ಲವ್‌ ಮಾಡ್ತಿದ್ದ ಹುಡ್ಗಿನ ಬೆಂಗ್ಳೂರಿಗೆ ಕರೆಸಿ, ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಮಾಡಿದ ಪ್ರಿಯಕರ

By Sathish Kumar KH  |  First Published Jun 8, 2023, 12:44 PM IST

ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಮಾಡಿದ ಘಟನೆ ಗಿರಿನಗರದಲ್ಲಿ ನಡೆದಿದೆ.


ಬೆಂಗಳೂರು (ಜೂ.08): ಜೀವನದಲ್ಲಿ ಇನ್ನುಮುಂದೆ ಜೊತೆಯಾಗಿ ಇರ್ತೀನಿ, ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀನಿ ಎಂದು ಭರವಸೆ ನೀಡಿದ್ದ ಪ್ರೀತಿಸಿದ ಹುಡುಗನನ್ನು ನಂಬಿಕೊಂಡು ತುಮಕೂರಿನಿಂದ ಬೆಂಗಳೂರಿಗೆ ಬಂದ ಹುಡುಗಿಯ ಮೇಲೆ ಪ್ರೀತಿಸಿದ ಯುವಕ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಮಾಡಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೆಣ್ಣು ಮಕ್ಕಳಿಗೆ ಅಥವಾ ಮಹಿಳೆಯರಿಗೆ ಎಲ್ಲಿಗೆ ಹೋದರೂ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಂದೆ- ತಾಯಿಯನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿಯನ್ನು ಹೆಣ್ಣು ನಂಬುವುದಾದರೆ ಅದು ಪ್ರೀತಿಸಿದ ಹುಡುಗ ಅಥವಾ ಗಂಡ ಮಾತ್ರ. ಆದರೆ, ಇಲ್ಲಿ ಜೀವನಪೂರ್ತಿ ನಿನ್ನ ಜೊತೆಗಿರ್ತೀನಿ ಎಂದು ಭರವಸೆ ನೀಡಿದ ಪ್ರೀತಿಸಿದ ಯುವಕನನ್ನು ನಂಬಿಕೊಂಡು ಬಂದ ಯುವತಿಯ ಮೇಲೆ ಅತ್ಯಾಚಾರ ನಡೆದು ಹೋಗಿದೆ. ಅದು ಕೂಡ, ಪ್ರೀತಿಸಿದ ಯುವಕ ತಾನು ಮಾತ್ರವಲ್ಲದೇ ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದು, ಸಂತ್ರಸ್ತ ಯವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. 

Tap to resize

Latest Videos

ಮುಸ್ಲಿಂ ಹುಡುಗಿ ಜೊತೆಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ: ಫ್ರೆಂಡ್ಸ್‌ ಅಂದ್ರೂ ಬಿಡ್ಲಿಲ್ಲ

ಗಿರಿನಗರದಲ್ಲಿ ಸ್ನೇಹಿತನ ಜೊತೆಗೂಡಿ ಅತ್ಯಾಚಾರ: ಯುವತಿಯ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ ಘಟನೆ ನಡೆದಿರುವುದು ಬೆಂಗಳೂರಿನ ಗಿರಿನಗರದ ಈರಣ್ಣಗುಡ್ಡೆಯಲ್ಲಿ. ಅತ್ಯಾಚಾರಕ್ಕೊಳಗಾದ ಯುವತಿ ತುಮಕೂರು ನಗರದವಳಾಗಿದ್ದು, ಪ್ಯಾರಾಮೆಡಿಕಲ್‌ ಅಭ್ಯಾಸ ಮಾಡುತ್ತಿದ್ದಳು. ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ ಹಾಗು ಸ್ನೇಹಿತನಿಂದ ಅತ್ಯಾಚಾರ ನಡೆದಿದೆ. ಪುರುಷೋತ್ತಮ್ ಹಾಗು ಚೇತನ್ ಬಂಧಿತ ಆರೋಪಿಗಳು. ಪುರುಷೋತ್ತಮ್ ಹಾಗು ಯುವತಿ ಒಂದು ವರ್ಷದಿಂದ ಲವ್ ಮಾಡುತ್ತಿದ್ದರು. ಮೂಲತಃ ತುಮಕೂರಿನ ನಿವಾಸಿಯಾದ ಯುವತಿ ಕಾಲೇಜಿನಲ್ಲಿ ಓದುತ್ತಿದ್ದು, ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. 

ಮೊಬೈಕ್‌ ಕಿತ್ಕೊಂಡು ಅತ್ಯಾಚಾರ ಮಾಡಿದ: ಕಳೆದ ಒಂದು ವಾರದ ಹಿಂದೆ ಯುವತಿಯನ್ನ ಭೇಟಿ ಮಾಡಿದ್ದ ಆರೋಪಿ ಪ್ರಿಯಕರ ಪುರುಷೋತ್ತಮ್, ನಂತರ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದನು. ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿ ನನ್ನ ಮೊಬೈಲ್ ವಾಪಸ್ ಕೊಡು ಎಂದು ಕೇಳಿದ್ದಳು. ಈ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ, ನಿನ್ನ ಮೊಬೈಲ್ ಕೊಡ್ತಿನಿ ಎಂದು ಹೇಳಿದ್ದನು. ಇನ್ನು ನಂಬಿಕೊಂಡು ಮಂಗಳವಾರ (ಜೂ.6) ರಂದು ಯುವತಿ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದಾಳೆ. ಈ ವೇಳೆ ಮೊಬೈಲ್‌ ರೂಮ್‌ನಲ್ಲಿದೆ ಎಂದು ಹೇಳಿ ಯುವತಿಯನ್ನ ಪುಸಲಾಯಿಸಿ ಗಿರಿನಗರದ ಈರಣ್ಣಗುಡ್ಡೆಯ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಊರಿಗೆ ಹೋಗಬೇಕೆಂದವಳ ಮೇಲೆ ಅತ್ಯಾಚಾರ: ಇನ್ನು ರೂಮಿಗೆ ಬಂದ ಯುವತಿ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಎಂದು ಕೇಳಿದ್ದಾಳೆ. ಆದರೂ ಮೊಬೈಲ್‌ ಕೊಡದ ಪ್ರಿಯಕರ ಇವತ್ತು ಇಲ್ಲೆ ಇರು ಅಂತ ಹೇಳಿದ್ದಾನೆ. ಇಲ್ಲ ನಾನು ಇರೋದಿಲ್ಲ ಮನೆಗೆ ಹೋಗಬೇಕು ಎಂದು ಹಠ ಮಾಡಿದ್ದ ಯುವತಿಯ ಮೇಲೆ ಪ್ರಿಯಕರ ಬಲವಂತವಾಗಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಘಟನೆ ನಡೆದ ನಂತರ ಪುರುಷೋತ್ತಮ್‌ನ ಸ್ನೇಹಿತ ಚೇತನ್ ಯುವತಿಯಿದ್ದ ಕೋಣೆಗೆ ಬಂದಿದ್ದಾನೆ. ಆಗ, ಯುವತಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. 

ಹೆಣ್ಣೆಂಬ ಕಾರಣಕ್ಕೆ ಹುಟ್ಟಿದ ಮಗುವನ್ನೇ ಮುಳ್ಳಲ್ಲಿ ಬೀಸಾಡಿ ಹೋದ ಪೋಷಕರು

ಸ್ಥಳೀಯರಿಂದ ಯುವತಿಯ ರಕ್ಷಣೆ: ಇನ್ನು ಗಿರಿನಗರದಲ್ಲಿ ಯುವಕರ ಕೋಣೆಯಲ್ಲಿ ಹುಡಗಿಯ ಚೀರಾಟವನ್ನು ಕೇಳಿದ ಅಕ್ಕಪಕ್ಕದ ಮೆನೆಯವರು ಹುಡುಗರ ರೂಮಿನತ್ತ ಬಂದಿದ್ದಾರೆ. ಯುವಕರಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿ ಕೂಡಲೇ ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಯುವತಿಯನ್ನ ರಕ್ಷಣೆ ಮಾಡಿದ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಪೋಷಕರ ಬಳಿ ಬಿಟ್ಟಿದ್ದಾರೆ. ಇನ್ನು ಆರೋಪಿಗಳಾದ ಚೇತನ್ ಹಾಗು ಪುರುಷೋತ್ತಮ್ ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಘಟನೆ ಕುರಿತಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!