
ಪಾಟ್ನಾ(ಜೂ.08):ಸಿಆರ್‌ಪಿಎಫ್ ಯೋಧ ಸೂರ್ಯಭೂಷಣ್ ಕುಮಾರ್‌ಗೆ ನೇಹಾ ಕುಮಾರಿ ಜೊತೆಗೆ ಲವ್. ಇವರ ಪ್ರೀತಿ ಗಾಢವಾಗಿತ್ತು. ಆದರೆ ಸೂರ್ಯಭೂಷಣ್ ಮದುವೆ ಮುಂದೂಡುತ್ತಿದ್ದ. ಇತ್ತ ನೇಹಾ ಕುಮಾರಿ ಮಾತ್ರ ಮದುವೆಗೆ ಪದೇ ಪದೇ ಒತ್ತಾಯಿಸಿದ್ದಾಳೆ. ಕೊನೆಗೆ ಒತ್ತಾಯಕ್ಕೆ ಮಣಿದು ರಹಸ್ಯವಾಗಿ ರಿಜಿಸ್ಟರ್ ಮ್ಯಾರೇಜ್ ಕಚೇರಿಯಲ್ಲಿ ಮದುವೆ ಆಗಿದ್ದಾರೆ. ಸರಳವಾಗಿ ಮದುವೆಯಾದ ಈ ಜೋಡಿ ಮನೆಯವರಿಗೆ ಮಾಹಿತಿ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ಲಾನ್ ಹಾಕಿಕೊಂಡಿತ್ತು. ಹೀಗಾಗಿ ಹೊಟೆಲ್ ರೂಂನಲ್ಲಿ ತಂಗಿದ್ದಾರೆ. ಆದರೆ ಮದುವೆಯಾದ ಎರಡೇ ದಿನಕ್ಕೆ ಪತಿಯ ಖಾಸಗಿ ಅಂಗಕ್ಕೆ ಚಾಕು ಇರಿದಿದ್ದಾಳೆ. ಇದೀಗ ಸೂರ್ಯೂಭೂಷಣ್ ಆಸ್ಪತ್ರೆ ಸೇರಿದ್ದರೆ, ನೇಹಾ ಕುಮಾರಿ ಅರೆಸ್ಟ್ ಆಗಿದ್ದಾಳೆ. ಬಿಹಾರದ ಪಾಟ್ನಾದಲ್ಲಿ ಈ ಘಟನೆ ನಡೆದಿದೆ.
ಸೂರ್ಯ ಭೂಷಣ್ ಕುಮಾರ್ ಹಾಗೂ ನೇಹಾ ಕುಮಾರಿ ಪ್ರೀತಿ ಯೋಧನ ಮನೆಯವರಿಗೆ ತಿಳಿದಿಲ್ಲ. ಇದನ್ನು ತಿಳಿಸುವ ಪ್ರಯತ್ನಕ್ಕೂ ಸೂರ್ಯ ಕುಮಾರ್ ಭೂಷಣ್ ಹೋಗಿಲ್ಲ. ಇತ್ತ ಸೂರ್ಯು ಭೂಷಣ್ ಮನೆಯವರು ಬೇರೊಂದು ಹುಡುಗಿ ಜೊತೆ ಮದುವೆ ನಿಗಧಿ ಮಾಡಿದ್ದರೆ. ಮದುವೆಗೆ ತಯಾರಿಗಳು ನಡೆದಿದೆ. ಇತ್ತ ನೇಹಾ ಕುಮಾರಿಗೆ ಕುಟುಂಬಸ್ಥರು ಬೇರೆ ಹುಡುಗಿ ಜೊತೆ ಮದುವೆ ಮಾಡಿಸುವ ವಿಚಾರ ಗೊತ್ತಿಲ್ಲ. ಆದರೆ ಸೂರ್ಯ ಭೂಷಣ್ ತಮ್ಮ ಮದುವೆ ಮುಂದೂಡುತ್ತಿದ್ದಂತೆ ಆತಂಕಗೊಂಡಿದ್ದಾಳೆ. ತಕ್ಷಣವೇ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.
ಗೆಳೆಯನಿಂದಲೇ ಹತ್ಯೆಯಾದ 16ರ ಬಾಲಕಿ, 20 ಬಾರಿ ಚಾಕು ಇರಿದು ಕಲ್ಲು ಎತ್ತಿಹಾಕಿ ಭೀಕರ ಕೊಲೆ!
ಇತ್ತ ಪ್ರೀತಿಸಿದ ಹುಡುಗಿ, ಅತ್ತ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ ಸೂರ್ಯ ಭೂಷಣ್ ಕೊನೆಗೆ ಬೇರೆ ದಾರಿ ಕಾಣದೆ ಜೂನ್ 2 ರಂದು ಪಾಟ್ನಾಗೆ ಆಗಮಿಸಿದ್ದಾನೆ. ಬಳಿಕ ಜೂನ್ 5 ರಂದು ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದಾರೆ. ಇತ್ತ ಯೋಧನ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿದೆ. ಮದುವೆ ದಿನಾಂಕವೂ ಹತ್ತಿರ ಬಂದಿದೆ. ಲಘ್ನ ಪತ್ರಿಕೆ ಪ್ರಿಂಟ್ ಮಾಡಿ ಹಂಚಿಯಾಗಿದೆ. ಬಹುತೇಕ ಕಾರ್ಯಗಳು ಮುಕ್ತಾಯದ ಹಂತದಲ್ಲಿತ್ತು.
ಜೂನ್ 5 ರಂದು ಮದುವೆಯಾದ ಸೂರ್ಯಭೂಷಣ್ ಹಾಗೂ ನೇಹಾ ಕುಮಾರಿ ಪಾಟ್ನಾದ ನ್ಯೂ ಡಾಕ್ ಬಂಗ್ಲೋ ರೋಡ್‌ನಲ್ಲಿನ ಖಾಸಗಿ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಇತ್ತ ಸೂರ್ಯಕುಮಾರ್ ಭೂಷಣ್ ಕುಟುಂಬಸ್ಥರ ಪದೇ ಪದೆ ಫೋನ್, ಮದುವೆ ಸಂಭಾಷಣೆಯಿಂದ ನೇಹಾ ಕುಮಾರಿ ಅನುಮಾನಗೊಂಡ ಮಾಹಿತಿ ಕೇಳಿದ್ದಾಳೆ. ಈ ವೇಳೆ ಕುಟುಂಬಸ್ಥರು ಮತ್ತೊಂದು ಮದುವೆಗೆ ತಯಾರಿ ನಡೆಸಿರುವ ಮಾಹಿತಿ ಬಹಿರಂಗಪಡಿಸಿದ್ದಾನೆ. ಈ ಮದುವೆ ಕ್ಯಾನ್ಸಲ್ ಮಾಡುವಂತೆ ನೇಹಾ ಕುಮಾರಿ ಒತ್ತಾಯಿಸಿದ್ದಾಳೆ. ಕುಟುಂಬಸ್ಥರ ಬಳಿ ನಡೆದ ಘಟನೆ ವಿವರಿಸಿ ಮದುವೆ ರದ್ದು ಮಾಡುವಂತೆ ಸೂಚಿಸಿದ್ದಾಳೆ.
ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಇರಿದು ಕೊಂದ ರೋಗಿ
ಈ ಹಗ್ಗಾಜಗ್ಗಾಟದಲ್ಲಿ ಮದುವೆಯ ಮೊದಲ ದಿನ ಮುಗಿದು ಹೋಗಿದೆ.ಇತ್ತ ಕುಟುಂಬಸ್ಥರಿಗೆ ಮದುವೆ ರದ್ದು ಕುರಿತು ಮಾಹಿತಿಯನ್ನು ಸೂರ್ಯ ಭೂಷಣ್ ನೀಡಿದ್ದಾರೆ. ಯೋಧನ ಕುಟುಂಬದಲ್ಲಿ ಕೋಲಾಹಲವೇ ಎದ್ದಿದೆ. ಯೋಧನ ಪೋಷಕರು ತಾವು ಫಿಕ್ಸ್ ಮಾಡಿದ ಹುಡುಗಿ ಮನೆ ಕಡೆಯಿಂದ ತೀವ್ರ ವಿರೋಧ ಎದುರಿಸಿದ್ದಾರೆ. ಸಣ್ಣ ಮಟ್ಟದಲ್ಲಿ ಜಗಳವೂ ನಡೆದಿದೆ. ಇದು ಸೂರ್ಯ ಭೂಷಣ್ ಚಿಂತೆ ಹೆಚ್ಚಿಸಿದೆ. ಎರಡನೇ ದಿನ ಮತ್ತೆ ಇದೇ ವಿಚಾರವಾಗಿ ನವ ದಂಪತಿಗಳ ನಡವೆ ಜಗಳವಾಗಿದೆ. ಕುಟುಂಬಸ್ಥರ ಫಿಕ್ಸ್ ಮಾಡಿದ ಮದುವೆ ರದ್ದು ಮಾಡಲು ಒತ್ತಾಯಿಸಿದ ಪತ್ನಿ ವಿರುದ್ಧ ರೇಗಾಡಿದ್ದಾನೆ. ನೇಹಾ ಕುಮಾರಿಯ ಪಿತ್ತ ನೆತ್ತಿಗೇರಿದೆ.
ಕುಟಂಬಸ್ಥರು ಫಿಕ್ಸ್ ಮಾಡಿದ ಮದುವೆ ರದ್ದು ಮಾಡದೆ ಆಕೆಯನ್ನೇ ಮದುವೆಯಾಗುವ ಆಲೋಚನೆ ಇತ್ತಾ ಎಂದು ಪ್ರಶ್ನಿಸಿದ್ದಾಳೆ. ಈ ವಿಚಾರದಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಹೆಚ್ಚು ಮಾತನಾಡಿದರೆ ನಿನನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾಳೆ. ಆದರೆ ಸೂರ್ಯೂ ಭೂಷಣ್ ಜಗಳ ನಿಲ್ಲಿಸಿಲ್ಲ. ಆಕ್ರೋಶಗೊಂಡ ನೇಹಾ ಕುಮಾರಿ ಚಾಕು ತೆಗೆದು ಪತಿ ಖಾಸಗಿ ಅಂಗಕ್ಕೆ ಚುಚ್ಚಿದ್ದಾಳೆ. ರಕ್ತ ಸ್ರಾವದೊಂದಿಗೆ ಹೊಟೆಲ್ ಹೊರಗೆ ಓಡಿದ ಸೂರ್ಯ ಭೂಷಣ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಇತ್ತ ಸೂರ್ಯ ಭೂಷಣ್‌ನನ್ನು ಆಸ್ಪತ್ರೆ ದಾಖಲಿಸಿದ್ದರೆ, ನೇಹಾ ಕುಮಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ