
ಪತಿ, ಭಾವಿ ಪತಿ, ಸ್ನೇಹಿತರ ಕೊಲೆ ಮಾಡುವ ಮೂಲಕ ಹೆಚ್ಚಾಗಿ ಮಹಿಳೆಯರೇ ಕೊಲೆಗಾರರಾಗುತ್ತಿರುವ ಆತಂಕಕಾರಿ ಘಟನೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ಹನಿಮೂನ್ನಲ್ಲಿ ಪತಿಯನ್ನು ಕೊಂದ ಸೋನಂ ರಘುವಂಶಿ ಬಳಿಕ, ಈಚೆಗೆ ಭಾವಿ ಪತಿಯನ್ನು ಕೊಂದ ಸಿಯಾಳ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ಮತ್ತೊಂದು ಆತಂಕಕಾಗಿ ಘಟನೆ ಪುರುಷ ವರ್ಗವನ್ನು ಬೆಚ್ಚಿಬೀಳಿಸಿದೆ. ಪುರುಷರೇ ಕೊಲೆಗಾರರಾಗುತ್ತಿರುವ ಘಟನೆಗಳು ನಿಂತಿಲ್ಲವಾದರೂ, ಇದರ ನಡುವೆಯೇ ಯಾವುದೇ ಕಾರಣ ಇಲ್ಲದೇ, ಪುರುಷರ ತಪ್ಪೇ ಇಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರು ಕೊಲೆಗಾತಿಯಾಗುತ್ತಿರುವ ಶಾಕಿಂಗ್ ಘಟನೆ ನಡೆಯುತ್ತಿದ್ದು, ಆಗ್ರಾದಲ್ಲಿನ ಒಂದು ಘಟನೆ ಬೆಚ್ಚಿ ಬೀಳಿಸುವಂತಿದೆ.
ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರುವ ಘಟನೆಯಾಗಿದೆ. ಪತ್ನಿಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ್ದಾಳೆ. ಕೊನೆಗೆ ಎಲ್ಲರೂ ಮಾಡುವಂತೆ ಪತಿ ಕಣ್ಮೆರೆಯಾಗಿರುವುದಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಸುರೇಂದ್ರ ಶರ್ಮಾ ಎನ್ನುವವರ ಪತ್ನಿ ರೂಬಿ ಈ ಖತರ್ನಾಕ್ ಹಂತಕಿ. ಪತಿಯನ್ನು ಕೊಂದ ಬಳಿಕ ಯಾರಿಗೂ ಡೌಟೇ ಬರದಂತೆ ದಿನವೂ ಕಣ್ಣೀರು ಹಾಕುತ್ತಿದ್ದಾಳೆ. ಹೀಗೆ ಈ ನಾಟಕ 45 ದಿನಗಳು ಮುಂದುವರೆದಿವೆ. ಸುರೇಂದ್ರ ಅವರ ಸಹೋದರ ಅನಿಲ್ ಶರ್ಮಾ ಅವರು ಪೊಲೀಸರಿಗೆ ದೂರು ನೀಡಿದಾಗ, ಮನೆಯ ಬಳಿಕ ಆಸುಪಾಸಿನ ಸಿಸಿಟಿವಿ ಎಲ್ಲಾ ಪರಿಶೀಲನೆ ಮಾಡಲಾಗಿತ್ತು. ಆದರೆ ಮನೆ ಬಿಟ್ಟು ಎಲ್ಲಿಯೂ ಹೊರಗೆ ಹೋದ ಸುಳಿವೇ ಸಿಗದೇ ಪೊಲೀಸರು ಕಂಗಾಲಾಗಿ ಹೋಗಿದ್ದರು.
ಪತಿ ಕಾಣೆಯಾಗಿರುವುದಾಗಿ ಹೇಳುತ್ತಲೇ ಬಂದ ರೂಬಿ, ಕೊನೆಗೆ ಪತಿಯ ಪಿಂಚಣಿಯ ಬಗ್ಗೆ ವಿಚಾರಿಸುತ್ತಿರುವಾಗಿ ಸಹೋದರ ಅನಿಲ್ ಶರ್ಮಾ ಅವರಿಗೆ ಡೌಟ್ ಬಂದಿದೆ. ತಮ್ಮ ಅತ್ತಿಗೆಯನ್ನು ಬೇರೆ ಬೇರೆ ರೀತಿಯಲ್ಲಿ ವಿಚಾರಿಸಿದ್ರೂ ಆಕೆ ಮಾತ್ರ ಅಳುತ್ತಲೇ ಗಂಡ ಎಲ್ಲೋ ಹೋದವ ಬರಲೇಇಲ್ಲ ಎಂದು ಗೋಳಾಡುತ್ತಲೇ ಇದ್ದಳು. ಅನಿಲ್ ಶರ್ಮಾ, ರೂಬಿಯನ್ನು ಸುರೇಂದ್ರ ಬಗ್ಗೆ ಪದೇ ಪದೇ ಕೇಳಿದಾಗ ಪ್ರಕರಣವು ಹೊಸ ತಿರುವು ಪಡೆದುಕೊಂಡಿತು. ಪ್ರತಿ ಬಾರಿಯೂ, ರೂಬಿ ಸುರೇಂದ್ರ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾನೆ ಮತ್ತು ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂದು ಉತ್ತರಿಸಿದಳು. ಆದಾಗ್ಯೂ, ಅನಿಲ್ ಶರ್ಮಾ ಪದೇ ಪದೇ ಅವಳನ್ನು ಪ್ರಶ್ನಿಸಿದಾಗ ಮತ್ತು ಸತ್ಯವನ್ನು ಕಂಡುಹಿಡಿಯಲು ಅವಳ ಮೇಲೆ ಒತ್ತಡ ಹೇರಿದಾಗ, ರೂಬಿ ಕೋಪಗೊಂಡು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದಳು. ಸುರೇಂದ್ರನ ಶವವನ್ನು ಮನೆಯ ಸ್ನಾನಗೃಹದ ಕೆಳಗೆ ಹೂಳಲಾಗಿದೆ ಮತ್ತು ಹೊಸ ಪ್ಲಾಸ್ಟರ್ ಅನ್ನು ಅನ್ವಯಿಸಲಾಗಿದೆ ಎಂದು ಅವಳು ಬಹಿರಂಗಪಡಿಸಿದಳು.
ಇದನ್ನು ಕೇಳಿದ ಮೃತನ ಸಹೋದರ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ನಾನಗೃಹದ ನೆಲವನ್ನು ಒಡೆದು ಶವವನ್ನು ಹೊರತೆಗೆದರು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ತನ್ನ ಗಂಡನ ಶವವನ್ನು ಸ್ನಾನಗೃಹದಲ್ಲಿ ಹೂಳಿದ್ದಾಳೆ ಎಂದು ತಿಳಿದುಬಂದಿದೆ ಎಂದು ಎಸಿಪಿ ಹರಿಪರ್ವತ್ ಅಮಿಷಾ ಹೇಳಿದ್ದಾರೆ. ಪ್ರಸ್ತುತ, ಆರೋಪಿ ಪತ್ನಿ ರೂಬಿಯನ್ನು ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸುರೇಂದ್ರನ ಸಾವಿನ ಸಂದರ್ಭಗಳನ್ನು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ಪರೀಕ್ಷೆ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ದುಡ್ಡಿಗಾಗಿ ಈ ಕೃತ್ಯ ಎಸಗಿದ್ದಾಳೋ ಅಥವಾ ಇನ್ನೇನು ದುರುದ್ದೇಶ ಇದೆಯೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ