ಕದ್ದುಮುಚ್ಚಿ ಹೆಂಡತಿ ಸಂಗ ಮಾಡಿದವನ ಕುತ್ತಿಗೆಗೆ ಮುಚ್ಚು ಬೀಸಿದ ಗಂಡ ಅತನನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ಭೀಕರ ಕೊಲೆಯಿಂದಾಗಿ ಮೈಸೂರಿನ ಜನ ಬೆಚ್ಚಿ ಬಿದ್ದಿದ್ದಾರೆ.
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಮಾ.5): ಹಾಡು ಹಗಲೇ, ಸರ್ಕಾರಿ ಸಂಸ್ಥೆ ಎದುರೆ ಮಚ್ಚು ಝಳಪಿಸಿದೆ. ಕದ್ದು ಮುಚ್ಚಿ ಹೆಂಡತಿ ಸಂಗ ಮಾಡಿದವನ ಕುತ್ತಿಗೆಗೆ ಮುಚ್ಚು ಬೀಸಿದ ಗಂಡ ಅತನನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ನೋಡ ನೋಡುತ್ತಿದ್ದಂತೆ ನಡೆದ ಭೀಕರ ಕೊಲೆಯಿಂದಾಗಿ ಸಾಂಸ್ಕೃತಿಕ ರಾಜಧಾನಿಯ ಜನ ಬೆಚ್ಚಿ ಬಿದ್ದಿದ್ದಾರೆ. ತಾನು ಹತ್ತು ವರ್ಷ ಸಂಸಾರ ಮಾಡಿದ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ನಡೆಸಿದ್ದವನನ್ನು ಗಂಡ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹಾಡ ಹಗಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. 27 ವರ್ಷದ ಮಹೇಶ್ ಮೃತ ಯುವಕನಾಗಿದ್ದು, 32 ವರ್ಷದ ಗಿರೀಶ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಹೆಡಿಯಾಲ ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗದಲ್ಲೇ ಈ ಘಟನೆ ನಡೆದಿದ್ದು, ಮಹೇಶ್ ಆಟೋದಲ್ಲಿ ಕುಳಿತಿದ್ದ ವೇಳೆ ಗಿರೀಶ್ ಏಕಾಏಕಿ ಹಿಂದಿನಿಂದ ಬಂದು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಮಹೇಶ್ ತಲೆ ಹಾಗೂ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಮಾಜಿ ಪತಿಗಾಗಿ ಎರಡನೇ ಪತಿ ಮನೆಯಲ್ಲಿಯೇ ದರೋಡೆ, ಲಕ್ಷಾಂತರ ಹಣ-ಚಿನ್ನ ಕದ್ದು ಓಡಿ
ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಮಹೇಶನನ್ನು ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಮೈಸೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮಹೇಶ್ ಸಾವನ್ನಪ್ಪಿದ್ದಾನೆ. ಮಾಹೇಶ್‌ನನ್ನು ಕೊಂದ ಗಿರೀಶ್ ನೇರವಾಗಿ ಮಚ್ಚಿನೊಂದಿಗೆ ತೆರಳಿ ಹುಲ್ಲಹಳ್ಳಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಕೊನೆಯಾದ ಗಿರೀಶ್ ಹೆಡಿಯಾಲ ಗ್ರಾಮದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೊಲೆ ಮಾಡಿದ ಗಿರೀಶ್ ಅದೇ ಗ್ರಾಮದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ. ಆತನನ್ನು ಕೊಲೆ ಮಾಡಲು ತನ್ನ ಪತ್ನಿ ಜೊತೆಗೆ ಹೊಂದಿದ್ದ ಅನೈತಿಕ ಸಂಭಂದವೇ ಕಾರಣ ಎಂದು ಹೇಳಿದ್ದಾನೆ.
VIJAYAPURA: ನಂದಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ ಪ್ರಕರಣ, ಓರ್ವ ಬಲಿ, ಐವರ ಸ್ಥಿತಿ ಚಿಂತಾಜನಕ!
ಆದರೆ ಗಿರೀಶ್ ಪತ್ನಿ ವಿಜಯ ಮಾತ್ರ ಮಹೆಶ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾಳೆ. ಹತ್ತು ವರ್ಷಗಳ ಹಿಂದೆ ಗಿರೀಶ್ ಮದುವೆಯಾಗಿದ್ದ ತನಗೆ ಎರಡು ಮಕ್ಕಳಿದ್ದು, ತನ್ನ ಪತಿ ಗಿರೀಶ್ ವಿಚ್ಚೇದನ ಬಯಸಿ 8 ತಿಂಗಳಿಂದ ತವರಿಗೆ ಕಳುಹಿಸಿದ್ದಾನೆ ಎಂದು ಹೇಳಿದ್ದಾಳೆ. ಒಟ್ಟಾರೆ ಸುಖ ಸಂಸಾರದಲ್ಲಿ ವಿರಸ ಬರಲು ಮಹೇಶ್ ಕಾರಣವಾಗಿದ್ದು, ಕೋಪದ ಕೈಗೆ ಬುದ್ದಿಕೊಟ್ಟ ಗಿರೀಶ್ ಮಾತ್ರ ಕೊಲೆ ಮಾಡಿ ಜೈಲು ಸೇರುವಂತಾಗಿದೆ.