Latest Videos

ಚಿಕ್ಕಮಗಳೂರು: ಅನೈತಿಕ ಸಂಬಂಧ, ಗಂಡನಿಗೆ ವಿಷವಿಕ್ಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ ಹೆಂಡ್ತಿ..!

By Kannadaprabha NewsFirst Published Jun 23, 2024, 6:00 AM IST
Highlights

ಪೊಲೀಸರು ಕಿರಣ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಅನೈತಿಕ ಸಂಬಂಧ ಗೊತ್ತಾಗಿದೆ. ತನಿಖೆ ವೇಳೆ, ಕೊಲೆ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ.
 

ಚಿಕ್ಕಮಗಳೂರು(ಜೂ.23):  ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಗೆ ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಬಳಿಯ ದೊಡ್ಡಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಣ್ಣ (38) ಕೊಲೆಯಾದ ದುರ್ದೈವಿ. 

ಜಯಣ್ಣ ಅವರ ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಕಿರಣ್‌ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜೂ.16ರಂದು ರಾತ್ರಿ ಶೃತಿ ತನಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ನೆಪ ಹೇಳಿ ಜಯಣ್ಣ ಮತ್ತು ಕಿರಣ್ ಇಬ್ಬರನ್ನೂ ಅರಸೀಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. 

ಜಿಮ್ ಟ್ರೈನರ್ ಪ್ರೀತಿಯಲ್ಲಿ ಕೊಲೆಗಾರದ್ರು, ನಂಬಿದ ಗಂಡನಿಗೆ ವಂಚಿಸಿದ್ರು; ಇಲ್ಲಿವೆ ದಾಂಪತ್ಯದ 5 ವಂಚನೆ ಕಥೆಗಳು 

ಮಾರ್ಗ ಮಧ್ಯೆ ಜಯಣ್ಣಗೆ ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿ, ಬಳಿಕ, ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಊರಿಗೆ ಬಂದು ಹೊಟ್ಟೆ ನೋವಿನಿಂದ ಜಯಣ್ಣ ಸಾವನ್ನಪ್ಪಿದ್ದಾನೆ ಎಂದು ಊರಿನವರನ್ನು ನಂಬಿಸಿದ್ದರು. ಪೊಲೀಸರು ಕಿರಣ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಅನೈತಿಕ ಸಂಬಂಧ ಗೊತ್ತಾಗಿದೆ. ತನಿಖೆ ವೇಳೆ, ಕೊಲೆ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ.

click me!