ಕದ್ದು ಮುಚ್ಚಿ ಪತಿಯ ವ್ಯಾಟ್ಸಾಪ್ ಖಾತೆ ತೆರೆದು ನೋಡಿದ್ದಾಳೆ. ಮೆಸೇಜ್, ಫೋಟೋ, ವಿಡಿಯೋ ನೋಡಿ ಪತ್ನಿ ಆಘಾತಗೊಂಡಿದ್ದಾಳೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಪತಿಯನ್ನು ಜೈಲಿಗಟ್ಟುವಲ್ಲೂ ಯಶಸ್ವಿಯಾಗಿದ್ದಾಳೆ. ಅಷ್ಟಕ್ಕೂ ಪತಿ ವ್ಯಾಟ್ಸಾಪ್ನಲ್ಲಿ ಏನಿತ್ತು?
ನಾಗ್ಪುರ(ಏ.01) ಸೊಬಗನಂತೆ ಫೋಸ್ ಕೊಟ್ಟ ಪತಿಯ ಕರಾಳ ಮುಖ ಬಯಲು ಮಾಡಲು ಪತ್ನಿ ಕದ್ದು ವ್ಯಾಟ್ಸಾಪ್ ಖಾತೆ ತೆರೆದಿದ್ದಾಳೆ. ಈಗಲೇ ಅನಾವರಣಗೊಂಡಿತ್ತು ಬ್ರಹ್ಮಾಂಡ. ಈ ಮಾಹಿತಿಗಳ ಆಧಾರದಲ್ಲಿ ಪತಿಯನ್ನು ಜೈಲಿಗಟ್ಟಿದ ಘಟನೆ ನಾಗ್ಪುರದಲ್ಲಿ ನಡೆದಿದೆ. ಅಷ್ಟಕ್ಕೂ ಪತಿಯ ವ್ಯಾಟ್ಸಾಪ್ ಖಾತೆಯಲ್ಲಿದ್ದಿದ್ದು ಬೆಚ್ಚಿ ಬೀಳಿಸುವ ಫೋಟೋ, ವಿಡಿಯೋ ಹಾಗೂ ಚಾಟ್. ಇತ್ತ ಪೊಲೀಸರು ಈ ಮಾಹಿತಿ ಅಧರಿಸಿ ಆತನ ಅರೆಸ್ಟ್ ಮಾಡಿದ್ದಾರೆ.
ಏನಿದು ಘಟನೆ?
ಮಹಿಳೆ 2021ರಲ್ಲಿ ಅಬ್ದುಲ್ ಶಾರಿಖ್ ಖುರೇಷಿಯನ್ನು ಮದುವೆಯಾಗಿದ್ದಾಳೆ. ಆದರೆ ಪತಿಯ ನಡೆ, ನುಡಿಗಳು ಅನುಮಾನ ತರಿಸಿತ್ತು. ಈ ದಂಪತಿಗೆ 3 ವರ್ಷದ ಮಗಳಿದ್ದಾಳೆ. ಆದರೆ ಪತಿ ಮೇಲೆ ಪತ್ನಿಗೆ ಅನುಮಾನ ಹೆಚ್ಚುತ್ತಲೇ ಹೋಗಿದೆ. ಕೊನೆಗೂ ಪತ್ನಿಯ ಅನುಮಾನ ನಿಜವಾಗಿದೆ. ಅಬ್ದುಲ್ ಮನೆಯಲ್ಲಿ ಹೆಂಡತಿ ಮಕ್ಕಳಿದ್ದರೆ, ಊರು ತುಂಬಾ ಬೇರೆ ಯುವತಿಯನ್ನು ಪೀಡಿಸುತ್ತಿದ್ದ. ಒಮ್ಮೆ ಹಿಂದೂವಾಗಿ, ಮತ್ತೊಮ್ಮೆ ಮುಸ್ಲಿಮನಾಗಿ ವೇಷ ಬದಲಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಇದೇ ವೇಳೆ ಅವರ ಫೋಟೋ, ವಿಡಿಯೋ ಸೆರೆ ಹಿಡಿಯುತ್ತಿದ್ದ.
ಪ್ರೇಮಿಯೊಂದಿಗೆ ಸಿಕ್ಕಿಬಿದ್ದ ಎರಡು ಮಕ್ಕಳ ತಾಯಿಗೆ ಲವರ್ ಜೊತೆ ಮದ್ವೆ ಮಾಡಿದ ಗಂಡ
ಮದುವೆ ವಿಚಾರ ಎತ್ತಿದ್ದಾಗ ಈ ವಿಡಿಯೋ ತೋರಿಸಿ ಬೆದರಿಸುತ್ತಿದ್ದ. ಈ ಪೈಕಿ 19 ವರ್ಷದ ಹುಡುಗಿಯೂ ಸೇರಿದ್ದಳು. ಈಕೆಯ ಬಳಿ ತಾನು ಸಾಹಿಲ್ ಶರ್ಮಾ ಎಂದು ಹೇಳಿಕೊಂಡಿದ್ದ. ಬಳಿಕ ಆಕೆಯನ್ನು ಪ್ರೀತಿಸಿದ ನಾಟಕವಾಡಿ ಬಳಸಿಕೊಂಡಿದ್ದ. ಆಕೆಯ ಹಲವು ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಬಳಿಕ ಬ್ಲಾಕ್‌ಮೇಲ್ ಮಾಡುತ್ತಿದ್ದ. ಈ ವಿಚಾರ ಪತಿಗೆ ಗೊತ್ತಾದ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಯಾವುದೇ ಆಧಾರವಿಲ್ಲದ ಕಾರಣ ಅಬ್ದುಲ್‌ನನ್ನು ಅರೆಸ್ಟ್ ಮಾಡಲು ಪೊಲೀಸರಿಗೆ ಕಾನೂನು ತೊಡಕು ಎದುರಾಗಿದೆ.
ಹಠ ಬಿಡದ ಪತ್ನಿ, ಪತಿಯ ವ್ಯಾಟ್ಸಾಪ್ ಹ್ಯಾಕ್
ಪತಿ ಅಕ್ರಮ ಬಯಲಿಗೆಳೆಯಲು ಪತ್ನಿಗೆ ಬೇರೆ ದಾರಿ ಇರಲಿಲ್ಲ. ದೂರು ನೀಡಿದರೂ ಏನು ಆಗಲಿಲ್ಲ. ಹೀಗಾಗಿ ಪತಿಯ ವ್ಯಾಟ್ಸಾಪ್ ಹ್ಯಾಕ್ ಮಾಡಲು ಮುಂದಾಗಿದ್ದಾಳೆ. ಪತಿ ಮೊಬೈಲ್ ಪಾಸ್‌ವರ್ಡ್ ತಿಳಿಯುವುದು ಹರಸಾಹಸವಾಗಿತ್ತು. ಕೊನೆಗೂ ಪತಿಯ ಮೊಬೈಲ್ ಹ್ಯಾಕ್ ಮಾಡಿ ವ್ಯಾಟ್ಸಾಪ್ ಖಾತೆ ತೆರೆದಿದ್ದಾಳೆ. ಈ ವೇಳೆ ತಾನು ಅಂದುಕೊಂಡಂತೆ ಎಲ್ಲಾ ಮಾಹಿತಿಗಳು ಸಿಕ್ಕಿದೆ. ವಿಡಿಯೋಗಳನ್ನು, ಫೋಟೋಗಳನ್ನು, ಸ್ಕ್ರೀನ್‌ಶಾಟ್ ಹೀಗೆ ಹಲವು ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ನೀಡಿದ್ದಾಳೆ. ಈ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿದ ಪೊಲೀಸರು ಅಬ್ದುಲ್‌ನ ಬಂಧಿಸಿದ್ದಾರೆ.
ಅಬ್ದುಲ್ಲಾನ ಅವತಾರದಲ್ಲಿ ಅತೀ ಹೆಚ್ಚು ಸಂಕಷ್ಟ ಅನುಭವಿಸಿದ್ದು 19 ವರ್ಷದ ಹುಡುಗಿ. 19 ವರ್ಷದ ಯುವತಿಯನ್ನು ಹಲವು ಹೊಟೆಲ್ ಸುತ್ತಿಸಿದ್ದ ಈ ಅಬ್ದುಲ್ಲಾ ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವೇಳೆ ತೆಗೆದ ಫೋಟೋಗಳು, ವಿಡಿಯೋ ಮೂಲಕ ಬ್ಲಾಕ್‌ಮೇಲ್ ಮಾಡಲು ಶುರುಮಾಡಿದ್ದಾನೆ. ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದಾನೆ. ಬೆದರಿದ ಯುವತಿ ಕೊನೆಗೆ ತನ್ನ ತಾಯಿ ನೀಡಿದ ಉಂಗುರ ಮಾರಾಟ ಮಾಡಿ 30,000 ರೂಪಾಯಿ ಹಣವನ್ನು ಈತನಿಗೆ ಕೊಟ್ಟಿದ್ದಾಳೆ. ಆದರೂ ಈತನ ದಾಹ ತೀರಿರಲಿಲ್ಲ.
ಇದೀಗ ಪೊಲೀಸರ ಈತನ ಫೋನ್ ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ. 20ಕ್ಕೂ ಹೆಚ್ಚು ಮಹಿಳೆಯರಿಗೆ ಈ ರೀತಿ ಬೆದರಿಸಿರುವುದು, ಬಳಸಿಕೊಂಡಿರುವುದು ಪತ್ತೆಯಾಗಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪೊಲೀಸರು ತನಿಖ ತೀವ್ರಗೊಳಿಸಿದ್ದಾರೆ. ಇದೀಗ ಒಂದೊಂದೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಇತ್ತ ಪತ್ನಿಯ ಧೈರ್ಯ ಹಾಗೂ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಂದೇ ದಿನ ಇಬ್ಬರ ಮದುವೆಯಾದ ಕಿಲಾಡಿ: ಬೆಳಗ್ಗೆ ಪ್ರೇಯಸಿ, ಸಂಜೆ ಪೋಷಕರು ನೋಡಿದ ಹುಡುಗಿ ಜೊತೆ ಮದ್ವೆ