ಕೆ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗ ಹಾಗೂ ಆರೋಪಿಗಳನ್ನು ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಹೆಚ್ಚಿನ ತನಿಖೆಗಾಗಿ ಉಜ್ಜಯಿನಿಯ ಜಿಲ್ಲಾ ಅರಣ್ಯ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. 

ಈ ವರ್ಷದ ಜನವರಿಯಲ್ಲಿ, ಡಿಆರ್‌ಐ ನಾಗ್ಪುರ ವಿಭಾಗವೂ ಮಹಾರಾಷ್ಟ್ರದ (Maharashtra)ಅಕೋಲಾ ಜಿಲ್ಲೆಯಲ್ಲಿ ಒಂದು ಚಿರತೆ ಚರ್ಮವನ್ನು ವಶಪಡಿಸಿಕೊಂಡಿತ್ತು ಮತ್ತು  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿತ್ತು. ಡಿಆರ್‌ಐ ನಡೆಸಿದ ಈ ಯಶಸ್ವಿ ಕಾರ್ಯಾಚರಣೆಗಳು ದೇಶದೊಳಗೆ ಮತ್ತು ಗಡಿಗಳಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಕ್ರಮ ವ್ಯಾಪಾರ ಮತ್ತು ಸಾಗಣೆಯನ್ನು ನಿಲ್ಲಿಸುವ ಗುರಿ ಹೊಂದಿದೆ. ಈ ಮೂಲಕ ಭಾರತದ ವನ್ಯಜೀವಿಗಳನ್ನು ರಕ್ಷಿಸುವಲ್ಲಿ ತನ್ನ ನಿರಂತರ ಬದ್ಧತೆಯನ್ನು ಪುನರುಚ್ಚರಿಸಿದೆ.

93 ಗಂಟೆ ಎಲ್ಲಿಯೂ ನಿಲ್ಲದೇ ನಿರಂತರ 3,800 ಕಿ. ಮೀ. ಹಾರಿದ ಅಮುರ್ ಫಾಲ್ಕನ್ ಹಕ್ಕಿ
ನವದೆಹಲಿ: ದೇಶ ಭಾಷೆ, ಗಡಿಯ ಹಂಗಿಲ್ಲದೇ ಹಕ್ಕಿಗಳ ವಲಸೆ ಸಾಮಾನ್ಯವಾಗಿದೆ. ದೇಶದ ಗಡಿಗಳ ಕ್ರಮಿಸಿ ಸಾವಿರಾರು ಕಿಲೋ ಮೀಟರ್‌ ದೂರಕ್ಕೆ ಹಕ್ಕಿಗಳು ವಲಸೆ ಹೋಗುತ್ತವೆ. ಹಾಗೆಯೇ ಅಮುರ್ ಫಾಲ್ಕನ್ ಜಾತಿಯ ಹಕ್ಕಿಗಳು ತಮ್ಮ ಸಾವಿರಾರು ಕಿಲೋ ಮೀಟರ್ ದೂರದ ವಲಸೆಗೆ ಫೇಮಸ್ ಆಗಿವೆ. ಇವುಗಳ ವಲಸೆ ಹಾಗೂ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಪಕ್ಷಿ ತಜ್ಞರು ತಾವು 'ಚಿಯುಲನ್ 2' ಎಂದು ಹೆಸರಿಸಿದ್ದ ಅಮುರ್ ಫಾಲ್ಕನ್  ಪ್ರಬೇಧದ ಹಕ್ಕಿಗೆ ರೇಡಿಯೋ ಟ್ಯಾಗ್‌ ಅಳವಡಿಸಿದ್ದರು. ಇದರಿಂದ ಹಕ್ಕಿಗಳ ವಲಸೆಗೆ ಸಂಬಂಧಿಸಿದಂತೆ ವಿಸ್ಮಯ ಎನಿಸುವ ವಿಚಾರಗಳು ಬೆಳಕಿಗೆ ಬಂದಿದೆ. ಚಿಯುಲನ್ 2 ಅಮುರ್ ಫಾಲ್ಕನ್ ಹಕ್ಕಿಯೊಂದು ಕೇವಲ 93 ಗಂಟೆಯಲ್ಲಿ ಎಲ್ಲೂ ಕೂಡ ನಿಲ್ಲದೇ ಅರೇಬಿಯನ್ ಸಮುದ್ರದ ಮೇಲೆ ಸುಮಾರು 3,8000 ಕಿಲೋ ಮೀಟರ್ ದೂರ ಹಾರಿ ಭಾರತಕ್ಕೆ ಬಂದಿದೆ.

ಅಮುರ್ ಫಾಲ್ಕನ್ಸ್‌ ಹೆಸರಿನ(Falco amurensis)ಹಕ್ಕಿಗಳು,  ಹಕ್ಕಿ ಪ್ರಬೇಧಗಳಲ್ಲೇ ತುಂಬಾ ದೂರ ವಲಸೆ ಹೋಗುವಂತಹ ಹಕ್ಕಿ ಪ್ರಬೇಧಗಳಾಗಿವೆ.  ಇವುಗಳು ವಾರ್ಷಿಕವಾಗಿ ಅಂದಾಜು 22 ಸಾವಿರ ಕಿಲೋ ಮೀಟರ್‌ ಗೂ ಅಧಿಕ ದೂರ ಪ್ರಯಾಣ ಮಾಡುತ್ತವೆ. ಏಕೆಂದರೆ ಇವುಗಳ ಸಂತಾನೋತ್ಪಿ ಜಾಗ ಪೂರ್ವ ಏಷ್ಯಾದಲ್ಲಿದ್ದರೆ, ಅವುಗಳ ಚಳಿಗಾಲದ ಆವಾಸಸ್ಥಾನ ದಕ್ಷಿಣ ಆಫ್ರಿಕಾ ಆಗಿದೆ. ಹೀಗಾಗಿ ಸಂತಾನೋತ್ಪತ್ತಿಗಾಗಿ ಇವು ದೂರದ ಆಫ್ರಿಕಾದಿಂದ ಭಾರತಕ್ಕೆ ಬರುವುದು ಸಾಮಾನ್ಯ ಎನಿಸಿದೆ. ಆದರೆ ಇಷ್ಟು ದೂರ ಅವುಗಳ ಪ್ರಯಾಣವೇ ಒಂದು ರೋಚಕಗಾಥೆ.

ಹೀಗಾಗಿ ವಿಸ್ಮಯವೆನಿಸುವ ಈ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ಪಕ್ಷಿ ತಜ್ಞರು ಈ ಫಾಲ್ಕನ್ ಹಕ್ಕಿಗೆ ಮಣಿಪುರದ ಟ್ಯಾಮೆಂಗ್‌ಲಾಂಗ್ ಜಿಲ್ಲೆಯಲ್ಲಿ 2004ರ ನವಂಬರ್‌ನಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದರು. . ಭಾರತೀಯ ವನ್ಯಜೀವಿ ಸಂಸ್ಥೆಯ ಉಪಗ್ರಹ-ಟ್ರ್ಯಾಕಿಂಗ್ ಯೋಜನೆಯ ಭಾಗವಾಗಿ ಹಕ್ಕಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಹೀಗಾಗಿ ಈ ಫಾಲ್ಕನ್ ಹಕ್ಕಿ, ಈ ಪಕ್ಷಿಗಳ ಗಮನಾರ್ಹ ವಲಸೆ ಪ್ರಯಾಣದ ಬಗ್ಗೆ ವಿಜ್ಞಾನಿಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಿದೆ. ಚಿಯುಲುವಾನ್ 2 ಹಕ್ಕಿ ದಕ್ಷಿಣ ಆಫ್ರಿಕಾದಲ್ಲಿ ಸುಮಾರು 114 ದಿನಗಳನ್ನು ಕಳೆದಿದೆ ಮತ್ತು ಏಪ್ರಿಲ್ 8, 2025 ರಂದು ಬೋಟ್ಸ್ವಾನಾದಿಂದ ಉತ್ತರದ ಕಡೆಗೆ ಅಂದರೆ ಭಾರತದ ಕಡೆಗೆ ಹಾರಾಟ ಪ್ರಾರಂಭಿಸಿದೆ. 

ಗಮನಾರ್ಹವಾಗಿ, ಈ ಪಕ್ಷಿಯು ಅರೇಬಿಯನ್ ಸಮುದ್ರದ ಮೇಲೆ ಸುಮಾರು 3,800 ಕಿ.ಮೀ.ಗಳಷ್ಟು ನಿರಂತರ ದೂರವನ್ನು ಕ್ರಮಿಸಿ, ಕೇವಲ 93 ಗಂಟೆಗಳಲ್ಲಿ (ಸುಮಾರು ನಾಲ್ಕು ದಿನಗಳು) ಭಾರತ ತಲುಪಿದೆ. ಮೊದಲು ಗುಜರಾತ್‌ನಲ್ಲಿ ಇಳಿದ ಈ ಹಕ್ಕಿ ಅಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ನಂತರ ಭಾರತದ ಈಶಾನ್ಯ ಪ್ರದೇಶದ ಕಡೆಗೆ ತನ್ನ ಹಾರಾಟ ಮುಂದುವರೆಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ದಂಪತಿ, ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಟೆಕ್ಕಿ ದುರಂತ ಸಾವು, ಡೆಟ್‌ನೋಟ್‌ನಲ್ಲಿ ಶಾಕಿಂಗ್ ಮಾಹಿತಿ!